ETV Bharat / bharat

ಮೊಬೈಲ್ ಗೇಮಿಂಗ್ ಹೆಸರಲ್ಲಿ ಸಾವಿರಾರು ಕೋಟಿ ರೂ. ಲೂಟಿ.. ಕೋಡಾ ಪೇಮೆಂಟ್ಸ್​ ಮೇಲೆ ಇಡಿ ದಾಳಿ

author img

By

Published : Sep 28, 2022, 12:48 PM IST

ಸಿಂಗಪುರದಲ್ಲಿ ಪ್ರಧಾನ ಕಚೇರಿ ಹೊಂದಿರುವ ಕೋಡಾ ಪೇಮೆಂಟ್ಸ್ ಸಿಂಗಪುರ್ ಪ್ರೈವೇಟ್‌ ಲಿಮಿಟೆಡ್ ಕಂಪನಿಯ ಪರವಾಗಿ ಹಣವನ್ನು ಸಂಗ್ರಹಿಸಿ ಅದರ ಖಾತೆಗೆ ಜಮೆ ಮಾಡುವುದು ಮಾತ್ರ ತನ್ನ ಕೆಲಸವಾಗಿದೆ ಎಂದು ಸಿಪಿಐಪಿಎಲ್ ಹೇಳಿದೆ. ಇದುವರೆಗೆ ಈ ಕಂಪನಿಯು ದೇಶದಲ್ಲಿ ರೂ. 2,850 ಕೋಟಿ ಸಂಗ್ರಹಿಸಿದೆ ಎಂದು ಇಡಿ ಪತ್ತೆ ಮಾಡಿದೆ.

ಮೊಬೈಲ್ ಗೇಮಿಂಗ್ ಹೆಸರಲ್ಲಿ 2,850 ಕೋಟಿ ರೂ. ಲೂಟಿ: ಕೋಡಾ ಪೇಮೆಂಟ್ಸ್​ ಮೇಲೆ ಇಡಿ ದಾಳಿ
2,850 crore in the name of mobile gaming Loot: ED attack on Coda Payments

ಹೈದರಾಬಾದ್: ಮೊಬೈಲ್ ಗೇಮ್‌ಗಳ ಹೆಸರಿನಲ್ಲಿ ಅಪ್ರಾಪ್ತರಿಂದ ದೊಡ್ಡ ಮೊತ್ತದ ಹಣವನ್ನು ಸಂಗ್ರಹಿಸಿ ವಿದೇಶಕ್ಕೆ ಕಳುಹಿಸುತ್ತಿದ್ದ ಕೋಡಾ ಪೇಮೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಸಿಪಿಐಪಿಎಲ್) ಕಂಪನಿಯಲ್ಲಿ ಹೈದರಾಬಾದ್‌ನ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಮಂಗಳವಾರ ಶೋಧ ನಡೆಸಿದ್ದಾರೆ.

ಕಂಪನಿಯ ಖಾತೆಗಳಲ್ಲಿದ್ದ ರೂ.68.53 ಕೋಟಿ ನಗದು ಬ್ಯಾಲೆನ್ಸ್​ ಅನ್ನು ಸ್ಥಗಿತಗೊಳಿಸಲಾಗಿದೆ. ಕೋಡಾ ಪೇಮೆಂಟ್ಸ್​ ಇದು ಗರೆನಾ ಫ್ರೀ ಫೈರ್, ಟೀನ್ ಕಾಟನ್ ಗೋಲ್ಡ್ ಮತ್ತು ಕಾಲ್ ಆಫ್ ಡ್ಯೂಟಿಯಂತಹ ವೀಡಿಯೊ ಗೇಮ್‌ಗಳನ್ನು ನಡೆಸುತ್ತದೆ ಮತ್ತು ಅದರಲ್ಲಿ ಭಾಗವಹಿಸುವವರಿಂದ ಹಣ ಸಂಗ್ರಹಿಸುತ್ತದೆ. ಆರಂಭದಲ್ಲಿ ವೀಡಿಯೊ ಗೇಮ್‌ಗಳ ಹೆಸರುಗಳು ಅಪ್ರಾಪ್ತರನ್ನು ಆಕರ್ಷಿಸುತ್ತವೆ. ಗೇಮ್ ಪ್ರವೇಶಿಸಿದ ನಂತರ ಡಿಜಿಟಲ್ ಟೋಕನ್ ಮಾರಾಟದ ಹೆಸರಿನಲ್ಲಿ ಅಪ್ರಾಪ್ತರ ಖಾತೆಗಳಿಂದ ಅವರಿಗೆ ಗೊತ್ತಿಲ್ಲದೆ ಹಣ ಲೂಟಿ ಮಾಡಲಾಗುತ್ತದೆ.

ವಿಡಿಯೋ ಗೇಮ್ ಅನ್ನು ಯಶಸ್ವಿಯಾಗಿ ಆಡಿದ ನಂತರ ಮೊಬೈಲ್ ಫೋನ್‌ನಲ್ಲಿ ಒಂದು ಪಾಪ್-ಅಪ್ ಕಾಣಿಸಿಕೊಳ್ಳುತ್ತದೆ. ಇದು ಹೆಚ್ಚಿನ ವಹಿವಾಟುಗಳನ್ನು ಅನುಮತಿಸುವಂತೆ ತೋರುತ್ತದೆ. ಆದರೆ ಆಟ ಆಡುವ ಧಾವಂತದಲ್ಲಿ ಮೈಮರೆತು ಅದಕ್ಕೆ ಓಕೆ ಎಂದು ಹೇಳಿದರೆ ಅವರಿಗೆ ಗೊತ್ತಾಗದೆ ಅವರ ಖಾತೆಗಳಿಂದ ಹಣ ಮಾಯವಾಗುತ್ತದೆ. CPIPL ಉದ್ದೇಶಪೂರ್ವಕವಾಗಿ ವೀಡಿಯೊ ಗೇಮ್‌ಗಳ ನೀತಿಯನ್ನು ಈ ರೀತಿಯಲ್ಲಿ ವಿನ್ಯಾಸಗೊಳಿಸಿದೆ.

ಸಿಂಗಾಪುರದಲ್ಲಿ ಪ್ರಧಾನ ಕಚೇರಿ ಹೊಂದಿರುವ ಕೊಡಾ ಪೇಮೆಂಟ್ಸ್ ಸಿಂಗಾಪುರ್ ಪ್ರೈವೇಟ್‌ ಲಿಮಿಟೆಡ್ ಕಂಪನಿಯ ಪರವಾಗಿ ಹಣವನ್ನು ಸಂಗ್ರಹಿಸಿ ಅದರ ಖಾತೆಗೆ ಜಮೆ ಮಾಡುವುದು ಮಾತ್ರ ತನ್ನ ಕೆಲಸವಾಗಿದೆ ಎಂದು ಸಿಪಿಐಪಿಎಲ್ ಹೇಳಿದೆ. ಇದುವರೆಗೆ ಈ ಕಂಪನಿಯು ದೇಶದಲ್ಲಿ ರೂ. 2,850 ಕೋಟಿ ಸಂಗ್ರಹಿಸಿದೆ ಎಂದು ಇಡಿ ಪತ್ತೆ ಮಾಡಿದೆ. ತೆರಿಗೆ ಮತ್ತು ಲಾಭದ ಹೆಸರಿನಲ್ಲಿ ವಿದೇಶಕ್ಕೆ 2,265 ಕೋಟಿ ರೂ. ಇಡಿ ಅಧಿಕಾರಿಗಳು ಈ ಕಂಪನಿಗೆ ಸೇರಿದ ಖಾತೆಗಳು, ಸ್ಥಿರ ಠೇವಣಿಗಳು ಮತ್ತು ಪಾವತಿ ಗೇಟ್‌ವೇಗಳಿಗೆ ಸಂಬಂಧಿಸಿದ ಎಲ್ಲಾ ಬಳಕೆದಾರರ ಐಡಿಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ತೆರಿಗೆ ಮತ್ತು ಲಾಭದ ಹೆಸರಿನಲ್ಲಿ ವಿದೇಶಕ್ಕೆ 2265 ಕೋಟಿ ರೂ.ಗಳನ್ನು ವಿದೇಶಕ್ಕೆ ವರ್ಗಾವಣೆ ಮಾಡಲಾಗಿದೆ. ಇಡಿ ಅಧಿಕಾರಿಗಳು ಈ ಕಂಪನಿಗೆ ಸೇರಿದ ಖಾತೆಗಳು, ಸ್ಥಿರ ಠೇವಣಿಗಳು ಮತ್ತು ಪಾವತಿ ಗೇಟ್‌ವೇಗಳಿಗೆ ಸಂಬಂಧಿಸಿದ ಎಲ್ಲಾ ಯೂಸರ್ ಐಡಿಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಸೈಬರಾಬಾದ್ ಪ್ರಕರಣದ ಆಧಾರದ ಮೇಲೆ ತನಿಖೆ: ರಾಷ್ಟ್ರೀಯ ಪೊಲೀಸ್ ಅಕಾಡೆಮಿಯ ನಿವೃತ್ತ ಅಧಿಕಾರಿ ಹಾಗೂ ಅವರ ಪುತ್ರಿ ಸೇರಿ ಗೇಮಿಂಗ್​​ನಲ್ಲಿ 11.50 ಲಕ್ಷ ರೂಪಾಯಿ ಕಳೆದುಕೊಂಡಿದ್ದರು. ಅವರು ಸೆಪ್ಟೆಂಬರ್ 2021 ರಲ್ಲಿ ಸೈಬರಾಬಾದ್ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದರು. ಈ ಎಲ್ಲ ಹಣವನ್ನು ಕೋಡಾ ಪೇಮೆಂಟ್ಸ್​ಗೆ ಸಂಬಂಧಿಸಿದ ಮುಂಬೈ ಖಾತೆಗಳಲ್ಲಿ ಠೇವಣಿ ಮಾಡಲಾಗಿದೆ ಎಂದು ಪೊಲೀಸರು ಕಂಡುಕೊಂಡಿದ್ದಾರೆ.

ದೂರುದಾರರ ಮೊಮ್ಮಗ ವಿಡಿಯೋ ಗೇಮ್‌ಗಳನ್ನು ಆಡಿದ್ದು, ಪೇಮೆಂಟ್ಸ್​​ ಹೆಸರಿನಲ್ಲಿ ಖಾತೆಗಳಲ್ಲಿರುವ ಹಣ ಲೂಟಿ ಮಾಡಿರುವುದು ಕಂಡುಬಂದಿದೆ. ಹಣವನ್ನು ಹಿಂಪಡೆದು ದೂರುದಾರರಿಗೆ ಹಸ್ತಾಂತರಿಸಲು ಪೊಲೀಸರು ಸಿಂಗಾಪುರದಲ್ಲಿರುವ ಕೋಡಾ ಪೇಮೆಂಟ್ಸ್ ಗೇಟ್‌ವೇ ಮಾತೃಸಂಸ್ಥೆಯನ್ನು ಸಂಪರ್ಕಿಸಿದ್ದಾರೆ. ಈ ದೂರಿನ ಜತೆಗೆ ದೇಶಾದ್ಯಂತ ಸಿಪಿಐಪಿಎಲ್ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ವಿಡಿಯೋ ಗೇಮ್‌ಗಳ ಹೆಸರಿನಲ್ಲಿ ಅಕ್ರಮವಾಗಿ ಹಣ ಸಂಗ್ರಹಿಸಿ ವಿದೇಶಕ್ಕೆ ಕಳುಹಿಸಿರುವ ಅಪರಾಧದ ವಿರುದ್ಧ ಹೈದರಾಬಾದ್ ಇಡಿ ಪ್ರಕರಣ ದಾಖಲಿಸಿಕೊಂಡಿದ್ದು, ಹೈದರಾಬಾದ್, ಚೆನ್ನೈ ಮತ್ತು ಮುಂಬೈ ಸೇರಿದಂತೆ ದೇಶಾದ್ಯಂತ ಶೋಧ ನಡೆಸಿದೆ.

ಇದನ್ನೂ ಓದಿ: ಪ್ರೇಮ, ಮದುವೆ ಆಮೇಲೆ ದರೋಡೆ.. ವಾರ್ಷಿಕೋತ್ಸವದ ಬಳಿಕ ಯುವಕನಿಗೆ ಗೊತ್ತಾಯ್ತು ನಾನು 7ನೇ ಪತಿ ಅಂತಾ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.