ETV Bharat / bharat

Live in relation: ಕಾಲಕ್ಕೆ ತಕ್ಕಂತೆ ಸಹಜೀವನ ಸಂಗಾತಿ ಬದಲಿಸುವುದು ಸಮಾಜಕ್ಕೆ ಮಾರಕ; ಅಲಹಾಬಾದ್​ ಹೈಕೋರ್ಟ್​ - ಸಹಜೀವನ

ಸಹಜೀವನದ ಬಗ್ಗೆ ಅಲಹಾಬಾದ್​ ಹೈಕೋರ್ಟ್​ ಮಹತ್ವದ ಹೇಳಿಕೆ ನೀಡಿದೆ. ಇಂತಹ ಸಂಬಂಧಗಳು ಭಾರತಕ್ಕೆ ತಕ್ಕುದಲ್ಲ. ಋತುಮಾನಕ್ಕೆ ತಕ್ಕಂತೆ ಸಂಗಾತಿಯನ್ನೂ ಬದಲಿಸುವುದು ಸ್ವೇಚ್ಛಾಚಾರ ಎಂದು ಟೀಕಿಸಿದೆ.

ಅಲಹಾಬಾದ್​ ಹೈಕೋರ್ಟ್​
ಅಲಹಾಬಾದ್​ ಹೈಕೋರ್ಟ್​
author img

By ETV Bharat Karnataka Team

Published : Sep 2, 2023, 5:38 PM IST

ಪ್ರಯಾಗ್​ರಾಜ್​ : ಋತುಮಾನಗಳು ಬದಲಾದಂತೆ ಲಿವ್​ ಇನ್​ ಗೆಳೆಯ/ಗೆಳತಿಯನ್ನು ಬದಲಿಸುವುದು ಸುಸಂಸ್ಕೃತ ಸಮಾಜಕ್ಕೆ ಒಳ್ಳೆಯದಲ್ಲ. ಇಂತಹ ಸಂಬಂಧಗಳಿಗೆ ಸಮಾಜದಲ್ಲಿ ಮನ್ನಣೆ ಇಲ್ಲ. ಇವುಗಳು ದೇಶದಲ್ಲಿ ಆಳವಾಗಿ ಬೇರುಬಿಟ್ಟಿರುವ ವೈವಾಹಿಕ ಸಂಬಂಧಗಳಿಗೆ ಮಾರಕ ಎಂದು ಅಲಹಾಬಾದ್​ ಹೈಕೋರ್ಟ್​ ಹೇಳಿದೆ.

ಲಿವ್ ಇನ್​ ರಿಲೇಷನ್​ಶಿಪ್​ನಲ್ಲಿದ್ದು ಗರ್ಭಿಣಿಯನ್ನಾಗಿ ಮಾಡಿದ ವ್ಯಕ್ತಿ ಮೇಲೆ ಯುವತಿ ಅತ್ಯಾಚಾರ ದೂರು ನೀಡಿದ ಪ್ರಕರಣದ ವಿಚಾರಣೆಯ ವೇಳೆ ಕೋರ್ಟ್​ ಈ ಹೇಳಿಕೆ ನೀಡಿದ್ದು, ಲಿವ್ ಇನ್ ರಿಲೇಶನ್​ಶಿಪ್​ಗಳು ಪಾಶ್ಚಿಮಾತ್ಯ ರಾಷ್ಟ್ರಗಳ ಸಂಸ್ಕೃತಿಯಾಗಿದೆ. ಇದಕ್ಕೆ ನಮ್ಮಲ್ಲಿ ಮನ್ನಣೆ ಇಲ್ಲ. ಕೆಲ ಸಿನಿಮಾ, ಟಿವಿ ಧಾರಾವಾಹಿಗಳು ಸಮಾಜದಲ್ಲಿ ಇಂತಹದ್ದನ್ನು ಹರಡುತ್ತಿವೆ. ಋತುಮಾನ ಬದಲಾದಂತೆ ಲಿವ್​ ಇನ್​ ಸಂಗಾತಿಯನ್ನೂ ಬದಲಾಯಿಸುವುದು ಸ್ಥಿರ ಮತ್ತು ಸುಸಂಸ್ಕೃತ ಸಮಾಜಕ್ಕೆ ಒಳ್ಳೆಯದಲ್ಲ ನ್ಯಾಯಮೂರ್ತಿ ಸಿದ್ಧಾರ್ಥ್ ಅವರಿದ್ದ ಪೀಠ ಹೇಳಿದೆ.

ಲಿವ್​​ಇನ್​ ವೈವಾಹಿಕ ಸಂಬಂಧಕ್ಕೆ ಸಮವಲ್ಲ: ವ್ಯಕ್ತಿಗೆ ವೈವಾಹಿಕ ಜೀವನ ನೀಡುವ ಸಾಮಾಜಿಕ ಭದ್ರತೆ, ಸ್ಥಿರತೆ ಸಹಜೀವನ ನೀಡುವುದಿಲ್ಲ. ಲಿವ್​ ಇನ್​ ಅನ್ನು ವೈವಾಹಿಕ ಜೀವನಕ್ಕೆ ಸಮಾನ ಎಂದು ಭಾವಿಸುವುದೂ ತಪ್ಪು. ಕಾಲಮಾನಕ್ಕೆ ತಕ್ಕಂತೆ ಸಂಗಾತಿಯನ್ನೂ ಬದಲಿಸುವುದು ಸ್ಥಿರ ಮತ್ತು ಆರೋಗ್ಯವಂತ ಸಮಾಜದ ಗುರುತು ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.

ವಿದೇಶಗಳಲ್ಲಿ ವೈವಾಹಿಕ ಸಂಬಂಧಗಳನ್ನು ಉಳಿಸಿಕೊಳ್ಳಲು ಜನರು ಹೆಣಗಾಡುತ್ತಿದ್ದಾರೆ. ಅದರ ಪರ್ಯಾಯವಾಗಿ ಸಹಜೀವನವನ್ನು ಆರಿಸಿಕೊಂಡಿದ್ದಾರೆ. ಆದರೆ, ಅದು ಭಾರತದ ನೆಲಕ್ಕೆ ಒಗ್ಗುವುದಿಲ್ಲ. ಇಲ್ಲಿಯ ರೀತಿ ರಿವಾಜುಗಳೇ ಬೇರೆ. ಸಾಮಾಜಿಕ ಸಂಬಂಧಗಳು ಬೇರೆ ಕಡೆಗಿಂತಲು ಇಲ್ಲಿ ಗಟ್ಟಿ ಎಂದು ಕೋರ್ಟ್​ ಹೇಳಿದೆ.

ಮದುವೆ ಸಂಬಂಧಗಳಲ್ಲಿ ಸಂಗಾತಿಗೆ ದಾಂಪತ್ಯ ದ್ರೋಹ ಎಸಗುವುದು ಮತ್ತು ಮುಕ್ತವಾದ ಲಿವ್​ ಇನ್​ ಸಂಬಂಧ ಹೊಂದುವುದು ಪ್ರಗತಿಪರ ಸಮಾಜದ ಸಂಕೇತ ಎಂಬಂತೆ ಬಿಂಬಿಸಲಾಗುತ್ತಿದೆ. ಮುಂದುವರಿದ ಯುವಜನತೆ ಅದರ ದೀರ್ಘಾವಧಿಯ ಪರಿಣಾಮಗಳ ಬಗ್ಗೆ ಅರಿವಿಲ್ಲದೇ, ಇಂತಹ ಸಂಬಂಧದ ಮೇಲೆ ವ್ಯಾಮೋಹ ಹೆಚ್ಚಿಸಿಕೊಂಡಿದೆ ಎಂದು ನ್ಯಾಯಾಧೀಶರು ಹೇಳಿದರು.

ಪ್ರಕರಣವೇನು?: ಸಹರಾನ್​ಪುರದ ವ್ಯಕ್ತಿಯೊಬ್ಬ ಒಂದು ವರ್ಷ ಸಹಮತದ ಸಂಬಂಧದಲ್ಲಿದ್ದ 19 ವರ್ಷದ ಯುವತಿಯನ್ನು ಗರ್ಭಿಣಿಯನ್ನಾಗಿ ಮಾಡಿದ್ದು, ವಿವಾಹಕ್ಕೆ ಒತ್ತಾಯಿಸಿದಾಗ ನಿರಾಕರಿಸಿದ್ದಾನೆ. ಇದರ ವಿರುದ್ಧ ಯುವತಿ ಕೋರ್ಟ್​ ಮೆಟ್ಟಿಲೇರಿದ್ದಾಳೆ. ತನ್ನ ಮೇಲೆ ಸಂಗಾತಿ ಅತ್ಯಾಚಾರ ಮಾಡಿದ್ದಾನೆ ಎಂದು ಆಕೆ ಆರೋಪಿಸಿ ದೂರು ನೀಡಿದ್ದಾಳೆ. ಇದರ ವಿಚಾರಣೆ ನಡೆಸುತ್ತಿರುವ ಕೋರ್ಟ್​ ಸಹಜೀವನದ ಬಗ್ಗೆ ಮಹತ್ವದ ಹೇಳಿಕೆಗಳನ್ನು ನೀಡಿದೆ. ಬಳಿಕ ವ್ಯಕ್ತಿಗೆ ಷರತ್ತುಗಳ ಮೇಲೆ ಜಾಮೀನು ಮಂಜೂರು ಮಾಡಿದೆ.

ಇದನ್ನೂ ಓದಿ: ಜಾಮೀನು ನಿರಾಕರಿಸುವ ಬದಲು ಮಂಜೂರು ಮಾಡಿ ತನಿಖೆಗೆ ಸಹಕರಿಸಲು ಷರತ್ತು ವಿಧಿಸುವುದು ಸೂಕ್ತ: ಹೈಕೋರ್ಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.