ನವದೆಹಲಿ: ಎಎಪಿ ಶಾಸಕರು ಬಿಜೆಪಿ ಸೇರಲು ತಲಾ 20 ಕೋಟಿ ರೂಪಾಯಿ ಆಫರ್ ನೀಡಲಾಗಿದೆ. ಆದರೆ, ಅದನ್ನು ನಮ್ಮ ಶಾಸಕರು ಒಪ್ಪಿಲ್ಲ ಎಂಬುದು ಖುಷಿಯ ವಿಚಾರ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಆಪ್ ಶಾಸಕರಿಗೆ ಬಿಜೆಪಿ ಸೇರಲು ಹಣದ ಆಮಿಷ ಒಡ್ಡಲಾಗುತ್ತಿದೆ. ಎಎಪಿ ತೊರೆಯಲು ಬಿಜೆಪಿ ತಲಾ 20 ಕೋಟಿ ರೂಪಾಯಿ ನೀಡುತ್ತಿದೆ ಎಂಬ ಸುದ್ದಿ ನನಗೆ ಸಿಕ್ಕಿದೆ ಎಂದು ಆರೋಪಿಸಿದರು.
ಬಿಜೆಪಿ ನೀಡಿದ ಆಫರ್ ಅನ್ನು ಪಕ್ಷದ ಯಾವೊಬ್ಬ ಶಾಸಕರೂ ಸಹ ಒಪ್ಪದಿರುವುದು ನನಗೆ ತುಂಬಾ ಸಂತೋಷವಾಗಿದೆ. ಜನರು ಪ್ರಾಮಾಣಿಕ ಪಕ್ಷಕ್ಕೆ ಮತ ಹಾಕಿದ್ದೀರಿ. ಅದನ್ನು ನಾವು ಉಳಿಸಿಕೊಳ್ಳುತ್ತೇವೆ. ಸಾಯುತ್ತೇವೆಯೇ ವಿನಃ ಜನರಿಗೆ ಎಂದಿಗೂ ದ್ರೋಹ ಮಾಡುವುದಿಲ್ಲ ಎಂದು ಹೇಳಿದರು.
ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ಬಿಜೆಪಿಗೆ ಬರಲು ಸಂದೇಶ ರವಾನಿಸಲಾಗಿದೆ. ಆಪ್ ಮತ್ತು ನನ್ನನ್ನು ತೊರೆಯುವಂತೆ ಸೂಚಿಸಲಾಗಿದೆ. ಇತರ ಕೆಲವು ಶಾಸಕರೊಂದಿಗೆ ಬಿಜೆಪಿ ಸೇರಬೇಕೆಂದು ಹೇಳಲಾಗಿದೆ. ದೆಹಲಿ ಸಿಎಂ ಸ್ಥಾನದ ಆಫರ್ ಕೂಡ ನೀಡಲಾಗಿತ್ತು ಎಂದು ಕೇಜ್ರಿವಾಲ್ ಆರೋಪಿಸಿದರು.
ಓದಿ: ಪ್ಲಾಸ್ಟಿಕ್ ಕವರ್ನಲ್ಲಿ ಗಂಡು ಮಗುವನ್ನಿಟ್ಟು ಮರಕ್ಕೆ ನೇತು ಹಾಕಿದ ತಾಯಿ