ಉರಿ (ಜಮ್ಮು -ಕಾಶ್ಮೀರ): ಬಾರಾಮುಲ್ಲಾ ಜಿಲ್ಲೆಯ ಉರಿ ಪಟ್ಟಣದ ರಾಂಪುರ ಸೆಕ್ಟರ್‌ನಲ್ಲಿ ಇಂದು ಭಯೋತ್ಪಾದಕರು ಮತ್ತು ಸೇನಾ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಮೂವರು ಉಗ್ರರನ್ನು ಭಾರತೀಯ ಸೇನೆ ಸದೆಬಡಿದಿದೆ.
ವರದಿಗಳ ಪ್ರಕಾರ, ಹತ್ಯೆಗೀಡಾದ ಈ ಉಗ್ರರು ಇತ್ತೀಚೆಗೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ ಭಾರತಕ್ಕೆ ನುಸುಳಿ ಬಂದಿದ್ದರು. ಮೃತ ಉಗ್ರರಿಂದ ಐದು ಎಕೆ -47 ಗನ್, ಎಂಟು ಪಿಸ್ತೂಲ್ ಮತ್ತು 70 ಹ್ಯಾಂಡ್ ಗ್ರೆನೇಡ್ ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರ-ಮದ್ದುಗುಂಡುಗಳನ್ನು ಸೇನೆ ವಶಕ್ಕೆ ಪಡೆದಿದೆ.
-
A movement was observed in Hathlanga forest early this morning. The attempt was eliminated, with neutralization of 3 terrorists... A similar attempt was made on (September) 18, which was foiled: Lt Gen DP Pandey, General Officer Commanding (GOC), Srinagar's Chinar Corps(15 Corps) pic.twitter.com/V7j5ZAbFun
— ANI (@ANI) September 23, 2021 " class="align-text-top noRightClick twitterSection" data="
">A movement was observed in Hathlanga forest early this morning. The attempt was eliminated, with neutralization of 3 terrorists... A similar attempt was made on (September) 18, which was foiled: Lt Gen DP Pandey, General Officer Commanding (GOC), Srinagar's Chinar Corps(15 Corps) pic.twitter.com/V7j5ZAbFun
— ANI (@ANI) September 23, 2021A movement was observed in Hathlanga forest early this morning. The attempt was eliminated, with neutralization of 3 terrorists... A similar attempt was made on (September) 18, which was foiled: Lt Gen DP Pandey, General Officer Commanding (GOC), Srinagar's Chinar Corps(15 Corps) pic.twitter.com/V7j5ZAbFun
— ANI (@ANI) September 23, 2021
ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ 60-70 ಪಾಕ್ ಉಗ್ರರು ಸಕ್ರಿಯ: ಲೆ.ಜನರಲ್ ಡಿ.ಪಿ.ಪಾಂಡೆ
ಈ ಬಗ್ಗೆ ಪ್ರತಿಕ್ರಿಯಿಸಿರುವ ಲೆಫ್ಟಿನೆಂಟ್ ಜನರಲ್ ಡಿ.ಪಿ.ಪಾಂಡೆ, ಇಂದು ಮುಂಜಾನೆ ರಾಂಪುರ ವಲಯದ ಹತ್ಲಾಂಗ್ ಅರಣ್ಯದಲ್ಲಿ ಅನುಮಾನಾಸ್ಪದ ಚಲನವಲನವನ್ನು ಸೇನಾ ಸಿಬ್ಬಂದಿ ಗಮನಿಸಿದ್ದಾರೆ. ತಕ್ಷಣವೇ ಕಾರ್ಯಪ್ರವೃತರಾದ ಸೇನಾ ಪಡೆ, ಮೂವರು ಉಗ್ರರನ್ನು ಹೊಡೆದುರುಳಿಸಿದೆ ಎಂದು ತಿಳಿಸಿದರು.