ಕಂಕೇರ್ (ಛತ್ತೀಸ್‌ಗಢ): ಕಳೆದ ಕೆಲವು ದಿನಗಳಿಂದ ಛತ್ತೀಸ್‌ಗಢದಲ್ಲಿ ನಕ್ಸಲರ ಉಪಟಳ ಹೆಚ್ಚಾಗಿದೆ. ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಸ್ತಾರ್ ಪ್ರವಾಸದ ನಂತರ, ನಕ್ಸಲರು ನಿರಂತರವಾಗಿ ಸೈನಿಕರ ಮೇಲೆ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. ಜೊತೆಗೆ ತೀವ್ರ ದಾಳಿಗಳನ್ನು ನಡೆಸುತ್ತಿದ್ದಾರೆ. ಸೋಮವಾರ ಬಿಜಾಪುರದಲ್ಲಿ ಐಇಡಿ ಸ್ಫೋಟದ ನಂತರ, ಇಂದು ಕೂಡಾ ಕಂಕೇರ್‌ನಲ್ಲಿ ಮತ್ತೊಂದು ಐಇಡಿ ಸ್ಫೋಟ ಸಂಭವಿಸಿದ್ದು, ಈ ಘಟನೆಯಲ್ಲಿ ಇಬ್ಬರು ಬಿಎಸ್‌ಎಫ್ (ಗಡಿ ಭದ್ರತಾ ಪಡೆ) ಯೋಧರು ಗಾಯಗೊಂಡಿದ್ದಾರೆ. ಅವರನ್ನು ಹೆಲಿಕಾಪ್ಟರ್ ಮೂಲಕ ರಾಯ್‌ಪುರ ಆಸ್ಪತ್ರೆಗೆ ಕರೆತರಲಾಯಿತು.
ಐಇಡಿ ಸ್ಫೋಟವನ್ನು ಖಚಿತಪಡಿಸಿದ ಎಸ್ಪಿ: ಇತ್ತೀಚಿನ ಐಇಡಿ ಸ್ಫೋಟವು ಕೊಯ್ಲಿಬೆಡಾದ ದುಡಾ ಮತ್ತು ಚಿಲ್ಪಾರಸ್ ಶಿಬಿರಗಳ ನಡುವಿನ ಕಗ್ಬರಸ್ ಟೆಕ್ರಿ ಪ್ರದೇಶದ ಬಳಿ ಸಂಭವಿಸಿದೆ. ಕಂಕೇರ್ ಎಸ್ಪಿ ಶಲಭ್ ಕುಮಾರ್ ಸಿನ್ಹಾ ಅವರು, ಇಂದು ನಡೆದ ಐಇಡಿ ಸ್ಫೋಟವನ್ನು ಖಚಿತಪಡಿಸಿದ್ದಾರೆ. ಪ್ರದೇಶದ ಗಸ್ತುಗಾಗಿ ಬಿಎಸ್ಎಫ್ ಯೋಧರು ತೆರಳಿದ್ದರು ಎಂದು ಅವರು ತಿಳಿಸಿದರು. ಈ ನಡುವೆ ಸಿಒಬಿ ಚಿಲ್ಪಾರಾದಿಂದ ಉತ್ತರಕ್ಕೆ ಸುಮಾರು ಎರಡೂವರೆ ಕಿ.ಮೀ. ಮತ್ತು ಸಿಒಬಿ ದತ್ತದಿಂದ ದಕ್ಷಿಣಕ್ಕೆ 1 ಕಿ.ಮೀ. ದೂರದಲ್ಲಿ, ನಕ್ಸಲರು ಐಇಡಿ (ಸುಧಾರಿತ ಸ್ಫೋಟಕ ಸಾಧನ) ಅನ್ನು ಚರಂಡಿಯಲ್ಲಿ ಎಸೆದಿದ್ದಾರೆ.
ಇದನ್ನೂ ಓದಿ: ಚೀನಾ ಪೌರೋಹಿತ್ಯದಲ್ಲಿ ಹಗೆತನ ಮರೆತು ಇರಾನ್-ಸೌದಿ ದೋಸ್ತಿ: ಭಾರತದ ಮೇಲೆ ಪ್ರಭಾವವೇನು?
ದಾಳಿ ನಡೆದಿದ್ದು ಹೇಗೆ?: ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಸ್ತಾರ್‌ನಲ್ಲಿ ಪ್ರವಾಸ ಕೈಗೊಂಡ ನಂತರ, ನಕ್ಸಲರು ನಿರಂತರವಾಗಿ ದಾಳಿಗಳನ್ನು ನಡೆಸುತ್ತಿದ್ದಾರೆ. ಮಂಗಳವಾರವೂ ಇಲ್ಲಿನ ಕಂಕೇರ್‌ನಲ್ಲಿ ಮತ್ತೊಂದು ಐಇಡಿ ಸ್ಫೋಟ ಸಂಭವಿಸಿದ್ದು, ಇಬ್ಬರು ಬಿಎಸ್‌ಎಫ್ (ಗಡಿ ಭದ್ರತಾ ಪಡೆ) ಯೋಧರು ಗಾಯಗೊಂಡಿದ್ದಾರೆ. ಅವರನ್ನು ಹೆಲಿಕಾಪ್ಟರ್ ಮೂಲಕ ರಾಯ್‌ಪುರ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಈ ಪ್ರದೇಶದಲ್ಲಿ ಸ್ಫೋಟವಾಗಿದ್ದರಿಂದ ಇಬ್ಬರು ಸೈನಿಕರು ಗಾಯಗೊಂಡಿದ್ದಾರೆ. ಬಿಎಸ್ಎಫ್ ಸಿಬ್ಬಂದಿ ಸುಶೀಲ್ ಕುಮಾರ್ ಅವರ ಮುಖ ಮತ್ತು ಕಣ್ಣುಗಳಿಗೆ ಗಾಯಗಳಾಗಿವೆ. ಮತ್ತೋರ್ವ ಯೋಧ ಛೋಟುರಾಮ್ ಅವರ ಬಲಗಾಲು ಮತ್ತು ಕೈಗೆ ಗಾಯವಾಗಿದೆ. ಗಾಯಗೊಂಡ ಯೋಧರಿಗೆ ಕೊಯ್ಲಿಬೀಡ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: 101 ಕೇಸ್ ಎದುರಿಸುತ್ತಿರುವ ಮಾಫಿಯಾ ಡಾನ್ ಅತೀಕ್ ಅಹ್ಮದ್: ಕಿಡ್ನಾಪ್ ಕೇಸ್ನಲ್ಲಿ ಜೀವಾವಧಿ ಶಿಕ್ಷೆ
ನಿನ್ನೆಯೂ ನಡೆದಿತ್ತು ಐಇಡಿ ದಾಳಿ: ಸೋಮವಾರ, ಬಿಜಾಪುರದ ಮಿರಟೂರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಕ್ಸಲರು ಅಳವಡಿಸಿದ್ದ ಐಇಡಿ ದಾಳಿಗೆ ಸಿಎಎಫ್ (ಛತ್ತೀಸ್‌ಗಢ ಸಶಸ್ತ್ರ ಪಡೆ) ಯೋಧರೊಬ್ಬರು ಹುತಾತ್ಮರಾಗಿದ್ದರು. ರಸ್ತೆ ನಿರ್ಮಾಣ ಕಾಮಗಾರಿಗೆ ಭದ್ರತೆ ಒದಗಿಸಲು ಟಿಮ್ನರ್ ಶಿಬಿರದಿಂದ ಯೋಧರು ತೆರಳಿದ್ದು, ಎಟೆಪಾಲ್ ಶಿಬಿರದಿಂದ 1 ಕಿ.ಮೀ. ದೂರದಲ್ಲಿರುವ ಟೆಕ್ರಿಯಲ್ಲಿ ಐಇಡಿ ಸ್ಫೋಟ ಸಂಭವಿಸಿತ್ತು. ಹುತಾತ್ಮ ಯೋಧ ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ನಿವಾಸಿ.
ಇದನ್ನೂ ಓದಿ: ನಿತಿನ್ ಗಡ್ಕರಿ ಕಚೇರಿಗೆ ಬೆದರಿಕೆ ಕರೆ: ಆರೋಪಿಯನ್ನು ಬಂಧಿಸಿದ ನಾಗ್ಪುರ ಪೊಲೀಸರು