ETV Bharat / bharat

ಒಂದೇ ಹಳಿ ಮೇಲೆ ಬಂದ ಎರಡು ರೈಲು: ಕೂದಲೆಳೆ ಅಂತರದಲ್ಲಿ ತಪ್ಪಿದ ಅಪಘಾತ - ಒಂದೇ ಹಳಿ ಮೇಲೆ ಬಂದ ಎರಡು ರೈಲು

ಸ್ಟೇಷನ್​ ಕ್ರಾಸಿಂಗ್​ನಲ್ಲಿ ಒಂದೇ ಹಳಿಯಲ್ಲಿ ಬಂದ 2 ರೈಲುಗಳು - ರೈಲಿನಿಂದಿಳಿದು ಓಡಿದ ಪ್ರಯಾಣಿಕರು - ಎರಡು ಗಂಟೆ ಕಾಲ ಅಲ್ಲೇ ನಿಂತ ರೈಲು.

2-trains-came-on-same-track
ಒಂದೇ ಹಳಿಯಲ್ಲಿ ಬಂದ ಎರಡು ರೈಲು
author img

By

Published : Dec 31, 2022, 2:32 PM IST

ಬಹ್ರೈಚ್(ಉತ್ತರ ಪ್ರದೆಶ): ರಿಸಿಯಾ ರೈಲು ನಿಲ್ದಾಣದಲ್ಲಿ ಶನಿವಾರ ಬೆಳಗ್ಗೆ ಎರಡೂ ರೈಲುಗಳು ಒಂದೇ ಹಳಿಯಲ್ಲಿ ಮುಖಾಮುಖಿಯಾಗಿ ಬಂದಿವೆ. ಕ್ರಾಸಿಂಗ್ ಮಾಡುವಾಗ ಆದ ಲೋಪದಿಂದ ಈ ಸಮಸ್ಯೆ ಆಗಿದೆ. ಲೊಕೊ ಪೈಲಟ್‌ಗಳ ಮುಂಜಾಗ್ರತೆಯಿಂದ ಎರಡೂ ರೈಲುಗಳು ಡಿಕ್ಕಿಯಿಂದ ಪಾರಾಗಿದ್ದು, ಭಾರಿ ಅನಾಹುತ ತಪ್ಪಿದೆ. ಎರಡು ರೈಲುಗಳು ಮುಖಾಮುಖಿಯಾಗಿ ಆಗಿರುವುದನ್ನು ಗಮನಿಸಿದ ಪ್ರಯಾಣಿಕರು ರೈಲಿನಿಂದ ಇಳಿದು ಓಡಲು ಪ್ರಾರಂಭಿಸಿದ್ದಾರೆ.

ಸ್ಥಳೀಯ ಮಾಹಿತಿಯ ಪ್ರಕಾರ, ಬಹ್ರೈಚ್‌ಗೆ ಹೋಗಲು ರಿಸಿಯಾ ನಿಲ್ದಾಣದಲ್ಲಿ 05360 ಸಂಖ್ಯೆಯ ರೈಲು ಮೂರನೇ ಟ್ರ್ಯಾಕ್​ನಲ್ಲಿ ನಿಂತಿತ್ತು. ಇದೇ ಸಮಯದಲ್ಲಿ ಬಹ್ರೈಚ್‌ನಿಂದ ಬಂದ 05361 ಸಂಖ್ಯೆಯ ರೈಲು ಸಹ ಅದೇ ಟ್ರ್ಯಾಕ್​ನಲ್ಲಿ ಬಂದ ಕಾರಣ ಗೊಂದಲಕ್ಕೆ ಕಾರಣವಾಯಿತು. ಈ ವೇಳೆ ಬಹ್ರೈಚ್‌ಗೆ ಹೋಗಲು ಸಿದ್ಧವಾಗಿದ್ದ ರೈಲಿನ ಲೊಕೊ ಪೈಲಟ್ ಎಂಜಿನ್​ ಲೈಟ್​ ಆನ್​ ಮಾಡಿ ಮತ್ತು ರೆಡ್​ ಫ್ಲಾಗ್​ ತೋರಿಸಿ ರೈಲನ್ನು ನಿಲ್ಲಿಸಿದ್ದಾನೆ. ರೈಲು ನಿಂತ ತಕ್ಷಣ ಪ್ರಯಾಣಿಕರಲ್ಲಿ ಗೊಂದಲ ಉಂಟಾಯಿತು. ಸ್ಥಳೀಯರ ಗುಂಪು ನಿಲ್ದಾಣದಲ್ಲಿ ಜಮಾಯಿಸಿತು.

ರೈಲುಗಳು ಸುಮಾರು ಒಂದೂವರೆ ಗಂಟೆಗಳ ಕಾಲ ಅದೇ ಟ್ರ್ಯಾಕ್ ಮೇಲೆ ನಿಂತಿದ್ದವು. ನಂತರ ಬಹ್ರೈಚ್‌ನಿಂದ ಬರುತ್ತಿದ್ದ ರೈಲನ್ನು ಟ್ರ್ಯಾಕ್​ ಒಂದಕ್ಕೆ ವರ್ಗಾಯಿಸಲಾಗಿದೆ. ಒಟ್ಟು ಎರಡು ಗಂಟೆಗಳ ಕಾಲ ರೈಲುಗಳು ರಿಸಿಯಾ ನಿಲ್ದಾಣದಲ್ಲೇ ಬಾಕಿಯಾದವು. ನಿರ್ಲಕ್ಷ್ಯ ತೋರಿದ ನೌಕರರ ಬಗ್ಗೆ ಪ್ರಯಾಣಿಕರಲ್ಲೂ ಅಸಮಾಧಾನ ವ್ಯಕ್ತವಾಗಿದೆ.

ಇದನ್ನೂ ಓದಿ: ಛತ್ತೀಸ್​ಗಢದ ಮನೆಗಳ ಮುಂದೆ ನಿಗೂಢ ಚೀಟಿಗಳು: ಅದರಲ್ಲಿತ್ತು ಅಂತಹ ವಾಕ್ಯ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.