ಹೈದರಾಬಾದ್ (ತೆಲಂಗಾಣ): ಹೈದರಾಬಾದ್ನ ಬಾಲನಗರದಲ್ಲಿ ದಾರುಣ ಘಟನೆಯೊಂದು ನಡೆದಿದೆ. ಕೇವಲ 400 ರೂ.ಗಾಗಿ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಶ್ರೀನಿವಾಸ್ ಎಂಬಾತನೇ ಕೊಲೆಯಾದ ವ್ಯಕ್ತಿಯಾಗಿದ್ದು, ಕಾಸಿರಾಮ್ ಕೊಲೆ ಆರೋಪಿಯಾಗಿದ್ದಾನೆ. ಇಬ್ಬರು ಕೂಡ ದಿನಗೂಲಿ ಕಾರ್ಮಿಕರಾಗಿದ್ದಾರೆ. ಕೂಲಿ ಹಣದಲ್ಲಿ ಕಾಶಿರಾಮ್ಗೆ ಶ್ರೀನಿವಾಸ್ 400 ರೂಪಾಯಿ ಕಡಿಮೆ ನೀಡಿದ್ದರು ಎಂದು ತಿಳಿದು ಬಂದಿದೆ. ಇದೇ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ನಡೆದಿದೆ.
ರಾತ್ರಿ ನರಸಾಪುರ ಅಡ್ಡರಸ್ತೆಯ ಫುಟ್ಪಾತ್ ಮೇಲೆ ಶ್ರೀನಿವಾಸ್ ಮಲಗಿದ್ದಾಗ ಅಲ್ಲಿಗೆ ಬಂದ ಕಾಸಿರಾಮ್ 400 ರೂ.ಗಾಗಿ ಜಗಳವಾಡಿದ್ದಾನೆ. ಆಗ ಇಬ್ಬರೂ ಕೂಡ ಪರಸ್ಪರ ಹಲ್ಲೆ ಮಾಡಿಕೊಂಡಿದ್ದಾರೆ. ಈ ವೇಳೆ ಕಾಶಿರಾಮ್ ಶ್ರೀನಿವಾಸ್‌ಗೆ ದೊಣ್ಣೆಯಿಂದ ಹೊಡೆದು ಲಾರಿಯ ಕೆಳಗೆ ತಳ್ಳಿದ್ದಾನೆ. ಇದರ ಪರಿಣಾಮ ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಶ್ರೀನಿವಾಸ್ ತಲೆಗೆ ಪೆಟ್ಟು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಬಾಲಾನಗರ ಸರ್ಕಲ್ ಇನ್ಸ್‌ಪೆಕ್ಟರ್ ಭಾಸ್ಕರ್ ತಿಳಿಸಿದ್ದಾರೆ.
ಇದನ್ನೂ ಓದಿ: ನಂಜನಗೂಡು ವಸತಿ ಶಾಲೆಯಲ್ಲಿ ವಿದ್ಯುತ್ ಸ್ಪರ್ಶಿಸಿ ಬಾಲಕ ಸಾವು