ಚಾಮರಾಜನಗರ:ಒಂದೇ ಸ್ಥಾನಕ್ಕೆ ಇಬ್ಬರು ಅಧಿಕಾರಿಗಳು ಪೈಪೋಟಿ ನಡೆಸಿ ಕಚೇರಿಯಲ್ಲಿ ಕುಳಿತ ಘಟನೆ ಗುಂಡ್ಲುಪೇಟೆ ಪುರಸಭೆಯಲ್ಲಿ ಇಂದು ಸಂಜೆ ನಡೆದಿದೆ.
ಗುಂಡ್ಲುಪೇಟೆ ಪುರಸಭೆಗೆ ಈ ಹಿಂದೆ ಮುಖ್ಯಾಧಿಕಾರಿಯಾಗಿದ್ದ ವಸಂತ ಕುಮಾರಿ ಅವರನ್ನು ಸ್ಥಳ ತೋರದೆ ವರ್ಗಾವಣೆ ಮಾಡಲಾಗಿತ್ತು. ಇವರ ಸ್ಥಾನಕ್ಕೆ ಎಸ್.ಸರವಣ ವರ್ಗಾವಣೆಗೊಂಡು ಕಳೆದ 10 ದಿನದ ಹಿಂದೆ ಅಧಿಕಾರ ವಹಿಸಿಕೊಂಡಿದ್ದರು.
ಪುರಸಭೆ ಮುಖ್ಯಾಧಿಕಾರಿ ಎಸ್. ಸರವಣ ಮಾತನಾಡಿದರು (ETV Bharat) ಗ್ರೇಡ್-1 ಹುದ್ದೆ ಅದಾಗಿದ್ದು, ಸರವಣ ಗ್ರೇಡ್-2 ಅಧಿಕಾರಿಯಾಗಿದ್ದಾರೆ. ತನಗಿನ್ನೂ 4 ತಿಂಗಳು ಕರ್ತವ್ಯ ಬಾಕಿ ಇದ್ದು, ವರ್ಗಾವಣೆ ರದ್ದುಗೊಳಿಸುವಂತೆ ಕೆಎಟಿ ಮೆಟ್ಟಿಲೇರಿದ್ದ ವಸಂತ ಕುಮಾರಿ ವರ್ಗಾವಣೆ ರದ್ದು ಮಾಡಿಸಿದ್ದರು.
ಗುಂಡ್ಲುಪೇಟೆ ಪುರಸಭೆ (ETV Bharat) ಅದರಂತೆ, ಆದೇಶ ಪತ್ರ ಹಿಡಿದು ಬಂದ ವಸಂತ ಕುಮಾರಿ ಅವರಿಗೆ ಸರವಣ ಅಧಿಕಾರ ಹಸ್ತಾಂತರ ಮಾಡದ ಹಿನ್ನೆಲೆಯಲ್ಲಿ ಮುಖ್ಯಾಧಿಕಾರಿ ಕಚೇರಿಯಲ್ಲಿ ಇಬ್ಬರು ಅಧಿಕಾರಿಗಳು ಕರ್ತವ್ಯ ನಿರ್ವಹಿಸಿದ್ದಾರೆ.
ಇದನ್ನೂ ಓದಿ :ಕೊಳ್ಳೇಗಾಲ ನಗರಸಭೆ ಸಿಬ್ಬಂದಿ ಎಡವಟ್ಟು: ಮರಣ ಪ್ರಮಾಣ ಪತ್ರದಲ್ಲಿ ತಾಯಿ ಬದಲು ಮಗನ ಹೆಸರು! - DEATH CERTIFICATE