ಹರಿದ್ವಾರ (ಉತ್ತರಾಖಂಡ): ಹರಿದ್ವಾರದ ಹರ್ ಕಿ ಪೌರಿಯಲ್ಲಿ ಇಂದು ಮಧ್ಯಾಹ್ನ ಶತಮಾನಗಳಷ್ಟು ಹಳೆಯದಾದ ಪ್ರಾಚೀನ ಮೆಟ್ಟಿಲುಗಳು ಪತ್ತೆಯಾಗಿವೆ.
ಮುಂದಿನ ವರ್ಷ (2021) ಹರಿದ್ವಾರದಲ್ಲಿ ಕುಂಭಮೇಳ ನಡೆಸಲು ತಯಾರಿ ಮಾಡಿಕೊಳ್ಳಲಾಗುತ್ತಿದ್ದು ಈ ಹಿನ್ನೆಲೆ ಹರ್ ಕಿ ಪೌರಿಯಲ್ಲಿ ಜೀರ್ಣೋದ್ಧಾರ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ನವೀಕರಣ ಮಾಡುತ್ತಿದ್ದ ವೇಳೆ ಶತಮಾನಗಳಷ್ಟು ಹಳೆಯದಾದ ಪ್ರಾಚೀನ ಮೆಟ್ಟಿಲುಗಳು ಪತ್ತೆಯಾಗಿವೆ. ಮೆಟ್ಟಿಲುಗಳಲ್ಲಿ ಪ್ರಾಚೀನ ಭಾಷೆಯ ಲಿಪಿಗಳನ್ನು ಕೆತ್ತಲಾಗಿದ್ದು ಅಪರೂಪದ ಈ ಪ್ರಾಚೀನ ಮೆಟ್ಟಿಲುಗಳನ್ನು ನೋಡಿ ಸ್ಥಳೀಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಧಾರ್ಮಿಕ ನಗರಿಯಲ್ಲಿ ಮುಂದಿನ ವರ್ಷ ಪ್ರಾರಂಭವಾಗಲಿರುವ ಕುಂಭಮೇಳಕ್ಕೆ ಹಲವು ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಕೊರೊನಾ ಹಿನ್ನೆಲೆ ಈ ಸಿದ್ಧತೆ ನಿಧಾನಗತಿ ಪಡೆದಿದ್ದು ಹರ್ ಕಿ ಪೌರಿಯಲ್ಲಿ ಇಂದು ಜೀರ್ಣೋದ್ಧಾರ ಕಾಮಗಾರಿಗಳನ್ನು ನಡೆಸುತ್ತಿದ್ದಾಗ ಈ ಪ್ರಾಚೀನ ಮೆಟ್ಟಿಲು ಪತ್ತೆಯಾಗಿವೆ.
ಪ್ರಾಚೀನ ಮೆಟ್ಟಿಲುಗಳು ಪತ್ತೆ ಇದೀಗ ಚರ್ಚಾ ವಿಷಯವಾಗಿದೆ. ಸ್ಥಳಕ್ಕೆ ಬಂದ ಶ್ರೀ ಗಂಗಾ ಸಭೆಯ ಅಧಿಕಾರಿಗಳು ಪರಿಶೀಲನೆ ನಡೆಸಿ ಭಾರತೀಯ ಪುರಾತತ್ವ ಸರ್ವೇಕ್ಷಣಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಅಧಿಕಾರಿಗಳು ಇದೀಗ ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದಾರೆ.
ಭಾರತೀಯ ಪುರಾತತ್ವ ಸರ್ವೇಕ್ಷಣಾಧಿಕಾರಿಗಳು ನೀಡಿದ ಮಾಹಿತಿ ಹಿನ್ನೆಲೆ ಇಂದು ಪತ್ತೆಯಾದ ಪಾಚೀನ ಮೆಟ್ಟಿಲುಗಳಿಗೆ 100 ರಿಂದ 150 ವರ್ಷಗಳಷ್ಟು ಇತಿಹಾಸವಿದೆಯಂತೆ. ಹಾಗಾಗಿ ಅವುಗಳ ಸಂರಕ್ಷಣೆ ಮಾಡಲಾಗುತ್ತದೆ ಎಂದು ಶ್ರೀಗಂಗಾ ಸಭೆಯ ಪ್ರಧಾನ ಕಾರ್ಯದರ್ಶಿ ತನ್ಮಯ್ ವಶಿಷ್ಟ್ ತಿಳಿಸಿದ್ದಾರೆ.
ಅಪರೂಪದ ಈ ಪ್ರಾಚೀನ ಮೆಟ್ಟಿಲುಗಳ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.