ಕರ್ನಾಟಕ

karnataka

ETV Bharat / technology

ಆಂಡ್ರಾಯ್ಡ್​ ಎಕ್ಸ್​ಆರ್​ ಪರಿಚಯಿಸಿದ ಗೂಗಲ್​ - ಸ್ಯಾಮ್​ಸಂಗ್​: ಇದರ ಕಾರ್ಯವೇನು ಗೊತ್ತಾ? - GOOGLE UNVEILS ANDROID XR

Google Unveils Android XR: ಆಂಡ್ರಾಯ್ಡ್ ಎಕ್ಸ್‌ಆರ್ ಎಂಬುದು ಸ್ಯಾಮ್‌ಸಂಗ್ ಸಹಯೋಗದೊಂದಿಗೆ ಗೂಗಲ್ ಅಭಿವೃದ್ಧಿಪಡಿಸಿದ ಆಪರೇಟಿಂಗ್ ಸಿಸ್ಟಮ್ ಆಗಿದೆ. ಇದು AI, AR, VR ಹೆಡ್‌ಸೆಟ್‌ಗಳು ಮತ್ತು ಸ್ಮಾರ್ಟ್​ ಗ್ಲಾಸ್‌ಗಳಿಗಾಗಿ ವಿನ್ಯಾಸಗೊಳಿಸಲಾಗಿದೆ.

WHAT IS PROJECT MOOHAN  ANDROID XR  WHAT IS ANDROID XR  SAMSUNG
ಆಂಡ್ರಾಯ್ಡ್​ ಎಕ್ಸ್​ಆರ್​ ಪರಿಚಯಿಸಿದ ಗೂಗಲ್​-ಸ್ಯಾಮ್​ಸಂಗ್ (Samsung)

By ETV Bharat Tech Team

Published : 6 hours ago

Google Unveils Android XR:ಟೆಕ್​ ದೈತ್ಯಗಳಾದಸ್ಯಾಮ್​ಸಂಗ್​ ಮತ್ತು ಗೂಗಲ್​ ಹೊಸ ಆಪರೇಟಿಂಗ್​ ಸಿಸ್ಟಮ್​ವೊಂದನ್ನು ಪರಿಚಯಿಸಿದೆ. ಈ ಟೆಕ್ ದೈತ್ಯರು ಒಟ್ಟಾಗಿ ಸೇರಿ ಎಂಆರ್, ವಿಆರ್ ಹೆಡ್‌ಸೆಟ್ ತಯಾರಿಸುತ್ತಿದ್ದಾರೆ. ಅವುಗಳು ಆಪಲ್‌ನ ವಿಷನ್ ಪ್ರೊ ಮತ್ತು ಮೆಟಾದ ಕ್ವೆಸ್ಟ್ ಸೀರಿಸ್​ಗಳ ಜೊತೆ ಪೈಪೋಟಿ ನಡೆಸಲಿವೆ. ಪ್ರಾಜೆಕ್ಟ್ ಮೂಹನ್ ಎಂಬ ಕೋಡ್ ಹೆಸರಿನ ಸಾಧನವನ್ನು ಸ್ಯಾಮ್‌ಸಂಗ್ ಅಭಿವೃದ್ಧಿಪಡಿಸಿದೆ ಮತ್ತು ಗೂಗಲ್​ ಅಭಿವೃದ್ಧಿಪಡಿಸಿದ ಹೊಸ ಆಂಡ್ರಾಯ್ಡ್​ ಎಕ್ಸ್​ಆರ್​ ಆಪರೇಟಿಂಗ್ ಸಿಸ್ಟಂನಲ್ಲಿ ರನ್ ಆಗುತ್ತವೆ.

ಆಂಡ್ರಾಯ್ಡ್​ ಎಕ್ಸ್​ ಆರ್ ಎಂದರೇನು?​: ಆಂಡ್ರಾಯ್ಡ್​ 'ಎಕ್ಸ್​ಆರ್​'ನ ವಿಸ್ತೃತ ರೂಪ ಎಕ್ಸ್​ಟೆನ್ಡಡ್​ ರಿಯಾಲಿಟಿ. ಆಂಡ್ರಾಯ್ಡ್​ ಎಕ್ಸ್​ಆರ್​ ಎಂಬುದು ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳಲ್ಲಿರುವ MR, VR ಹೆಡ್‌ಸೆಟ್‌ಗಳು ಮತ್ತು ಗ್ಲಾಸ್‌ಗಳ ಆಂಡ್ರಾಯ್ಡ್​ ಅಪ್ಲಿಕೇಶನ್‌ಗಳು. ಇವುಗಳು ಗೂಗಲ್​ ಮತ್ತು ಸ್ಯಾಮ್​ಸಂಗ್​ ಅಭಿವೃದ್ಧಿ ಪಡಿಸಿದ ಹೊಸ ಆಪರೇಟಿಂಗ್​ ಸಿಸ್ಟಮ್​ನಲ್ಲಿ ರನ್​ ಆಗುತ್ತವೆ.

ಇದು ಡೆವಲಪರ್‌ಗಳಿಗೆ ಪೂರ್ವವೀಕ್ಷಣೆಯಾಗಿದೆ. ARCore, Android Studio, Jetpack Compose, Unity, ಮತ್ತು OpenXR ನಂತಹ ಸಾಧನಗಳನ್ನು ಸಪೋರ್ಟ್​ ಮಾಡುವ ಮೂಲಕ, ಡೆವಲಪರ್‌ಗಳು ಮುಂಬರುವ Android XR ಸಾಧನಗಳಿಗೆ ಅಪ್ಲಿಕೇಶನ್‌ಗಳನ್ನು ಸುಲಭವಾಗಿ ರಚಿಸಬಹುದು ಎಂದು ಗೂಗಲ್​ ತನ್ನ ಬ್ಲಾಗ್ ಪೋಸ್ಟ್‌ನಲ್ಲಿ ಹೇಳಿಕೊಂಡಿದೆ.

ವರ್ಚುಯಲ್ ಸ್ಕ್ರೀನ್​ನಲ್ಲಿ ಬ್ರೌಸ್ ಮಾಡಬಹುದು:ಈ ಹೊಸ ಆಪರೇಟಿಂಗ್​ ಸಿಸ್ಟಮ್​ ಆಂಡ್ರಾಯ್ಡ್​ ಎಕ್ಸ್​ಆರ್​ ಮೂಲಕ ವರ್ಚುಯಲ್ ಸ್ಕ್ರೀನ್​ನಲ್ಲಿ YouTube ಮತ್ತು Google TV ಅನ್ನು ನೀವು ಬ್ರೌಸ್ ಮಾಡಬಹುದಾಗಿದೆ. ಅಷ್ಟೇ ಅಲ್ಲ ಗೂಗಲ್​ ಫೋಟೋಗಳೊಂದಿಗೆ 3Dಯಲ್ಲಿ ಫೋಟೋಗಳು ಮತ್ತು ವಿಡಿಯೋಗಳನ್ನು ವೀಕ್ಷಿಸಬಹುದಾಗಿದೆ. ಗೂಗಲ್​ ಮ್ಯಾಪ್ಸ್​ ಅನ್ನು ಬಳಸಿಕೊಂಡು ಹೊಸ ಸ್ಥಳಗಳನ್ನು ಅನ್ವೇಷಿಸಬಹುದು. ಕ್ರೋಮ್‌ನಲ್ಲಿ ಬಹುಕಾರ್ಯಕವು ಮಲ್ಟಿ ವರ್ಚುಯಲ್ ಸ್ಕ್ರೀನ್‌ಗಳೊಂದಿಗೆ ಸುಲಭವಾಗಿರುತ್ತದೆ. ಸರ್ಕಲ್ ಟು ಸರ್ಕಲ್ ನಿಮಗೆ ಮಾಹಿತಿಯನ್ನು ತ್ವರಿತವಾಗಿ ಹುಡುಕಲು ಸಹಾಯ ಮಾಡುತ್ತದೆ ಎಂದು ಗೂಗಲ್​ ಹೇಳಿದೆ.

ಇದೆಲ್ಲದರ ಹೊರತಾಗಿ ಗೂಗಲ್‌ನ ಎಐ ಜೆಮಿನಿ ತನ್ನ ಬಳಕೆದಾರರಿಗೆ ಅವರ ದೈನಂದಿನ ಕಾರ್ಯಗಳನ್ನು ಯೋಜಿಸಲು, ಸಂಶೋಧಿಸಲು ಮತ್ತು ಮಾರ್ಗದರ್ಶನ ಮಾಡಲು ಸಹಾಯ ಮಾಡುತ್ತದೆ.

ಪ್ರಾಜೆಕ್​ ಮೂಹನ್ ಎಂದರೇನು?:ಮೂಹನ್​ ಎಂದರೆ ಕೊರಿಯನ್ ಭಾಷೆಯಲ್ಲಿ ಅನಂತ ಎಂದರ್ಥ. ಪ್ರಾಜೆಕ್ಟ್ ಮೂಹನ್ ಎಂಬುದು ಸ್ಯಾಮ್‌ಸಂಗ್ ಅಭಿವೃದ್ಧಿಪಡಿಸಿದ MR, VR ಹೆಡ್‌ಸೆಟ್‌ನ ಕೋಡ್ ಹೆಸರು. ಈ ಸಾಧನವು ಭೌತಿಕ ಮತ್ತು ಡಿಜಿಟಲ್ ಪ್ರಪಂಚಗಳೆರಡನ್ನೂ ಸಂಯೋಜಿಸುವ ಮೂಲಕ ಬಳಕೆದಾರರ ವಾಸ್ತವತೆಯನ್ನು ಹೆಚ್ಚಿಸುತ್ತದೆ ಅಥವಾ ಬದಲಾಯಿಸುತ್ತದೆ.

ಪ್ರಾಜೆಕ್ಟ್ ಮೂಹನ್ ವಿಆರ್ (ವರ್ಚುವಲ್ ರಿಯಾಲಿಟಿ), ಎಆರ್ (ಆಗ್ಮೆಂಟೆಡ್ ರಿಯಾಲಿಟಿ), ಎಂಆರ್ (ಮಿಕ್ಸ್ಡ್​ ರಿಯಾಲಿಟಿ) ಮತ್ತು ಭವಿಷ್ಯದಲ್ಲಿ ಅಭಿವೃದ್ಧಿಪಡಿಸಲಾಗುವ ಇತರ ರೀತಿಯ ತಂತ್ರಜ್ಞಾನಗಳನ್ನು ಒಳಗೊಂಡಿರುತ್ತದೆ. ಈ ಹೆಡ್‌ಸೆಟ್ ಆಂಡ್ರಾಯ್​ ಎಕ್ಸ್​ಆರ್​ನಲ್ಲಿ ರನ್ ಆಗುತ್ತದೆ. ಅಷ್ಟೇ ಅಲ್ಲ ಗ್ಯಾಲೆಕ್ಸಿ ಇಕೋ ಸಿಸ್ಟಮ್​ ಸಹ ಸಪೋರ್ಟ್​ ಮಾಡುತ್ತದೆ.

ಇತರ ಬೆಳವಣಿಗೆ:ಗೂಗಲ್​ ಎಕ್ಸ್​ಆರ್​ ತಂತ್ರಜ್ಞಾನದಲ್ಲಿ ಮ್ಯಾಜಿಕ್ ಲೀಪ್‌ನೊಂದಿಗೆ ಸಹಯೋಗವನ್ನು ಮುಂದುವರಿಸುತ್ತದೆ ಮತ್ತು XR ಸಾಧನಗಳ ಅಭಿವೃದ್ಧಿಗಾಗಿ Qualcomm, Linksys, Sony ಮತ್ತು XREAL ನಂತಹ ಇತರ ಪಾಲುದಾರರೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತದೆ. Android XR ನ ಅಭಿವೃದ್ಧಿಗೆ ಕೊಡುಗೆ ನೀಡಲು ಪ್ರಪಂಚದಾದ್ಯಂತದ ಡೆವಲಪರ್‌ಗಳು, ಸಾಧನ ತಯಾರಕರು ಮತ್ತು ರಚನೆಕಾರರನ್ನು ಗೂಗಲ್​ ಆಹ್ವಾನಿಸುತ್ತಿದೆ.

ಓದಿ:ಗೇಮ್ ಅವಾರ್ಡ್ಸ್ 2024 ಪ್ರಕಟ: ನಂಬರ್​ ಒನ್​ ಗೇಮ್​ ಆಗಿ ಹೊರ ಹೊಮ್ಮಿದ ಸೋನಿಯ ಆಸ್ಟ್ರೋ ಬಾಟ್

ABOUT THE AUTHOR

...view details