ETV Bharat / bharat

ಯೂಟ್ಯೂಬರ್​ ಮನೀಶ್ ಕಶ್ಯಪ್​ ವಿರುದ್ಧ 27 ಪ್ರಕರಣ ದಾಖಲು - ಮನೀಶ್ ಕಶ್ಯಪ್ ನ್ಯೂಸ್​

ವಲಸೆ ಕಾರ್ಮಿಕರ ಮೇಲಿನ ದಾಳಿಯ ನಕಲಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಹಿನ್ನೆಲೆ ಯೂಟ್ಯೂಬರ್​ ಮನೀಶ್ ಕಶ್ಯಪ್​ ವಿರುದ್ಧ 27 ಪ್ರಕರಣ ದಾಖಲಾಗಿವೆ.

ಯೂಟ್ಯೂಬರ್​ ಮನೀಶ್ ಕಶ್ಯಪ್​
ಯೂಟ್ಯೂಬರ್​ ಮನೀಶ್ ಕಶ್ಯಪ್​
author img

By

Published : Mar 22, 2023, 6:28 PM IST

ಪಾಟ್ನಾ (ಬಿಹಾರ): ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರ ಮೇಲಿನ ದಾಳಿಗೆ ಸಂಬಂಧಪಟ್ಟಂತೆ ಸಾಮಾಜಿಕ ಜಾಲತಾಣದಲ್ಲಿ ನಕಲಿ ವಿಡಿಯೋಗಳನ್ನು ಹರಿಬಿಟ್ಟ ಪ್ರಕರಣದಲ್ಲಿ ಯೂಟ್ಯೂಬರ್​ ಮನೀಶ್​ ಕಶ್ಯಪ್ ವಿರುದ್ಧ ಬಿಹಾರ ಸೇರಿ ತಮಿಳುನಾಡಿನಲ್ಲಿ ಒಟ್ಟು 27 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಬಿಹಾರದಲ್ಲಿ 14 ಹಾಗೂ ತಮಿಳುನಾಡಿನಲ್ಲಿ 13 ಪ್ರಕರಣಗಳು ದಾಖಲಾಗಿವೆ.

ಬೆಟ್ಟಿಯಾದಲ್ಲಿ 7 ಪ್ರಕರಣ ದಾಖಲು: ಬೆಟ್ಟಿಯದ ಎಸ್ಪಿ ಉಪೇಂದ್ರ ನಾಥ್ ವರ್ಮಾ ಪ್ರಕಾರ, ಮನೀಶ್ ಕಶ್ಯಪ್ ವಿರುದ್ಧ ಚಂಪಾರಣ್ ಜಿಲ್ಲೆಯ ಬೆಟ್ಟಿಯಾದಲ್ಲಿ ಒಟ್ಟು 7 ಪ್ರಕರಣಗಳು ದಾಖಲಾಗಿವೆ. ಇಡೀ ಬಿಹಾರದಲ್ಲಿ ಮನೀಶ್​ ವಿರುದ್ಧ 14ಕ್ಕೂ ಹೆಚ್ಚು ಅಪರಾಧ ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 7 ಇಲ್ಲಿಯದಾಗಿವೆ. ಇದಲ್ಲದೇ ತಮಿಳುನಾಡಿನಲ್ಲೂ 13 ಪ್ರಕರಣಗಳು ದಾಖಲಾಗಿವೆ. ಮನೀಶ್ ಕಶ್ಯಪ್ ವಿರುದ್ಧ ಐಪಿಸಿ ಸೆಕ್ಷನ್ 153, 153 (ಎ), 153 (ಬಿ), 505 (1) (ಬಿ), 505 (1) (ಸಿ), 468, 471 ಮತ್ತು 120 (ಬಿ) ಮತ್ತು ಸೆಕ್ಷನ್ 67 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಲ್ಲದೇ ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿಯಲ್ಲೂ ಪ್ರಕರಣ ದಾಖಲಾಗಿದೆ ಎಂದು ಹೇಳಿದರು.

ಎಲ್ಲಾ ಜಾಮೀನು ರಹಿತ ಪ್ರಕರಣಗಳು ದಾಖಲು: ಕಾನೂನಿನ ತಜ್ಞರ ಪ್ರಕಾರ, ಮನೀಶ್ ಕಶ್ಯಪ್ ವಿರುದ್ಧ ದಾಖಲಾಗಿರುವ ಅಷ್ಟು ಪ್ರಕರಣಗಳಲ್ಲಿ 1-2 ಪ್ರಕರಣ ಹೊರತು ಪಡಿಸಿದರೇ ಉಳಿದೆಲ್ಲ ಪ್ರಕರಣಗಳು ಜಾಮೀನು ರಹಿತವಾಗಿವೆ. ಇದರಲ್ಲಿ ಸೆಕ್ಷನ್ 468ರಡಿ ದಾಖಲಾದ ಪ್ರಕರಣದಲ್ಲಿ 5 ವರ್ಷದಿಂದ 7 ವರ್ಷಗಳವರೆಗೆ ಶಿಕ್ಷೆ ವಿಧಿಸಬಹುದಾಗಿದೆ. 505 (1) (b) ಮತ್ತು 505 (1) (c)ನಲ್ಲಿ 3 ರಿಂದ 5 ವರ್ಷಗಳವರೆಗೆ ಶಿಕ್ಷೆಯ ನಿಬಂಧನೆ ಇದೆ.

ತಮಿಳುನಾಡಿನಲ್ಲಿ ಪ್ರಕರಣ: ತಮಿಳುನಾಡಿನ ಕೃಷ್ಣಗಿರಿ ಪೊಲೀಸ್ ಠಾಣೆಯಲ್ಲಿ ಮನೀಶ್ ಕಶ್ಯಪ್ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಮನೀಶ್ ವಿರುದ್ಧ ತಮಿಳುನಾಡಿನಲ್ಲಿ 13 ಪ್ರಕರಣಗಳು ದಾಖಲಾಗಿವೆ. ಐಪಿಸಿ ಸೆಕ್ಷನ್ 153, 153(ಎ), 505 ಅಡಿಯಲ್ಲಿ ಆರೋಪಗಳನ್ನು ಮಾಡಲಾಗಿದೆ. ಇದಲ್ಲದೇ ಇತರ ಅಪರಾಧಗಳಲ್ಲಿಯೂ ಪ್ರಕರಣಗಳು ದಾಖಲಾಗಿವೆ. 14 ಫೆಬ್ರವರಿ 2019 ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಪಾಟ್ನಾದಲ್ಲಿ ಕಾಶ್ಮೀರಿ ಅಂಗಡಿ ಮಾಲಿಕರ ಮೇಲೆ ದಾಳಿ ನಡೆಸಲಾಗಿತ್ತು. ಈ ಪ್ರಕರಣದಲ್ಲಿ ಮನೀಶ್ ಕಶ್ಯಪ್ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದರು.

ಎಡ್ವರ್ಡ್ 7 ರ ಪ್ರತಿಮೆಯನ್ನು ಧ್ವಂಸಗೊಳಿಸಿದ ಆರೋಪಗಳು: ಫೆಬ್ರವರಿ 15, 2019 ರಂದು, ಪಾಟ್ನಾ ಕೊಟ್ವಾಲಿಯಲ್ಲಿ TRF 147, 148, 149, 448, 342, 323, 307, 324, 504, 506 ಅಡಿಯಲ್ಲಿ ಮನೀಶ್​ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಮನೀಶ್ ಕಶ್ಯಪ್ ಕೂಡ ಜೈಲಿಗೆ ಹೋಗಿದ್ದರು, ಆದರೂ ಚಾರ್ಜ್ ಶೀಟ್ ಇನ್ನೂ ಸಲ್ಲಿಕೆಯಾಗಿರಲಿಲ್ಲ. ಮನೀಷ್ ತನ್ನ ತವರು ಜಿಲ್ಲೆ ಪಶ್ಚಿಮ ಚಂಪಾರಣ್‌ನ ಮಹಾರಾಣಿ ಜಾಂಕಿ ಕುನ್ವಾರ್ ಆಸ್ಪತ್ರೆ ಆವರಣದಲ್ಲಿ ಇರುವ ಕಿಂಗ್ ಎಡ್ವರ್ಡ್ 7ರ ಪ್ರತಿಮೆಯನ್ನು ಒಡೆಯುವಂತೆ ಪ್ರಚೋದಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಇದಾದ ನಂತರ, ಪಶ್ಚಿಮ ಚಂಪಾರಣ್ ಡಿಎಂ ವರದಿಯ ಆಧಾರದ ಮೇಲೆ, ಬೆಟ್ಟಿಯಾ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಇದರಲ್ಲಿ ಮನೀಶ್ ಕಶ್ಯಪ್ ಅವರ ಜೊತೆ 21 ಜನರನ್ನು ಹೆಸರು ಕೇಳಿಬಂದಿತ್ತು.

ಮಜೌಲಿಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ: ಏಪ್ರಿಲ್ 11, 2019 ರಂದು ಬೆಟ್ಟಿಯ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 147, 148, 149, 188, 448, 338, 341, 323, 307, 354 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಇದರಲ್ಲಿ 30 ಮೇ 2019 ರಂದು ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು. ನಂತರ ನವೆಂಬರ್ 3, 2020 ರಂದು, ಬೆಟ್ಟಿಯ ಮಜೌಲಿಯಾ ಪೊಲೀಸ್ ಠಾಣೆಯಲ್ಲಿ, ಮನೀಶ್ ಕಶ್ಯಪ್ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಐಪಿಸಿ ಸೆಕ್ಷನ್ 448, 323, 353, 385, 504, 506, 34ಗಳಡಿ ಮನೀಶ್​ ವಿರುದ್ಧ 6 ಏಪ್ರಿಲ್ 2021 ರಂದು ಮಜೌಲಿಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಹಿನ್ನೆಲೆ ಏನು: ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರ ಮೇಲಿನ ದಾಳಿಗೆ ಸಂಬಂಧಿಸಿದಂತೆ ವಲಸಿಗರನ್ನು ಹೊಡೆದು ಸಾಯಿಸುವ 30 ನಕಲಿ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿತ್ತು. ಅಲ್ಲದೇ ಈ ವಿಡಿಯೋಗಳು ಕಾರ್ಮಿಕರಲ್ಲಿ ಭೀತಿಯನ್ನು ಉಂಟು ಮಾಡಿತ್ತು. ಈ ಹಿನ್ನೆಲೆ ಯೂಟ್ಯೂಬರ್​ ಮನೀಶ್ ಕಶ್ಯಪ್​ ವಿರುದ್ಧ ಬಿಹಾರ ಮತ್ತು ತಮಿಳುನಾಡಿನಲ್ಲಿ ಪ್ರಕರಣ ದಾಖಲಾಗುದ್ದವು.

ಇದನ್ನೂ ಓದಿ: ಯೂಟ್ಯೂಬರ್ ಮನೀಶ್ ಕಶ್ಯಪ್ ಬಂಧನ: ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.