ಮೈಸೂರು:ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು, ಸಹೋದರರಿಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ನಗರದ ತಿಬ್ಬಾದೇವಿ ಸರ್ಕಲ್ನಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಐವರನ್ನು ಸರಸ್ವತಿಪುರಂ ಪೊಲೀಸರು ಬಂಧಿಸಿದ್ದಾರೆ.
ನಗರದ ಕೆ.ಜಿ.ಕೊಪ್ಪಲಿನ ನಿವಾಸಿಗಳಾದ ರವಿಕುಮಾರ್ (26) ಮತ್ತು ಶಿವಕುಮಾರ್ (24) ಹಲ್ಲೆಗೊಳಗಾಗಿ ತೀವ್ರವಾಗಿ ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳನ್ನು ಬಿಜಿಎಸ್ ಅಪೊಲೋ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಿದ್ದು, ಹಲ್ಲೆ ಮಾಡಿದವರ ವಿರುದ್ಧ ತಾಯಿ ವಸಂತ ಅವರು ದೂರು ನೀಡಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ 2 ಗುಂಪುಗಳ ನಡುವೆ ಮಾರಾಮಾರಿ (ETV Bharat) ದೂರು ದಾಖಲಿಸಿಕೊಂಡ ಸರಸ್ವತಿಪುರಂ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಟಿ.ಎಸ್.ಮಹೇಂದ್ರ, ಹಲ್ಲೆ ಆರೋಪಿಗಳಾದ ರೇಣುಕಾಪ್ರಸಾದ್, ಗುರು, ಮಣಿ, ಪವನ್ ಹಾಗೂ ಕುಮಾರಸ್ವಾಮಿ ಅವರನ್ನು ಬಂಧಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆ 2023ರ 109,115,(2),3(5) ಸೆಕ್ಷನ್ಗಳಡಿ ಪ್ರಕರಣ ದಾಖಲಾಗಿದೆ.
ಗಲಾಟೆಗೆ ಕಾರಣ: ಜನವರಿ 6ರ ಸಂಜೆ ಸಮಯದಲ್ಲಿ ಕುವೆಂಪುನಗರದ ಜ್ಯೋತಿ ಶಾಲೆಯ ಬಳಿ ತನ್ನ ಸ್ನೇಹಿತರೊಂದಿಗೆ ಮಾತನಾಡುತ್ತಾ, ಕುಳಿತ್ತಿರುವಾಗ ಅದೇ ಮಾರ್ಗದಲ್ಲಿ ಹೋಗುತ್ತಿದ್ದ ರೇಣುಕಾಪ್ರಸಾದ್ ಸಹೋದರರ ಮೇಲೆ ಏಕಾಏಕಿ ಹಲ್ಲೆ ಮಾಡಿ ಬಟ್ಟೆ ಹರಿದು ಹಾಕಿ ಹೋಗಿದ್ದಾರೆ. ನಂತರ ಈ ವಿಚಾರವಾಗಿ ರಾತ್ರಿ 8 ಗಂಟೆಗೆ ತಿಬ್ಬಾದೇವಿ ಸರ್ಕಲ್ ಬಳಿ ಇರುವ ಟೀ ಸ್ಟಾಲ್ ಬಳಿ ಹೋದಾಗ ಅಲ್ಲೇ ಇದ್ದ ರೇಣುಕಾಪ್ರಸಾದ್, ಗುರು, ಮಣಿ, ಪವನ್, ಕುಮಾರಸ್ವಾಮಿ ಏಕಾಏಕಿ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ ಮತ್ತು ಘಟನೆಯಲ್ಲಿ ಶಿವಕುಮಾರ್ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಳುವಾಗಿದೆ ಎಂದು ದೂರಿನಲ್ಲಿ ವಸಂತ ತಿಳಿಸಿದ್ದಾರೆ.
ಇದನ್ನೂ ಓದಿ:ಕುರ್‌ಕುರೇ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಮಾರಾಮಾರಿ: ಬಂಧನ ಭೀತಿಯಿಂದ ಗ್ರಾಮ ತೊರೆದ ಜನ - KURKURE ISSUE