ಕರ್ನಾಟಕ

karnataka

By ETV Bharat Tech Team

Published : 21 hours ago

ETV Bharat / technology

AI ಸ್ಪ್ಯಾಮ್ ಡಿಟೆಕ್ಷನ್ ಪ್ರಾರಂಭ: ಅನುಮಾನಾಸ್ಪದ ಕರೆ, ಸಂದೇಶಗಳ ಬಗ್ಗೆ ಎಚ್ಚರಿಕೆ ನೀಡಲಿದೆ Airtel - Airtel AI Powered Spam Detection

Airtel AI Powered Spam Detection: ಭಾರತದ ಟೆಲಿಕಾಂ ಕಂಪನಿ ಭಾರ್ತಿ ಏರ್‌ಟೆಲ್ ದೇಶದ ಮೊದಲ ಕೃತಕ ಬುದ್ಧಿಮತ್ತೆ (AI)ಚಾಲಿತ ಸ್ಪ್ಯಾಮ್ ಡಿಟೆಕ್ಷನ್​ ಸೊಲ್ಯೂಷನ್ಸ್ ​ಪ್ರಾರಂಭಿಸಿದೆ. ಇದು ಭವಿಷ್ಯದಲ್ಲಿ ನೀವು ಸ್ವೀಕರಿಸುವ ಸ್ಪ್ಯಾಮ್ ಕರೆಗಳು ಮತ್ತು ಸ್ಪ್ಯಾಮ್ ಸಂದೇಶಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ.

AIRTEL GOPAL VITTAL  AIRTEL AI POWERED SPAM DETECTION  AI POWERED SPAM DETECTION  AIRTEL SPAM DETECTION
AIRTEL AI ಸ್ಪ್ಯಾಮ್ ಡಿಟೆಕ್ಷನ್ ಪ್ರಾರಂಭ (Airtel)

Airtel AI Powered Spam Detection:ಭಾರತದ ಎರಡನೇ ಅತಿದೊಡ್ಡ ಟೆಲಿಕಾಂ ಕಂಪನಿ ಭಾರ್ತಿ ಏರ್‌ಟೆಲ್ ದೇಶದ ಮೊದಲ AIಚಾಲಿತ ಸ್ಪ್ಯಾಮ್ ಡಿಟೆಕ್ಷನ್ ಅನ್ನು ಪ್ರಾರಂಭಿಸಿದೆ. ಇದರಿಂದ ಗ್ರಾಹಕರು ಸ್ವೀಕರಿಸುವ ಸ್ಪ್ಯಾಮ್ ಕರೆಗಳು ಮತ್ತು ಸಂದೇಶಗಳ ಸಂಖ್ಯೆ ಕಡಿಮೆಯಾಗಲಿದೆ ಎಂದು ಕಂಪನಿ ತಿಳಿಸಿದೆ.

ಇದು ಅನುಮಾನಾಸ್ಪದ ಕರೆಗಳು ಮತ್ತು SMS ಕುರಿತು ನೈಜ ಸಮಯದಲ್ಲಿ ಗ್ರಾಹಕರನ್ನು ಎಚ್ಚರಿಸುತ್ತದೆ. ಇದು ಸ್ವಯಂಚಾಲಿತವಾಗಿ ಸಕ್ರಿಯಗೊಳ್ಳುತ್ತದೆ. ಯಾವುದೇ ಆ್ಯಪ್ ಡೌನ್‌ಲೋಡ್ ಮಾಡುವ ಅಗತ್ಯವಿಲ್ಲ ಎಂದು ಏರ್‌ಟೆಲ್ ಮಾಹಿತಿ ನೀಡಿದೆ.

ಎರಡು ಹಂತದ ಭದ್ರತೆ: ಭಾರ್ತಿ ಏರ್‌ಟೆಲ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಗೋಪಾಲ್ ವಿಠ್ಠಲ್ ಮಾತನಾಡಿ, "ಸ್ಪ್ಯಾಮ್ ಕರೆಗಳು ಮತ್ತು ಸಂದೇಶಗಳು ಗ್ರಾಹಕರಿಗೆ ದೊಡ್ಡ ಸಮಸ್ಯೆಯಾಗಿದೆ. ಇದನ್ನು ಪರಿಹರಿಸಲು ನಾವು ಕಳೆದ 12 ತಿಂಗಳಿನಿಂದ ಶ್ರಮಿಸಿದೆವು. ಇದರ ಫಲವಾಗಿ ದೇಶದ ಮೊದಲ AIಸಕ್ರಿಯಗೊಳಿಸಿದ ಸ್ಪ್ಯಾಮ್-ಮುಕ್ತ ನೆಟ್‌ವರ್ಕ್ ಅನ್ನು ಪ್ರಾರಂಭಿಸಿದ್ದು, ಇದೊಂದು ಮೈಲಿಗಲ್ಲು" ಎಂದರು.

ಡಬಲ್​ ಲೆಯರ್ಸ್​ ಫಿಲ್ಟರ್ಸ್​: "ಡಬಲ್ ಲೇಯರ್ ಭದ್ರತೆಯಾಗಿ ವಿನ್ಯಾಸಗೊಳಿಸಲಾದ ಪರಿಹಾರ ಕ್ರಮವು ಎರಡು ರೀತಿಯ ಫಿಲ್ಟರ್‌ಗಳನ್ನು ಹೊಂದಿದೆ. ಮೊದಲನೆಯದು ನೆಟ್‌ವರ್ಕ್ ಮಟ್ಟದಲ್ಲಿ ಮತ್ತು ಎರಡನೆಯದು ಐಟಿ ಸಿಸ್ಟಮ್ ಮಟ್ಟದಲ್ಲಿ. ಪ್ರತಿ ಕರೆ ಮತ್ತು SMS ಈ ಡಬಲ್ ಲೇಯರ್ AI ಶೀಲ್ಡ್ ಮೂಲಕ ಹಾದುಹೋಗುತ್ತದೆ. AI ಪ್ರತಿದಿನ ಎರಡು ಮಿಲಿಸೆಕೆಂಡ್‌ಗಳಲ್ಲಿ 150 ಕೋಟಿ ಸಂದೇಶಗಳನ್ನು ಮತ್ತು 250 ಕೋಟಿ ಕರೆಗಳನ್ನು ಪ್ರಕ್ರಿಯೆಗೊಳಿಸುತ್ತದೆ. ಇದು AI ಶಕ್ತಿಯನ್ನು ಬಳಸಿಕೊಂಡು ನೈಜ ಸಮಯದ ಆಧಾರದ ಮೇಲೆ 10 ಟ್ರಿಲಿಯನ್ ದಾಖಲೆಗಳನ್ನು ಪ್ರಕ್ರಿಯೆಗೊಳಿಸುವುದಕ್ಕೆ ಸಮಾನ. AI 10 ಕೋಟಿ ಸಂಭಾವ್ಯ ಸ್ಪ್ಯಾಮ್ ಕರೆಗಳನ್ನು ಮತ್ತು ಪ್ರತಿದಿನ ಸ್ವೀಕರಿಸಿದ 3 ಮಿಲಿಯನ್ ಸ್ಪ್ಯಾಮ್ SMS ಅನ್ನು ಯಶಸ್ವಿಯಾಗಿ ಗುರುತಿಸಲು ಸಾಧ್ಯವಾಗುತ್ತದೆ. ನಮ್ಮ ಗ್ರಾಹಕರನ್ನು ಸುರಕ್ಷಿತವಾಗಿರಿಸುವುದಕ್ಕೆ ಪ್ರಮುಖ ಆದ್ಯತೆ ನೀಡುತ್ತಿದ್ದೇವೆ" ಎಂದು ಗೋಪಾಲ್ ವಿಠ್ಠಲ್ ಹೇಳಿದರು.

AI ಅನ್ನು ಏರ್‌ಟೆಲ್‌ನಿಂದಲೇ ವಿನ್ಯಾಸ ಮತ್ತು ಅಭಿವೃದ್ಧಿಪಡಿಸಲಾಗಿದೆ. ಕಂಪನಿಯ ಅಲ್ಗಾರಿದಮ್ ಒಳಬರುವ ಕರೆಗಳು ಮತ್ತು SMS ಅನ್ನು 'ಅನುಮಾನಾಸ್ಪದ ಸ್ಪ್ಯಾಮ್' ಎಂದು ಗುರುತಿಸಲು ಬಳಸಲಾಗುತ್ತದೆ. ಈ ಅಲ್ಗಾರಿದಮ್ ಮಾದರಿ, ಆವರ್ತನ, ಅವಧಿ ಮತ್ತು ಇತರ ಹಲವು ನಿಯತಾಂಕಗಳ ಪ್ರಕಾರ ಕರೆಗಳು ಮತ್ತು SMS ಅನ್ನು ವಿಶ್ಲೇಷಿಸಬಹುದು. AI ಯಾವುದೇ ಸ್ಪ್ಯಾಮ್ ಕರೆಗಳಾಗಲಿ ಮತ್ತು ಸಂದೇಶಗಳಾಗಲಿ SMS ಮೂಲಕ ಗ್ರಾಹಕರನ್ನು ಎಚ್ಚರಿಸುತ್ತದೆ.

ಇದನ್ನೂ ಓದಿ:ವೊಡಾಫೋನ್, ಜಿಯೋ, ಏರ್‌ಟೆಲ್: ಉತ್ತಮ ಡೇಟಾ ಪ್ಲಾನ್​ಗಳ ವಿವರ ಇಲ್ಲಿದೆ - Daily Data Prepaid Plans

ABOUT THE AUTHOR

...view details