ಚೆನ್ನೈ, ತಮಿಳುನಾಡು: ಸುಮಾರು 85 ಕೋಟಿ ರೂಪಾಯಿ ಮೌಲ್ಯದ 2.38 ಲಕ್ಷ ಟನ್ ಕಲ್ಲಿದ್ದಲು ಉತ್ತರ ಚೆನ್ನೈ ಉಷ್ಣ ವಿದ್ಯುತ್ ಸ್ಥಾವರದಿಂದ ಕಾಣೆಯಾಗಿದೆ ಎಂದು ತಮಿಳುನಾಡು ವಿದ್ಯುತ್ ಖಾತೆ ಸಚಿವ ವಿ.ಸೆಂಥಿಲ್ ಬಾಲಾಜಿ ಆರೋಪಿಸಿದ್ದಾರೆ.
ಶುಕ್ರವಾರ ಅಧಿಕಾರಿಗಳೊಂದಿಗೆ ಎನ್ನೋರ್ನಲ್ಲಿರುವ ಉತ್ತರ ಚೆನ್ನೈ ಉಷ್ಣ ವಿದ್ಯುತ್ ಸ್ಥಾವರಕ್ಕೆ (NCTPS) ಭೇಟಿ ನೀಡಿ ಪರಿಶೀಲನೆ ನಡೆಸಿದ ವಿ.ಸೆಂಥಿಲ್ ಬಾಲಾಜಿ ಈ ರೀತಿಯ ಗಂಭೀರ ಆರೋಪ ಮಾಡಿದ್ದಾರೆ.
ಕಲ್ಲಿದ್ದಲು ದಾಸ್ತಾನು ಪರಿಶೀಲನೆ ವೇಳೆ ಸುಮಾರು 85 ಕೋಟಿ ಮೌಲ್ಯದ 2.38 ಲಕ್ಷ ಟನ್ ಕಲ್ಲಿದ್ದಲು ಕಲ್ಲಿದ್ದಲು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ ಎಂದು ವರದಿಗಾರರೊಬ್ಬರ ಪ್ರಶ್ನೆಗೆ ಉತ್ತರ ನೀಡಿದ್ದಾರೆ.
ಈ ವರ್ಷದ ಮಾರ್ಚ್ ಅಂತ್ಯದವರೆಗಿನ ಕಲ್ಲಿದ್ದಲು ದಾಸ್ತಾನು ಪರಿಶೀಲನೆ ನಡೆಸಲಾಗಿದೆ. ಕಲ್ಲಿದ್ದಲು ಕಾಣೆಯಾದ ಬಗ್ಗೆ ವಿವರವಾದ ತನಿಖೆ ನಡೆಯಬೇಕು. ಇದೇ ರೀತಿಯಲ್ಲಿ ಟುಟಿಕಾರಿನ್, ಮೆಟ್ಟೂರ್ (ಸೇಲಂ) ಉಷ್ಣ ವಿದ್ಯುತ್ ಸ್ಥಾವರಗಳನ್ನು ಪರಿಶೀಲನೆ ನಡೆಸಲು ನಾವು ನಿರ್ಧರಿಸಿದ್ದೇವೆ ಎಂದು ಸೆಂಥಿಲ್ ಮಾಹಿತಿ ಸ್ಪಷ್ಟನೆ ನೀಡಿದ್ದಾರೆ.
ಸಚಿವ ಸೆಂಥಿಲ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ವಿದ್ಯುತ್ ಇಲಾಖೆಯ ಮಾಜಿ ಸಚಿವ ತಂಗಮಣಿ, ಕಲ್ಲಿದ್ದಲು ನಾಪತ್ತೆಯಾಗಿರುವ ವಿಚಾರವನ್ನು ಮೊದಲೇ ಗುರ್ತಿಸಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿ ಪ್ರಿಯತಮೆಯ ಕೊಲ್ಲಲು ಯತ್ನ