ಉತ್ತರಪ್ರದೇಶ: ಸಂತ ಕಬೀರ್ ನಗರ ಜಿಲ್ಲೆಯ ಹೆದ್ದಾರಿ-28 ರಲ್ಲಿ ಕಾರು ಮತ್ತು ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ 5 ಜನರು ಮೃತಪಟ್ಟಿದ್ದಾರೆ.
ಇಂದು ಬೆಳಗ್ಗೆ ಕಾರು ಮತ್ತು ಟ್ರಕ್ ನಡುವೆ ಡಿಕ್ಕಿ ಸಂಭವಿಸಿದೆ. ಅಪಘಾತದಲ್ಲಿ ಐವರು ಅಸುನೀಗಿದ್ದು, ಇವರೆಲ್ಲರೂ ಡಿಯೋರಿಯಾ ಜಿಲ್ಲೆಯ ನಿವಾಸಿಗಳೆಂದು ತಿಳಿದುಬಂದಿದೆ.
ಡಿಯೋರಿಯಾ ಜಿಲ್ಲೆಯಲ್ಲಿ ವಾಸಿಸುತ್ತಿರುವ ಮೂವರು ಲಕ್ನೋದಿಂದ ಬಂದ ತಮ್ಮ ಇಬ್ಬರು ಸಂಬಂಧಿಕರನ್ನು ಕರೆದುಕೊಂಡು ವಾಪಸ್ ಬರುವಾಗ ಕೊರ್ವಾಲಿ ಪ್ರದೇಶದ ಬಳಿ ಕಾರು ಚಾಲಕನ ನಿಯಂತ್ರಣ ತಪ್ಪಿದೆ. ಪರಿಣಾಮ ರಸ್ತೆ ಬದಿ ನಿಂತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ.
ಈ ಕುರಿತು ಪ್ರಕರಣ ದಾಖಲಾಗಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.