ETV Bharat / bharat

ಮನೆಯ ರೆಫ್ರಿಜರೇಟರ್​ನಲ್ಲಿ 5 ಅಡಿ ಉದ್ದದ ಱಟ್​ ಸ್ನೇಕ್​ ಪತ್ತೆ: ವಿಷರಹಿತ ಸರೀಸೃಪವನ್ನು ಹಿಡಿದು ಕಾಡಿಗೆ ಬಿಟ್ಟ ಉರಗರಕ್ಷಕ

author img

By ETV Bharat Karnataka Team

Published : Aug 27, 2023, 5:39 PM IST

ಮನೆಯ ರೆಫ್ರಿಜರೇಟರ್​ನಲ್ಲಿ ವಿಷರಹಿತ ಇಲಿ ಹಾವು ಕಾಣಿಸಿಕೊಂಡಿದ್ದು, ಅದನ್ನು ಜಾಗರೂಕವಾಗಿ ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ.

5 ಅಡಿ ಉದ್ದದ ಇಲಿ ಹಾವು ಪತ್ತೆ
5 ಅಡಿ ಉದ್ದದ ಇಲಿ ಹಾವು ಪತ್ತೆ

ಆಗ್ರಾ (ಉತ್ತರಪ್ರದೇಶ) : ಇಲ್ಲಿನ ಮನೆಯೊಂದರಲ್ಲಿ ರೆಫ್ರಿಜರೇಟರ್​ನ ಸ್ಟ್ಯಾಂಡ್​​ನಲ್ಲಿ ವಿಷರಹಿತ ಇಲಿ ಹಾವು (ರ್ಯಾಟ್​ ಸ್ನೇಕ್​) ಕಾಣಿಸಿಕೊಂಡು ಆತಂಕ ಮೂಡಿಸಿತ್ತು. ಬಳಿಕ ಎಸ್​ಒಎಸ್​ ವನ್ಯಜೀವಿ ತಂಡಕ್ಕೆ ಮಾಹಿತಿ ನೀಡಲಾಗಿದ್ದು, ಸದಸ್ಯರೊಬ್ಬರು ರಕ್ಷಿಸಿ ಈ ಮೃದು ಸ್ವಭಾವಿ ಹಾವನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

ಆಗ್ರಾದ ಸಿಕಂದ್ರಾ ಪ್ರದೇಶದಲ್ಲಿನ ಮನೆಯೊಂದರಲ್ಲಿ ಇಲಿ ಹಾವು ಪತ್ತೆಯಾಗಿದೆ. 5 ಅಡಿ ಉದ್ದವಿದ್ದ ಈ ಸರೀಸೃಪವನ್ನು ಅನಿರೀಕ್ಷಿತವಾಗಿ ಕಂಡು ಕುಟುಂಬಸ್ಥರು ಹೌಹಾರಿದ್ದಾರೆ. ಬಳಿಕ ಹಾವು ಹಿಡಿದು ರಕ್ಷಣೆ ಮಾಡುವ ಎಸ್​​ಒಎಸ್​ ವನ್ಯಜೀವಿ ತಂಡಕ್ಕೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಬಂದ ರಕ್ಷಣಾ ತಂಡದ ಸದಸ್ಯರೊಬ್ಬರು ಕಾರ್ಯಾಚರಣೆ ನಡೆಸಿ, ರೆಫ್ರಿಜರೇಟರ್ ಸ್ಟ್ಯಾಂಡ್‌ನ ಒಳಗೆ ಉಳಿದುಕೊಂಡು ಆಶ್ರಯ ಪಡೆದಿದ್ದ ಹಾವನ್ನು ನಿಧಾನವಾಗಿ ಹೊರತೆಗೆದರು. ಬಳಿಕ ಅದನ್ನು ಕಂಟೇನರ್‌ನಲ್ಲಿ ಹಾಕಿಕೊಂಡರು.

ಇದು ವಿಷಕಾರಿ ಹಾವಲ್ಲ, ಇಲಿ ಹಾವಾಗಿದ್ದು ಮನುಷ್ಯರಿಗೆ ತೊಂದರೆ ಉಂಟು ಮಾಡುವುದಿಲ್ಲ ಎಂದು ಅವರು ಮಾಹಿತಿ ನೀಡಿದರು. ಬಳಿಕ ಅದನ್ನು ಕಂಟೇನರ್​ ಡಬ್ಬದಲ್ಲಿ ಹಾಕಿಕೊಂಡು ಅದನ್ನು ಕಾರಿಗೆ ಬಿಡಲು ತೆಗೆದುಕೊಂಡು ಹೋದರು.

ಇದು ವಿಷಕಾರಿಯಲ್ಲ: ವೈಲ್ಡ್‌ಲೈಫ್ ಎಸ್‌ಒಎಸ್‌ನ ಸಿಇಒ ಕಾರ್ತಿಕ್ ಸತ್ಯನಾರಾಯಣ್ ಮಾತನಾಡಿ, ಅತಿಯಾದ ನಗರೀಕರಣದಿಂದಾಗಿ ವನ್ಯಜೀವಿಗಳು ಎದುರಿಸುತ್ತಿರುವ ಮಾನವಜನ್ಯ ಒತ್ತಡಗಳನ್ನು ಇದು ತೋರಿಸುತ್ತದೆ. ಇಂತಹ ಹಲವಾರು ಪ್ರಕರಣಗಳನ್ನು ಸಂಸ್ಥೆ ಮಾಡಿದೆ. ಮನೆಗಳು, ಬಯಲಲ್ಲಿ, ವಾಸಸ್ಥಾನ ಸ್ಥಳಗಳಲ್ಲಿ ಹಾವು ಕಾಣಿಸಿಕೊಂಡಾಗ ಜನರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿ ಹಿಡಿದು ಅದನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲಾಗುವುದು ಎಂದು ತಿಳಿಸಿದರು.

ವನ್ಯಜೀವಿ ಎಸ್‌ಒಎಸ್‌ನ ಸಂರಕ್ಷಣಾ ಯೋಜನೆಗಳ ನಿರ್ದೇಶಕ ಬೈಜು ರಾಜ್ ಎಂ.ವಿ ಮಾತನಾಡಿ, ಭಾರತೀಯ ಇಲಿ ಹಾವು ವಿಷಕಾರಿಯಲ್ಲದ ಜಾತಿಗೆ ಸೇರಿದ್ದು. ಇದು ಥೇಟ್​​ ನಾಗರಹಾವಿನ ಹಾಗೆಯೇ ಕಂಡುಬರುತ್ತದೆ. ಹೀಗಾಗಿ ಜನರು ಇದನ್ನು ವಿಷಕಾರಿ ಎಂದು ಬಡಿದು ಸಾಯಿಸುತ್ತಾರೆ. ಆದರೆ, ಇದು ಮನುಷ್ಯರಿಗೆ ತೊಂದರೆ, ಹಾನಿ ಉಂಟು ಮಾಡುವುದಿಲ್ಲ. ಇದೊಂದು ಸಾದಾ ಹಾವಾಗಿದೆ ಎಂದು ಮಾಹಿತಿ ನೀಡಿದರು.

ಹಾವಿನ ಬಗ್ಗೆ ಮಾಹಿತಿ: ಈ ಹಾವು ದೇಶದಾದ್ಯಂತ ಕಂಡುಬರುವ ಸರೀಸೃಪವಾಗಿದೆ. ಇದು ವಿವಿಧ ಪರಿಸರ ವ್ಯವಸ್ಥೆಗಳ ಪ್ರಮುಖ ಭಾಗವಾಗಿದೆ. ಸ್ಥಳೀಯ ಪರಿಸರ ಸಮತೋಲನವನ್ನು ಕಾಪಾಡುವಲ್ಲಿ ಇದರ ಪಾತ್ರ ದೊಡ್ಡದಿದೆ. ಇಲಿಗಳು, ಪಕ್ಷಿಗಳು ಮತ್ತು ಸಣ್ಣ ಪ್ರಾಣಿಗಳನ್ನೇ ಆಹಾರವನ್ನಾಗಿ ಮಾಡಿಕೊಂಡು ಇದು ಜೀವಿಸುತ್ತದೆ. ಈ ವಿಷರಹಿತ ಹಾವುಗಳು ನಗರ ಮತ್ತು ಕೃಷಿ ಪ್ರದೇಶಗಳಲ್ಲಿ ಕೀಟಗಳನ್ನು ತಿಂದು ಬದುಕುತ್ತವೆ. ಪರಿಸರ ವ್ಯವಸ್ಥೆಯು ನಿಯಂತ್ರಣದಲ್ಲಿರಲು ಇದು ಸಹಾಯಕವಾಗುತ್ತದೆ.(ಐಎಎನ್​ಎಸ್​)

ಇದನ್ನೂ ಓದಿ: ಶಿವಮೊಗ್ಗ: ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯ ಭೀಕರ ಕೊಲೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.