ರಸ್ತೆ ತಡೆಗೋಡೆ ಮೇಲೆ ಚಿರತೆ ಗಾಢನಿದ್ರೆ; ವಿಡಿಯೋ ನೋಡಿ - Leopard Spotted
Published : Apr 9, 2024, 9:24 AM IST
ಚಾಮರಾಜನಗರ: ಬೆಂಗಳೂರು - ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಚಾಮರಾಜನಗರ ಗಡಿಭಾಗವಾದ ದಿಂಬಂ ಘಟ್ಟ ಪ್ರದೇಶದ ತಡೆಗೋಡೆ ಮೇಲೆ ಚಿರತೆ ನಿದ್ರಿಸುತ್ತಿದ್ದ ದೃಶ್ಯ ಸೋಮವಾರ ತಡರಾತ್ರಿ ಕಂಡು ಬಂದಿದೆ. ತಮಿಳುನಾಡಿನಿಂದ ಮೈಸೂರಿಗೆ ಬರುತ್ತಿದ್ದ ವೇಳೆ ದಿಂಬಂನ 27ನೇ ತಿರುವಿನ ತಡೆಗೋಡೆ ಮೇಲೆ ಚಿರತೆಯೊಂದು ಮಲಗಿತ್ತು. ಇದನ್ನು ಕಂಡ ಕಾರಿನ ಚಾಲಕ ವಿಡಿಯೋ ಮಾಡುವ ವೇಳೆ ಎಚ್ಚರಗೊಂಡು ಚಿರತೆ ತಡೆಗೋಡೆ ಇಳಿದು ಕಾಡಿನತ್ತ ಮರಳಿತು. ಹಾಯಾಗಿ ಮಲಗಿ ನಿದ್ರಿಸುತ್ತಿದ್ದ ಚಿರತೆಗೆ ಕಾರಿನ ಚಾಲಕನಿಂದ ನಿದ್ರಾಭಂಗವಾದಂತೆ ಆಗಿದ್ದು, ಮನುಷ್ಯರ ಸಹವಾಸವೇ ಸಾಕು ಎಂಬಂತೆ ಕ್ಷಣಾರ್ಧದಲ್ಲೇ ಮಾಯವಾಗಿದೆ. ಇನ್ನು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಬಸ್ ಕೆಳಗೆ ಅಡಗಿ ಕುಳಿತ ಚಿರತೆ: ಕಳೆದ ವಾರ ಬಿಎಂಟಿಸಿ ಬಸ್‌ಗೆ ಅಡ್ಡಲಾಗಿ ಬಂದು ಚಕ್ರದ ಬಳಿ ಅಡಗಿ ಕೂತಿದ್ದ 8 ತಿಂಗಳ ಚಿರತೆ ಮರಿಯೊಂದನ್ನು ಬೆಂಗಳೂರು ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಿಸಿದ್ದರು. ನಗರದ ಹೊರವಲಯದ ತುರಹಳ್ಳಿ ಅರಣ್ಯ ಪ್ರದೇಶದ ಸಮೀಪ ಬರುತ್ತಿದ್ದ ಕೆಂಗೇರಿ - ಚಿಕ್ಕೇಗೌಡನಪಾಳ್ಯ ಮಾರ್ಗದ ಬಿಎಂಟಿಸಿ ಬಸ್‌ಗೆ ಚಿರತೆ ಮರಿ ಅಡ್ಡ ಬಂದಿತ್ತು.
ಇದನ್ನೂ ಓದಿ: Watch: ಬಿಎಂಟಿಸಿ ಬಸ್‌ಗೆ ಅಡ್ಡಬಂದ ಮರಿ ಚಿರತೆ ರಕ್ಷಣೆ: ವಿಡಿಯೋ - Leopard in Bengaluru