ವಿಜಯನಗರ:ಹಂಪಿ ಉತ್ಸವದ ನಿಮಿತ್ತ ಬುಧವಾರ ರಾತ್ರಿ ವಿರೂಪಾಕ್ಷೇಶ್ವರ ದೇವಸ್ಥಾನ ಬಳಿಯ ತುಂಗಭದ್ರಾ ನದಿ ತಟದಲ್ಲಿ ತುಂಗಾರತಿ ಮಾಡುವ ಮೂಲಕ ನಾಡಿನ ಸುಭಿಕ್ಷೆಗೆ ಪ್ರಾರ್ಥಿಸಲಾಯಿತು.
ಹಾಗೇ ತಾಯಿ ಭುವನೇಶ್ವರಿ ದೇವಿಗೆ ಕುಂಕುಮಾರ್ಚನೆ ಹಾಗೂ ಅಭಿಷೇಕ ನೆರವೇರಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಗಣ್ಯರ ಜತೆಗೆ ತುಂಗಭದ್ರಾ ನದಿಗೆ ಹೂವು, ಹಾಲು, ತುಪ್ಪ, ಮೊರದಲ್ಲಿ ಬಾಗಿನ ಸಮರ್ಪಿಸಿದರು.
ಹಂಪಿ ಉತ್ಸವ: ಸಚಿವ ಜಮೀರ್ ಅಹ್ಮದ್ ಸಹ ಗಣ್ಯರಿಂದ ತುಂಗಾರತಿ: ನಾಡಿನ ಸುಭಿಕ್ಷೆಗೆ ಪ್ರಾರ್ಥನೆ (ETV Bharat) ಗಂಗೆ ಸೇರಿದಂತೆ ನಾಡಿನ ಪವಿತ್ರ ನದಿಗಳು, ವರುಣ ದೇವನನ್ನು ಸ್ಮರಿಸಿ ತುಂಗಾರತಿ ಕೈಗೊಳ್ಳಲಾಯಿತು. ಈ ಬಾರಿ ನಾಡಿನಾದ್ಯಂತ ಉತ್ತಮ ಮಳೆಯಾಗಿ, ಎಲ್ಲ ನದಿಗಳು ತುಂಬಿ ಹರಿಯಲಿ. ಜಲಾಶಯಗಳು ಭರ್ತಿಯಾಗಿ, ರೈತರು ಉತ್ತಮ ಬೆಳೆ ಬೆಳೆದು ನಾಡು ಸುಭಿಕ್ಷವಾಗಲಿ ಎಂದು ಹಂಪಿ ವಿರೂಪಾಕ್ಷ ಸೇರಿದಂತೆ ಸಮಸ್ತ ದೇವತೆಗಳಲ್ಲಿ ಪ್ರಾರ್ಥಿಸಲಾಯಿತು.
ಹಂಪಿ ಉತ್ಸವ: ಸಚಿವ ಜಮೀರ್ ಅಹ್ಮದ್ ಸಹ ಗಣ್ಯರಿಂದ ತುಂಗಾರತಿ: ನಾಡಿನ ಸುಭಿಕ್ಷೆಗೆ ಪ್ರಾರ್ಥನೆ (ETV Bharat) ಈ ವೇಳೆ ಹೊಸಪೇಟೆ ಶಾಸಕ ಹೆಚ್. ಆರ್. ಗವಿಯಪ್ಪ, ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್, ಎಸ್ಪಿ ಶ್ರೀಹರಿಬಾಬು ಕಾರ್ಯಕ್ರಮದಲ್ಲಿ ಜಿ.ಪಂ ಸಿಇಒ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದರು.
ಇದನ್ನೂ ಓದಿ:ಹುಬ್ಬಳ್ಳಿಯಲ್ಲಿ ಇಂದು ಸಿದ್ಧಾರೂಢ ಸ್ವಾಮೀಜಿ ರಥೋತ್ಸವ, ಭಕ್ತರಿಗಾಗಿ ವಿಶೇಷ ಬಸ್ ಸೇವೆ