ETV Bharat / bharat

ದಿದಿ ಕೆ ಬೋಲೋ ಯೋಜನೆ: ಐದು ವರ್ಷಗಳ ಬಳಿಕ ತಮ್ಮ ಕುಟುಂಬ ಸೇರಿದ ಮಹಿಳೆ!

ಕಾಣೆಯಾಗಿದ್ದ ಮಹಿಳೆಯೊಬ್ಬರು ಐದು ವರ್ಷಗಳ ಬಳಿಕ ದಿದಿ ಕೆ ಬೋಲೋ ಯೋಜನೆಯ ಮೂಲಕ ತಮ್ಮ ಕುಟುಂಬ ಸೇರಿದ ಘಟನೆ ಪಶ್ಚಿಮಬಂಗಾಳದಲ್ಲಿ ವರದಿಯಾಗಿದೆ.

a-woman-joined-her-family-after-five-years-through-didi-ke-bolo-scheme-in-west-bengal
ದಿದಿ ಕೆ ಬೋಲೋ ಯೋಜನೆ: ಐದು ವರ್ಷಗಳ ಬಳಿಕ ತನ್ನ ಕುಟುಂಬ ಸೇರಿದ ಮಹಿಳೆ!
author img

By ETV Bharat Karnataka Team

Published : Sep 6, 2023, 5:40 PM IST

ಸಿಲಿಗುರಿ(ಪಶ್ಚಿಮಬಂಗಾಳ): ಕಾಣೆಯಾಗಿದ್ದ ಮಹಿಳೆಯೊಬ್ಬರು ಐದು ವರ್ಷಗಳ ಬಳಿಕ ತನ್ನ ಕುಟುಂಬ ಸೇರಿದ ಘಟನೆ ಸಿಲಿಗುರಿ ಬಳಿಯ ಅಂಬಿಕಾನಗರದಲ್ಲಿ ನಡೆದಿದೆ. ತಮ್ಮ ಮಗಳ ಕಂಡು ಭಾವಪರವಶರಾದ ಪೋಷಕರು ಹಾಗೂ ಕುಟುಂಬಸ್ಥರು ದಿದಿ ಕೆ ಬೋಲೋ ಯೋಜನೆಯ ಮೂಲಕ ಮಹಿಳೆಯ ಪತ್ತೆಗೆ ಸಹಕರಿಸಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಏನಿದು ಘಟನೆ: ಸಿಲಿಗುರಿ ಬಳಿಯ ಅಂಬಿಕಾನಗರ ನಿವಾಸಿ ರುಂಪಾ ಮಜುಂದಾರ್ ಐದು ವರ್ಷಗಳ ಹಿಂದೆ 2018ರಲ್ಲಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು. ಆಗ ರುಂಪಾಗೆ 30 ವರ್ಷ ವಯಸ್ಸಾಗಿತ್ತು. ರುಂಪಾ ಸಿಲಿಗುರಿಯ ವ್ಯಕ್ತಿಯೊಂದಿಗೆ ವಿವಾಹವಾಗಿದ್ದರು. ಇವರಿಗೆ 10 ವರ್ಷದ ಮಗನೂ ಇದ್ದಾನೆ. ಆದರೆ ಮಹಿಳೆ, ಕೌಟುಂಬಿಕ ಕಲಹದಿಂದಾಗಿ ತನ್ನ ಪತಿಯಿಂದ ದೂರವಾಗಿದ್ದರು. ತದನಂತರ ಮಹಿಳೆ ಕಾಣೆಯಾಗಿದ್ದರು.

ಘಟನೆ ನಂತರ ಕುಟುಂಬಸ್ಥರು ಮತ್ತು ಸ್ನೇಹಿತರು ಎಲ್ಲೆಡೆ ಹುಡುಕಾಡಿದರೂ ಮಹಿಳೆಯ ಗುರುತು ಪತ್ತೆಯಾಗಿರಲಿಲ್ಲ. ನಂತರ ಕುಟುಂಬಸ್ಥರು ನ್ಯೂ ಜಲ್ಪೈಗುರಿ ಪೊಲೀಸ್ ಠಾಣೆಯಲ್ಲಿ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು. ಆದರೆ, ಅವರ ಈ ಪ್ರಯತ್ನವೂ ವ್ಯರ್ಥವಾಗಿತ್ತು. ರುಂಪಾ ಅವರ ತಾಯಿ ಕಾಜಲ್ ಮಲಕರ್ ಮತ್ತು ತಂದೆ ಗಜನ್ ಮಲಕರ್ ಕಳೆದ ಐದು ವರ್ಷಗಳಿಂದ ಮಗಳಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದರು. ಆದರೆ, ಅವರಿಗೆ ಮಗಳು ಬದುಕಿದ್ದಾಳೆಯೇ, ಇಲ್ಲವೇ ಎಂಬ ಬಗ್ಗೆ ಸಣ್ಣ ಮಾಹಿತಿಯೊ ಸಿಕ್ಕಿರಲಿಲ್ಲ.

ಮಹಿಳೆಯ ಪೋಷಕರಿಂದ ಸಿಎಂ ಮಮತಾ ಬ್ಯಾನರ್ಜಿ ಭೇಟಿ: ಬೇರೆ ದಾರಿಯಿಲ್ಲದೇ, ರುಂಪಾ ಅವರ ಪೋಷಕರು ಪೈಲಟ್ ಯೋಜನೆ ದಿದಿ ಕೆ ಬೋಲೋ ಕಾರ್ಯಕ್ರಮದ ಮೂಲಕ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿದ್ದರು. ಮಾರ್ಚ್​ನಲ್ಲಿ ರುಂಪಾ ಅವರ ಹಿರಿಯ ಸಹೋದರ ಮಹಾದೇವ್ ಮಲಕರ್ ಅವರು ರಾಜ್ಯದ ಜನರಿಗೆ ಸಹಾಯ ಮಾಡಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರೂಪಿಸಿರುವ ದಿದಿ ಕೆ ಬೋಲೋ ಪೋರ್ಟಲ್​ನಲ್ಲಿ ರುಂಪಾ ಕಾಣೆಯಾಗಿರುವ ದೂರು ದಾಖಲಿಸಿದ್ದರು. ಕುಟುಂಬದವರ ಅಹವಾಲು ಆಲಿಸಿದ ರಾಜ್ಯ ಕಾರ್ಯದರ್ಶಿ ನಾಬಣ್ಣ ತಕ್ಷಣ ಕ್ರಮ ಕೈಗೊಂಡು, ಸಿಲಿಗುರಿ ಪೊಲೀಸ್ ಆಯುಕ್ತ ಅಖಿಲೇಶ್ ಚತುರ್ವೇದಿಗೆ ರುಂಪಾ ಮಜುಂದಾರ್ ನಾಪತ್ತೆ ಪ್ರಕರಣವನ್ನು ಮರು ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರು.

ಅವರ ಸೂಚನೆಯಂತೆ ಸಿಲಿಗುರಿ ಪೊಲೀಸ್ ಆಯುಕ್ತರು ತಕ್ಷಣವೇ ನ್ಯೂ ಜಲ್ಪೈಗುರಿ ಪೊಲೀಸ್ ಠಾಣೆಯ ಠಾಣಾಧಿಕಾರಿಗೆ ರುಂಪಾ ಮಜುಂದಾರ್ ನಾಪತ್ತೆಯಾಗಿರುವ ಸಂಬಂಧ ಶೋಧ ಕಾರ್ಯಾಚರಣೆಯನ್ನು ತ್ವರಿತವಾಗಿ ಪ್ರಾರಂಭಿಸಲು ಆದೇಶಿಸಿದ್ದರು . ಸೂಚನೆಗಳ ಪ್ರಕಾರ ಪೊಲೀಸರು ವಿಶೇಷ ತಂಡವನ್ನು ರಚಿಸಿ, ರುಂಪಾ ಮಜುಂದಾರ್ ಅವರ ಕುಟುಂಬದಿಂದ ಅವರ ಆಧಾರ್ ಕಾರ್ಡ್ ಸಂಖ್ಯೆ ಸೇರಿದಂತೆ ಇತರ ಮಾಹಿತಿಯನ್ನು ಪಡೆದುಕೊಂಡಿದ್ದರು. ಪೊಲೀಸರು ಆ ಆಧಾರ್ ಕಾರ್ಡ್ ಸಂಖ್ಯೆಯೊಂದಿಗೆ ತನಿಖೆ ಪ್ರಾರಂಭಿಸಿದ್ದರು. ನಾಡಿಯಾ ಜಿಲ್ಲೆಯ ನಕಾಶಿಪಾರಾದಲ್ಲಿ ರುಂಪಾ ಮಜುಂದಾರ್ ಅವರ ಆಧಾರ್ ಕಾರ್ಡ್​ನೊಂದಿಗೆ ಬ್ಯಾಂಕ್ ಖಾತೆಯನ್ನು ತೆರೆಯಲಾಗಿದೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ತಕ್ಷಣ ನ್ಯೂ ಜಲ್ಪೈಗುರಿ ಪೊಲೀಸ್ ಠಾಣೆಯ ಪೊಲೀಸರ ತಂಡವು ನಾಡಿಯಾದಲ್ಲಿನ ನಕಾಶಿಪಾರಾಕ್ಕೆ ತೆರಳಿದ್ದರು.

ನಕಾಶಿಪಾರಾದಲ್ಲಿ ಮಹಿಳೆ ಪತ್ತೆ: ನಂತರ ಪೊಲೀಸರು ರುಂಪಾ ಖಾತೆ ತೆರೆದಿರುವ ಬ್ಯಾಂಕ್​ಗೆ ಹೋಗಿ ವಿವರವಾದ ಮಾಹಿತಿಯನ್ನು ಸಂಗ್ರಹಿಸಿ ಮಹಿಳೆಯ ವಾಸವಾಗಿದ್ದ ಮನೆ ತಲುಪಿದ್ದರು. ರುಂಪಾ ಮಜುಂದಾರ್ ತನ್ನ ಮನೆ ಬಾಗಿಲಿಗೆ ಬಂದ ಪೊಲೀಸರನ್ನು ಕಂಡು ಆಶ್ಚರ್ಯಚಕಿತರಾಗಿ, ಐದು ವರ್ಷಗಳ ನಂತರವೂ ಹೆತ್ತವರು ತನ್ನನ್ನು ಹುಡುಕುತ್ತಿದ್ದಾರೆ ಎಂದು ತಿಳಿದು ಕಣ್ಣೀರಿಟ್ಟಿದ್ದಾರೆ. ಮಹಿಳೆ ನಕಾಶಿಪಾರದಲ್ಲಿ ಎರಡನೇ ಮದುವೆಯಾಗಿ ಹೊಸ ಸಂಸಾರ ನಡೆಸಿದ್ದು, ಅವರಿಗೆ ಎರಡು ವರ್ಷದ ಮಗು ಇರುವುದು ಈ ವೇಳೆ ತಿಳಿದು ಬಂದಿದೆ. ಬಳಿಕ ಪೊಲೀಸರು ಮಹಿಳೆಯನ್ನು ಸಿಲಿಗುರಿಗೆ ಕರೆತಂದಿದ್ದಾರೆ. ರುಂಪಾ ಅವರನ್ನು ಪೊಲೀಸರು ನಿನ್ನೆ (ಮಂಗಳವಾರ) ಆಕೆಯ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಇನ್ನು ಮಗಳನ್ನು ಕಂಡ ಪೋಷಕರ ಸಂತೋಷಕ್ಕೆ ಪಾರವೇ ಇರಲಿಲ್ಲ.

ಸಿಲಿಗುರಿ ಪೊಲೀಸ್ ಕಮಿಷನರೇಟ್‌ನ ಹೆಚ್ಚುವರಿ ಉಪ ಪೊಲೀಸ್ ಆಯುಕ್ತ ಸುಭೇಂದ್ರ ಕುಮಾರ್ ಮಾತನಾಡಿ, ದಿದಿಕಿ ಬೋಲೋ ಪೋರ್ಟಲ್‌ನಲ್ಲಿ ಮಹಿಳೆ ಕಾಣೆಯಾಗಿರುವುದರ ಬಗ್ಗೆ ದೂರು ಸಲ್ಲಿಸಲಾಗಿತ್ತು. ನಂತರ ತನಿಖೆ ಪ್ರಾರಂಭವಾಗಿತ್ತು. ಐದೂವರೆ ತಿಂಗಳ ಸತತ ಪ್ರಯತ್ನದ ಬಳಿಕ ನಾಪತ್ತೆಯಾಗಿದ್ದ ನಕಾಶಿಪಾರಾದಿಂದ ಮಹಿಳೆಯನ್ನು ಕರೆತಂದು ಕುಟುಂಬಸ್ಥರಿಗೆ ಒಪ್ಪಿಸಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ: ರಾಜಸ್ಥಾನದ ಪ್ರಿಯಕರನನ್ನು ಭೇಟಿಯಾಗಲು ಬಾಂಗ್ಲಾದಿಂದ ಬಂದ ಹಬೀಬಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.