ಕರ್ನಾಟಕ

karnataka

ETV Bharat / videos

ಸ್ಪೈಡರ್ ಮ್ಯಾನ್ ಶೈಲಿಯಲ್ಲಿ ಅಪಾರ್ಟ್‌ಮೆಂಟ್ ಫ್ಲ್ಯಾಟ್ ಜಿಗಿದು ಕಳ್ಳತನ - money stolen - MONEY STOLEN

🎬 Watch Now: Feature Video

By ETV Bharat Karnataka Team

Published : Mar 29, 2024, 10:53 PM IST

ಬೆಂಗಳೂರು : ಸ್ಪೈಡರ್ ಮ್ಯಾನ್ ಮಾದರಿಯಲ್ಲಿ ಅಪಾರ್ಟ್‌ಮೆಂಟಿನ ಫ್ಲ್ಯಾಟ್ ಜಂಪ್ ಮಾಡಿ‌ ಕಳ್ಳನೊಬ್ಬ ಕೈಚಳಕ ತೋರಿರುವ ಘಟನೆ ಮಾರತ್ತಹಳ್ಳಿ ಠಾಣಾ ವ್ಯಾಪ್ತಿಯ ಪಣತ್ತೂರಿನಲ್ಲಿ ನಡೆದಿದೆ. ಮಾರ್ಚ್ 27ರ ಮುಂಜಾನೆ 3:30 ಸುಮಾರಿಗೆ ಅಪಾರ್ಟ್‌ಮೆಂಟಿಗೆ ಬಂದಿದ್ದ ಆರೋಪಿ, ಕಿಟಕಿಗಳ ಬಳಿಯಿರಿಸಿದ್ದ ನಗದು, ವಾಚ್​​​ಗಳು ಮತ್ತಿತರ ವಸ್ತುಗಳನ್ನ ಕದ್ದೊಯ್ದಿದ್ದಾನೆ.

ಅಪಾರ್ಟ್‌ಮೆಂಟ್​ನ ಫ್ಲ್ಯಾಟಿನಿಂದ ಫ್ಲ್ಯಾಟಿಗೆ ಆರೋಪಿ ನೆಗೆದು ಕೃತ್ಯ ಎಸಗುತ್ತಿರುವ ದೃಶ್ಯಗಳು ಸ್ಥಳೀಯರ ಮೊಬೈಲ್​ನಲ್ಲಿ ಸೆರೆಯಾಗಿವೆ. ತಕ್ಷಣ ಸೆಕ್ಯುರಿಟಿ ಗಾರ್ಡ್ ನೆರವಿನೊಂದಿಗೆ ಆರೋಪಿಯನ್ನ ಹಿಡಿಯಲು ಮುಂದಾದಾಗ ಕಾಂಪೌಂಡ್ ಹಾರಿ ಆರೋಪಿ ಎಸ್ಕೇಪ್ ಆಗಿದ್ದಾನೆ. ಆರೋಪಿ ಪರಾರಿಯಾಗುವ ದೃಶ್ಯ ಅಪಾರ್ಟ್‌ಮೆಂಟ್ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಹುಡುಕಾಟ ಮುಂದುವರೆಸಿದ್ದಾರೆ. 

ಜ್ಯೂವೆಲ್ಲರಿ‌ ಶಾಪ್​ನಲ್ಲಿ ಕಳ್ಳತನ ಮಾಡುತ್ತಿದ್ದ ಚೋರರು ಅಂದರ್: ಯಾರೂ ಇಲ್ಲದ ಸಮಯ ನೋಡಿಕೊಂಡ ಇಬ್ಬರು ಮನೆಯ ಅಲ್ಮೇರಾದಲ್ಲಿದ್ದ 383 ಗ್ರಾಂ ಚಿನ್ನಾಭರಣ, 104 ಗ್ರಾಂ ತೂಕದ ಬೆಳ್ಳಿ ಸಾಮಾನುಗಳನ್ನ ಕದ್ದು (ಮಾರ್ಚ್​ 12-24) ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡ ಜೆಪಿ ನಗರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ಕಳುವಾಗಿದ್ದ ಮಾಲನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ : ಉಂಡ ಮನೆಗೆ ಕನ್ನ ಬಗೆದ ಇಬ್ಬರು ಆರೋಪಿಗಳ ಬಂಧನ: ಜ್ಯೂವೆಲ್ಲರಿ‌ ಶಾಪ್​ನಲ್ಲಿ ಕಳ್ಳತನ ಮಾಡುತ್ತಿದ್ದ ಚೋರರು ಅಂದರ್

ABOUT THE AUTHOR

...view details