ಕರ್ನಾಟಕ

karnataka

ETV Bharat / technology

ನೀವು ಸ್ಮಾರ್ಟ್​ವಾಚ್​ ಪ್ರಿಯರೇ, ಹಾಗಾದ್ರೆ ಇಲ್ಲಿವೆ ಕೇವಲ 1 ಸಾವಿರ ರೂ.ಒಳಗಿನ ಸಾಧನಗಳು - BEST SMARTWATCH UNDER 1000

Best Smartwatch Under 1000: ಕೈಗೆಟುಕುವ ದರದಲ್ಲಿ ಸ್ಮಾರ್ಟ್​ ವಾಚ್​ಗಳನ್ನು ಖರೀದಿಸಲು ಬಯಸುವಿರಾ? ಹಾಗಾದ್ರೆ ಇಲ್ಲಿ ಕೆಲ ಸ್ಮಾರ್ಟ್​ ವಾಚ್​ಗಳು ಕೇವಲ ಸಾವಿರ ರೂಪಾಯಿಯೊಳಗೆ ಲಭ್ಯವಿದೆ. ಇದರ ಮೇಲೆ ಒಂದು ಲುಕ್​ ಹಾಕಿ..

AFFORDABLE SMARTWATCH  SMARTWATCH FEATURES  SMARTWATCH PRICE  SMARTWATCH MODELS
ನೀವು ಸ್ಮಾರ್ಟ್​ವಾಚ್​ ಪ್ರಿಯರೇ, ಹಾಗಾದ್ರೆ ಇಲ್ಲಿವೆ ಕೇವಲ 1 ಸಾವಿರ ರೂ.ದೊಳಗಿನ ಸಾಧನಗಳು (ETV Bharat)

By ETV Bharat Tech Team

Published : 4 hours ago

Best Smartwatch Under 1000:ಇಂದಿನ ದಿನಗಳಲ್ಲಿ ಸ್ಮಾರ್ಟ್‌ವಾಚ್‌ಗಳ ಕ್ರೇಜ್ ಹೆಚ್ಚಾಗುತ್ತಿದೆ. ಇವುಗಳು ಸಮಯ ನೋಡುವ ಸಾಧನ ಮಾತ್ರವಲ್ಲ, ಫಿಟ್‌ನೆಸ್ ಟ್ರ್ಯಾಕಿಂಗ್, ಕರೆ ನೋಟಿಫಿಕೇಶನ್​ ಮತ್ತು ಇತರ ಹಲವು ಸ್ಮಾರ್ಟ್ ವೈಶಿಷ್ಟ್ಯಗಳೊಂದಿಗೆ ಬರುತ್ತಿವೆ. ಕಡಿಮೆ ಬಜೆಟ್‌ನಲ್ಲಿ ಉತ್ತಮ ಸ್ಮಾರ್ಟ್‌ವಾಚ್ ಖರೀದಿಸಲು ನೀವು ಯೋಚಿಸುತ್ತಿದ್ದರೆ ಮಾರುಕಟ್ಟೆಯಲ್ಲಿ 1000 ರೂ.ಗಿಂತ ಕಡಿಮೆ ಇರುವ ಹಲವು ಆಯ್ಕೆಗಳಿವೆ. ನಿಮ್ಮ ಬಜೆಟ್‌ಗೆ ಹೊಂದಿಕೆಯಾಗುವ ಕೆಲವು ಅತ್ಯುತ್ತಮ ಸ್ಮಾರ್ಟ್‌ವಾಚ್‌ಗಳ ಲಿಸ್ಟ್​ ಇಲ್ಲಿದೆ..

PTron Pulsefit P261 ವೈಶಿಷ್ಟ್ಯಗಳು:

  • 1.44 -ಇಂಚಿನ LCD ಡಿಸ್​​ಪ್ಲೇ
  • ಹಾರ್ಟ್​ ರೇಟ್​ ಮತ್ತು ಬ್ಲಡ್​ ಪ್ರೆಶರ್​ ಮಾನಿಟರಿಂಗ್​'
  • ಸ್ಟೆಪ್​ ಕೌಂಟರ್ ಮತ್ತು ಕ್ಯಾಲೋರಿ ಟ್ರ್ಯಾಕರ್
  • ಬೆಲೆ: ಈ ವಾಚ್ 999 ರೂಗಳಲ್ಲಿ ಲಭ್ಯವಿದೆ.
  • ಇತರ ವೈಶಿಷ್ಟ್ಯಗಳು: ಸ್ಟೈಲಿಶ್ ಡಿಸೈನ್​, ಬೆಸಿಕ್​ ಫಿಟ್ನೆಸ್ ಟ್ರ್ಯಾಕಿಂಗ್..

Techberry T90 ವೈಶಿಷ್ಟ್ಯಗಳು:

  • ಬ್ಲೂಟೂತ್ ಕನೆಕ್ಟಿವಿಟಿ ಜೊತೆ ಕಾಲ್​ ಮತ್ತು ಮೆಸೇಜ್​ ನೋಟಿಫಿಕೇಶನ್​
  • ಮ್ಯೂಸಿಕ್​ ಕಂಟ್ರೋಲ್​ ಮತ್ತು ರಿಮೋಟ್ ಕ್ಯಾಮೆರಾ ಆಪ್ಷನ್​
  • ಟಚ್‌ಸ್ಕ್ರೀನ್ ಇಂಟರ್ಫೇಸ್
  • ಬೆಲೆ: ಸುಮಾರು 900 ರೂ.
  • ಇತರ ವೈಶಿಷ್ಟ್ಯಗಳು: ಬಹು ವೈಶಿಷ್ಟ್ಯಗಳ ಜೊತೆ ಸಿಂಪಲ್​ ಮತ್ತು ಎಫಿಶಿಯಂಟ್​

Zebronics ZEB-FIT101 ವೈಶಿಷ್ಟ್ಯಗಳು:

  • ವಾಟರ್​ ರೆಸಿಸ್ಟೆಂಟ್​ ಡಿಸೈನ್​
  • ಸ್ಟೆಪ್ ಕೌಂಟರ್ ಮತ್ತು ಸ್ಲೀಪ್ ಮಾನಿಟರ್‌ನಂತಹ ಫಿಟ್‌ನೆಸ್ ಟ್ರ್ಯಾಕಿಂಗ್ ಫೀಚರ್​ಗಳು
  • ಸ್ಮಾರ್ಟ್ ನೋಟಿಫಿಕೇಶನ್​ ಅಲರ್ಟ್​
  • ಬೆಲೆ: 999 ರೂ.
  • ಇತರ ವೈಶಿಷ್ಟ್ಯಗಳು: ಒಳ್ಳೆ ಗುಣಮಟ್ಟ ಹೊಂದಿದೆ. ಬ್ಯಾಟರಿ ಬಾಳಿಕೆ ಉತ್ತಮವಾಗಿದೆ.

Callmate Smart Band ಫೀಚರ್ಸ್​:

  • ಹಾರ್ಟ್​ ರೇಟ್​ ಮತ್ತು ಬ್ಲಡ್​ ಆಕ್ಸಿಜನ್​ ಲೇವೆಲ್​ ಮಾನಿಟರ್
  • ಆ್ಯಕ್ಟಿವಿಟಿ ಟ್ರ್ಯಾಕಿಂಗ್ ಮತ್ತು ಫಿಟ್‌ನೆಸ್ ಅಲರ್ಟ್​ಗಳು
  • ಸ್ಟೈಲೀಶ್​ ಬ್ಯಾಂಡ್‌ ಜೊತೆ ಹಗುರವಾದ ವಿನ್ಯಾಸ.
  • ಬೆಲೆ: ಸುಮಾರು 950 ರೂ.
  • ಇತರ ವೈಶಿಷ್ಟ್ಯಗಳು: ಫಿಟ್ನೆಸ್ ಉತ್ಸಾಹಿಗಳಿಗೆ ಉತ್ತಮ ಆಯ್ಕೆಯಾಗಿದೆ.

ಗಮನಿಸಬೇಕಾದ ಅಂಶಗಳು: ರೂ 1000 ದೊಳಗೆ ಲಭ್ಯವಿರುವ ಸ್ಮಾರ್ಟ್ ವಾಚ್‌ಗಳು ಬೇಸಿಕ್​ ವೈಶಿಷ್ಟ್ಯಗಳೊಂದಿಗೆ ಬರುತ್ತವೆ. ಇವು ಫಿಟ್‌ನೆಸ್ ಟ್ರ್ಯಾಕಿಂಗ್, ನೋಟಿಫಿಕೇಶನ್​ ಅಲರ್ಟ್​ ಮತ್ತು ಬ್ಯಾಟರಿ ಬ್ಯಾಕಪ್‌ನಂತಹ ಸೌಲಭ್ಯಗಳನ್ನು ಒದಗಿಸುತ್ತವೆ. ಇವುಗಳು ಪ್ರೀಮಿಯಂ ಸ್ಮಾರ್ಟ್ ವಾಚ್‌ಗಳಷ್ಟು ಸುಧಾರಿತವಾಗಿಲ್ಲದಿದ್ದರೂ, ಅವುಗಳನ್ನು ಕಡಿಮೆ ಬಜೆಟ್‌ನಲ್ಲಿ ಖರೀದಿಸಬಹುದಾಗಿದೆ. ಯಾವುದೇ ವಸ್ತುಗಳನ್ನು ಖರೀದಿಸುವ ಮುನ್ನ ಅನೇಕ ಬಾರಿ ಆಲೋಚಿಸುವುದು ಒಳ್ಳೆಯದು.

ಓದಿ:ಮಕ್ಕಳ ಮೇಲೆ ನಿಗಾವಹಿಸಲು ಮತ್ತೊಂದು ಹೊಸ ಫೀಚರ್​ ಪರಿಚಯಿಸಿದ ಇನ್​ಸ್ಟಾ!

ABOUT THE AUTHOR

...view details