ETV Bharat / bharat

ಭಾರತ್ ಬಯೋಟೆಕ್‌ನಲ್ಲಿ ಕೊವ್ಯಾಕ್ಸಿನ್‌ ಬಗ್ಗೆ ವಿದೇಶಿ ರಾಯಭಾರಿಗಳಿಗೆ ಮಾಹಿತಿ

author img

By

Published : Dec 9, 2020, 4:20 PM IST

ಸುಮಾರು 64 ರಾಷ್ಟ್ರಗಳ ರಾಯಭಾರಿಗಳು ಹಾಗೂ ಹೈಕಮೀಷನರ್​ಗಳು ಹೈದರಾಬಾದ್​ನ ಭಾರತ್ ಬಯೋಟೆಕ್ ಲಸಿಕಾ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿದ್ದಾರೆ.

Bharath Biotech
ಕೋವ್ಯಾಕ್ಸಿನ್​

ಹೈದರಾಬಾದ್​: ದೇಶದಲ್ಲಿ ಹಲವಾರು ಕೊರೊನಾ ಲಸಿಕೆಗಳ ಸಂಶೋಧನೆ ನಡೆಯುತ್ತಿದೆ. ಹೈದರಾಬಾದ್​ನಲ್ಲಿ ಕೋವ್ಯಾಕ್ಸಿನ್ ಸಂಶೋಧನೆ ನಡೆಯುತ್ತಿದ್ದು, ಈ ಸಂಶೋಧನಾ ಕೇಂದ್ರಕ್ಕೆ ಸುಮಾರು 64 ದೇಶಗಳ ರಾಯಭಾರಿಗಳು ಹಾಗೂ ಹೈಕಮೀಷನರ್​ಗಳು ಭಾರತ್ ಬಯೋಟೆಕ್​ಗೆ ಭೇಟಿ ನೀಡಿದ್ದಾರೆ.

ಭಾರತ್​ ಬಯೋಟೆಕ್​ಗೆ ಅವರು ಭೇಟಿ ನೀಡಿದ್ದು, ಸಂಸ್ಥೆಯ ಸಿಎಂಡಿ ಕೃಷ್ಣ ಎಲ್ಲ ಕೋವ್ಯಾಕ್ಸಿನ್ ಬಗ್ಗೆ ರಾಯಭಾರಿಗಳು ಹಾಗೂ ಹೈಕಮೀಷನರ್​ಗಳಿಗೆ ಮಾಹಿತಿ ನೀಡಿದ್ದಾರೆ. ಬಂದಿದ್ದ ವಿದೇಶಿ ಪ್ರಜೆಗಳು ಕೋವ್ಯಾಕ್ಸಿನ್ ಬಗ್ಗೆ ವಿಶ್ಲೇಷಣೆ ನಡೆಸಿದ್ದಾರೆ.

ಓದಿ: ಕೋವಿಡ್‌ ಲಸಿಕೆ 'ಇಂಟ್ರಾನಾಸಲ್' ಮೊದಲ ಹಂತದ ಪ್ರಯೋಗ ಮುಂದಿನ ತಿಂಗಳು ಶುರು

ವಿದೇಶಾಂಗ ವ್ಯವಹಾರಗಳ ಸಚಿವಾಲಯವು ವಿದೇಶಿ ಜನಪ್ರತಿನಿಧಿಗಳಿಗೆ ಭಾರತ್ ಬಯೋಟೆಕ್ ಭೇಟಿಗಾಗಿ ವ್ಯವಸ್ಥೆ ಮಾಡಿತ್ತು. ವಿದೇಶಿ ಪ್ರತಿನಿಧಿಗಳ ಎರಡು ಬ್ಯಾಚ್‌ಗಳು ಲಸಿಕೆಯ ಪ್ರಗತಿಯ ಬಗ್ಗೆ ಅಧ್ಯಯನ ಮಾಡಲಿವೆ. ಪ್ರಧಾನಿ ಮೋದಿ ಅವರು 10 ದಿನಗಳ ಹಿಂದೆ ಭಾರತ್ ಬಯೋಟೆಕ್​ಗೆ ಭೇಟಿ ನೀಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.