ನಾಸಿರಾಬಾದ್ (ಅಜ್ಮೀರ್): ಸದರ್ ಪೊಲೀಸ್ ಠಾಣೆ ವ್ಯಾಪ್ತಿಯ ನಂದ್ಲಾ ಗ್ರಾಮದ ಬಳಿಯ ನದಿಯಲ್ಲಿ ಮೂರ್ತಿ ನಿಮಜ್ಜನಕ್ಕೆ ಹೋದಾಗ ನೀರಿನಲ್ಲಿ ಮುಳುಗಿ ಐವರು ಸಾವಿಗೀಡಾಗಿದ್ದಾರೆ. ಅಮ್ಮನವರ ಮೂರ್ತಿಯ ನಿಮಜ್ಜನ ವೇಳೆ ಈ ಅವಘಡ ಸಂಭವಿಸಿದೆ. ಘಟನಾ ಸ್ಥಳಕ್ಕೆ ಎಸ್ಪಿ ಚುನಾರಾಮ್ ಜಾಟ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಗ್ರಾಮಸ್ಥರ ನೆರವಿನಿಂದ ಎಲ್ಲರ ಮೃತದೇಹಗಳನ್ನು ನಾಸಿರಾಬಾದ್ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ. ಉಪವಿಭಾಗಾಧಿಕಾರಿ ರಾಕೇಶ್ ಗುಪ್ತಾ ಮಾತನಾಡಿ, ಮೃತ ಐದು ಜನರ ಕುಟುಂಬಸ್ಥರಿಗೆ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದರು.
-
अजमेर में नसीराबाद क्षेत्र के नांदला ग्राम में मूर्ति विसर्जन के दौरान पानी में डूबने से 5 लोगों की मृत्यु बेहद दुखद है। शोकाकुल परिजनों के प्रति मैं गहरी संवेदनाएं व्यक्त करता हूँ, ईश्वर उन्हें यह आघात सहने की शक्ति प्रदान करें एवं दिवंगतों की आत्मा को शांति प्रदान करें।
— Ashok Gehlot (@ashokgehlot51) October 5, 2022 " class="align-text-top noRightClick twitterSection" data="
">अजमेर में नसीराबाद क्षेत्र के नांदला ग्राम में मूर्ति विसर्जन के दौरान पानी में डूबने से 5 लोगों की मृत्यु बेहद दुखद है। शोकाकुल परिजनों के प्रति मैं गहरी संवेदनाएं व्यक्त करता हूँ, ईश्वर उन्हें यह आघात सहने की शक्ति प्रदान करें एवं दिवंगतों की आत्मा को शांति प्रदान करें।
— Ashok Gehlot (@ashokgehlot51) October 5, 2022अजमेर में नसीराबाद क्षेत्र के नांदला ग्राम में मूर्ति विसर्जन के दौरान पानी में डूबने से 5 लोगों की मृत्यु बेहद दुखद है। शोकाकुल परिजनों के प्रति मैं गहरी संवेदनाएं व्यक्त करता हूँ, ईश्वर उन्हें यह आघात सहने की शक्ति प्रदान करें एवं दिवंगतों की आत्मा को शांति प्रदान करें।
— Ashok Gehlot (@ashokgehlot51) October 5, 2022
ಮುಖ್ಯಮಂತ್ರಿ ಸಂತಾಪ: ಘಟನೆಗೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಸಿಎಂ ಅಶೋಕ್ ಗೆಹ್ಲೋಟ್ ಸಂತಾಪ ಸೂಚಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಅಜ್ಮೀರ್‌ನ ನಾಸಿರಾಬಾದ್ ಪ್ರದೇಶದ ನಂದ್ಲಾ ಗ್ರಾಮದಲ್ಲಿ ವಿಗ್ರಹ ನಿಮಜ್ಜನ ವೇಳೆ ನೀರಿನಲ್ಲಿ ಮುಳುಗಿ 5 ಮಂದಿ ಸಾವಿಗೀಡಾಗಿರುವ ಘಟನೆ ತುಂಬಾ ದುಃಖ ತಂದಿದೆ.
ಮೃತರ ಕುಟುಂಬಕ್ಕೆ ನನ್ನ ತೀವ್ರ ಸಂತಾಪ ವ್ಯಕ್ತಪಡಿಸುತ್ತೇನೆ. ದೇವರು ಅವರಿಗೆ ಈ ನಷ್ಟವನ್ನು ಭರಿಸುವ ಶಕ್ತಿ ನೀಡಲಿ ಮತ್ತು ಅಗಲಿದವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ನೀರಿನಲ್ಲಿ ಮುಳುಗಿ ಐವರು ಬಾಲಕಿಯರು ಸಾವು; ನಾಲ್ವರ ಮೃತದೇಹ ಹೊರತೆಗೆದ ಪೊಲೀಸರು