ತೆಲಂಗಾಣ: ಮದುವೆ ಮನೆಯೊಂದರಲ್ಲಿ ಖದೀಮರು ತಮ್ಮ ಕೈಚಳಕ ತೋರಿದ್ದು, 350 ಗ್ರಾಂ ತೂಕದ ಚಿನ್ನಾಭರಣ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.
ನಿಜಾಮಬಾದ್ ಜಿಲ್ಲೆಯ ಡಿಚ್ ಪಲ್ಲಿ ಮಂಡಲ್ ಎಂಬಲ್ಲಿ ನಿನ್ನೆ ನಡೆದ ಮದುವೆ ಸಮಾರಂಭದಲ್ಲಿ ವಧುವಿಗೆ ಸೇರಿದ 350 ಗ್ರಾಂ ಚಿನ್ನ ಕಳ್ಳತನವಾಗಿದೆ. ಮಹಾರಾಷ್ಟ್ರ ಮೂಲದ ವಧುವಿಗೆ ಸಿದ್ದಿಪೇಟೆ ವರನೊಂದಿಗೆ ವಿವಾಹ ನಿಶ್ಚಯವಾಗಿತ್ತು. ಮದುವೆ ಮುಗಿದ ನಂತರ ವಧುವಿನ ಆಭರಣಗಳನ್ನು ಬ್ಯಾಗ್ನಲ್ಲಿ ಇಡಲಾಗಿದೆ. ಆದರೆ ವಿವಾಹಕ್ಕೆ ಬಂದ ಇಬ್ಬರು ಯುವಕರು ಆಭರಣದ ಬ್ಯಾಗ್ನೊಂದಿಗೆ ಎಸ್ಕೇಪ್ ಆಗಿದ್ದಾರೆ ಎಂಬ ಮಾಹಿತಿ ದೊರೆತಿದೆ.
ಈ ಕುರಿತು ವರನ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.