ಕರ್ನಾಟಕ

karnataka

By ETV Bharat Karnataka Team

Published : Jun 27, 2024, 6:13 PM IST

ETV Bharat / snippets

ಹುಬ್ಬಳ್ಳಿ: ಕ್ರಿಪ್ಟೋ ಕರೆನ್ಸಿಯಲ್ಲಿ ಲಾಭದ ಆಮಿಷ; ₹1 ಕೋಟಿಗೂ ಹೆಚ್ಚು ವಂಚನೆ

HUBBALLI CEN Police Station
ಹುಬ್ಬಳ್ಳಿ ಸೆನ್‌ ಪೊಲೀಸ್​ ಠಾಣೆ (ETV Bharat)

ಹುಬ್ಬಳ್ಳಿ:ಕ್ರಿಪ್ಟೋ ಕರೆನ್ಸಿ ಖರೀದಿಸಿದರೆ ಹೆಚ್ಚು ಲಾಭ ಪಡೆಯಬಹುದು ಎಂದು ನಗರದ ಉದ್ಯಮಿ ಹಾಗೂ ಆತನ ಇಬ್ಬರು ಸ್ನೇಹಿತರಿಗೆ ವೆಬ್​ಲಿಂಕ್ ಕಳುಹಿಸಿದ ವ್ಯಕ್ತಿ, ಸುಮಾರು 1.04 ಕೋಟಿ ರೂ ವರ್ಗಾಯಿಸಿಕೊಂಡು ವಂಚಿಸಿರುವ ಬಗ್ಗೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೋಕುಲ್ ರಸ್ತೆಯ ಉದ್ಯಮಿ ಶಿವಾನಂದ ಪಾವುಸ್ಕರ್, ಇವರ ಇಬ್ಬರು ಸ್ನೇಹಿತರಾದ ಪ್ರವೀಣ ಕುಲಕರ್ಣಿ, ಸುಜೀತ್ ಕಲಬುರಗಿ ವಂಚನೆಗೊಳಗಾಗಿದ್ದಾರೆ.

ಫೇಸ್​ಬುಕ್‌ನಲ್ಲಿ ಕ್ರಿಪ್ಟೋ ಕರೆನ್ಸಿ ಕುರಿತು ಜಾಹೀರಾತು ನೋಡಿದ್ದಾರೆ. ಅಲ್ಲಿರುವ ನಂಬರ್ ಮೂಲಕ ಛಾಯಾಸಿಂಗ್ ಎಂಬ ಅಪರಿಚಿತ ವ್ಯಕ್ತಿಗೆ ಪರಿಚಯವಾಗಿದ್ದಾರೆ. ಆತನ ಮಾತಿನಂತೆ ಆತ ಕಳುಹಿಸಿದ ವೆಬ್‌ಸೈಟ್‌ಗಳ ಲಿಂಕ್ ತೆರೆದ ಮೂವರೂ ಇನ್‌ಸ್ಟಾಲ್ ಮಾಡಿದ್ದಾರೆ. ನಂತರ ಶಿವಾನಂದ ಖಾತೆಯಿಂದ 68.99 ಲಕ್ಷ ರೂ. ಸುಜಿತ್ ಖಾತೆಯಿಂದ 14.85 ಲಕ್ಷ ರೂ., ಪ್ರವೀಣ ಕುಲಕರ್ಣಿಯಿಂದ 21.05 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:ಚಿಕ್ಕಮಗಳೂರು: ಮುಂಬೈ ಪೊಲೀಸ್​ ಸೋಗಿನಲ್ಲಿ ಬ್ಯಾಂಕ್ ಉದ್ಯೋಗಿಗೆ ₹17 ಲಕ್ಷ ವಂಚನೆ! - cyber Fraud

ABOUT THE AUTHOR

...view details