ಕೋಟಾ(ರಾಜಸ್ಥಾನ): ಮಗುವಿನ ಹೊಟ್ಟೆಯಲ್ಲಿ ಕಳೆದ 10 ದಿನಗಳಿಂದ ಇದ್ದ ಕೀಲಿ ಕೈಯನ್ನ ಯಾವುದೇ ಶಸ್ತ್ರಚಿಕಿತ್ಸೆ ಇಲ್ಲದೇ ಹೊರತೆಗೆಯಲಾಗಿದೆ. ಇದೀಗ ಮಗು ಪ್ರಾಣಪಾಯದಿಂದ ಪಾರಾಗಿದೆ.
ಆಟವಾಡುತ್ತಿದ್ದ ವೇಳೆ ಮಗುವೊಂದು ಬೀಗವನ್ನ ನುಗಿತು. ಕಳೆದ 10 ದಿನಗಳಿಂದ ಅದು ಹೊಟ್ಟೆಯಲ್ಲಿದ್ದ ಕಾರಣ ಅದು ಹೊಟ್ಟೆ ನೋವು ಹಾಗೂ ವಾಂತಿಯಿಂದ ಅಳಲು ಶುರು ಮಾಡಿದೆ. ಈ ವೇಳೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಕ್ಸ್ರೇ ಮಾಡಿಸಿದ್ದಾರೆ. ಮಗುವಿನ ಹೊಟ್ಟೆಯಲ್ಲಿ ಬೀಗ ಇರುವುದು ಪತ್ತೆಯಾಗಿದೆ.
ಇದನ್ನೂ ಓದಿ: ಮಾಸ್ಕ್ ಖರೀದಿಗೆ ಹಣವಿಲ್ಲ: ಪಕ್ಷಿ ಗೂಡು ಧರಿಸಿ ಸರ್ಕಾರಿ ಕಚೇರಿಗೆ ಬಂದ ವ್ಯಕ್ತಿಗೆ ಮೆಚ್ಚುಗೆ!
ಮಗುವಿಗೆ ಶಸ್ತ್ರಚಿಕಿತ್ಸೆ ಮಾಡದಿರಲು ನಿರ್ಧರಿಸಿರುವ ವೈದ್ಯರು, ಎಂಡೋಸ್ಕೋಪ್ನಿಂದ ಹೊರತೆಗೆದಿದ್ದಾರೆ. ಇದಾದ ಬಳಿಕ ಮಾತನಾಡಿರುವ ಶಸ್ತ್ರಚಿಕಿತ್ಸಕ ಡಾ. ದಿನೇಶ್ ಜಿಂದಾಲ್, ಚಿಕ್ಕ ಮಕ್ಕಳು ಕೈಗೆ ಸಿಗುವ ವಸ್ತು ಎತ್ತಿಕೊಂಡು ನೇರವಾಗಿ ಬಾಯಿಗೆ ಹಾಕಿಕೊಳ್ಳುವ ಅಭ್ಯಾಸ ಹೊಂದಿರುತ್ತಾರೆ. ಹೀಗಾಗಿ ಪೋಷಕರು ಹೆಚ್ಚು ಗಮನ ಹರಿಸಬೇಕು ಎಂದಿದ್ದಾರೆ.