ಕರ್ನಾಟಕ

karnataka

ETV Bharat / state

ಚಾಮರಾಜನಗರದಲ್ಲಿ ಗಜ ಗಣತಿ ಆರಂಭ: ಮೊದಲ ದಿನ ಆನೆ ಹಿಂಡು ಲೆಕ್ಕ ಹಾಕಿದ ಸಿಬ್ಬಂದಿ - Elephant Census - ELEPHANT CENSUS

ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಬಿಳಿಗಿರಿರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಕಾವೇರಿ ವನ್ಯಜೀವಿಧಾಮದಲ್ಲಿ ಗುರುವಾರದಿಂದ ಆನೆ ಗಣತಿ ಕಾರ್ಯ ಆರಂಭವಾಗಿದೆ.

ELEPHANT CENSUS IN CHAMARAJANAGAR
ಚಾಮರಾಜನಗರದಲ್ಲಿ ಗಜ ಗಣತಿ ಆರಂಭ (ETV Bharat)

By ETV Bharat Karnataka Team

Published : May 23, 2024, 7:14 PM IST

ಚಾಮರಾಜನಗರದಲ್ಲಿ ಗಜ ಗಣತಿ ಆರಂಭ (ETV Bharat)

ಚಾಮರಾಜನಗರ:ಜಿಲ್ಲೆಯಲ್ಲಿ ಅರಣ್ಯ ಇಲಾಖೆಯು ಇಂದಿನಿಂದ ಮೂರು ದಿನಗಳ ಗಜ ಗಣತಿ ಆರಂಭಿಸಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಬಿಳಿಗಿರಿರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಕಾವೇರಿ ವನ್ಯಜೀವಿಧಾಮದಲ್ಲಿ ಮೊದಲ ದಿನ ಸಿಬ್ಬಂದಿ ಗಣತಿ ಕಾರ್ಯ ನಡೆಸಿದರು.

ಇಂದು ಆರಂಭವಾಗಿರುವ ಆನೆ ಗಣತಿ ಕಾರ್ಯ ಮೇ 25 ರವರೆಗೆ ನಡೆಯಲಿದೆ. ಮೊದಲ ದಿನವಾದ ಇಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಒಟ್ಟು 13 ವಲಯದ 113 ಬೀಟ್​ಗಳು, ಕಾವೇರಿ ವನ್ಯಜೀವಿಧಾಮದ 43 ಗಸ್ತುಗಳ‌ 72 ಬ್ಲಾಕ್​ಗಳಲ್ಲಿ 162 ಸಿಬ್ಬಂದಿ ಮತ್ತು ಬಿಳಿಗಿರಿರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ 170 ಸಿಬ್ಬಂದಿ ಆನೆ ಗಣತಿ ಕೈಗೊಂಡರು.

ಗಜ ಗಣತಿಯು ಮೂರು ದಿನಗಳ ಕಾಲ ಬೆಳಗ್ಗೆ 6ರಿಂದ ಸಂಜೆ 6 ಗಂಟೆಯವರೆಗೆ ನಡೆಯಲಿದೆ. ಗುರುವಾರ 15 ಕಿಮೀ ನಡೆದು ಆನೆ ಗುಂಪುಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಲೆಕ್ಕ ಹಾಕಿದ್ದಾರೆ. ಆನೆ ಗುಂಪಿನಲ್ಲಿ ಎಷ್ಟು ಹೆಣ್ಣಾನೆಗಳಿವೆ?, ಎಷ್ಟು ಮರಿಗಳಿವೆ?, ಗುಂಪಿನಲ್ಲಿ ಎಷ್ಟು ಆನೆಗಳಿವೆ?ಎಂಬುದನ್ನು ಗುರುತು ಮಾಡಲಾಗಿದೆ. ಪ್ರತಿ ಬೀಟ್​ನಲ್ಲೂ ಮೂವರು ಸಿಬ್ಬಂದಿ ನಡೆದುಕೊಂಡೇ ಆನೆ ಗುಂಪುಗಳನ್ನು ಕಂಡು ಈ ಲೆಕ್ಕ ಹಾಕಿದ್ದಾರೆ.

ಎರಡನೇ ದಿನದಂದು ಆನೆ ಲದ್ದಿಯನ್ನು ಪತ್ತೆ ಹಚ್ಚಿ ಒಂಟಿ ಆನೆಯೋ, ಗುಂಪುಗಳ ಆನೆಯೋ ಎಂದು ಆ ಪರಿಸರದಲ್ಲಿ ಆನೆಗಳ ಅಂದಾಜು ಲೆಕ್ಕ ಹಾಕಲಾಗುತ್ತದೆ. ಮೂರನೇ ದಿನ ಕೆರೆಗಳ ಬಳಿ ಸಿಬ್ಬಂದಿ ಬೆಳಗ್ಗೆಯಿಂದ ಸಂಜೆವರೆಗೆ ಕಾದು ನೀರು ಕುಡಿಯುವಾಗ ಬರುವ ಆನೆಗಳನ್ನು ಸಿಬ್ಬಂದಿ ಲೆಕ್ಕ ಹಾಕಲಿದ್ದಾರೆ. ಒಟ್ಟಾರೆಯಾಗಿ 3 ದಿನಗಳಲ್ಲಿ ಕಂಡ ಆನೆಗಳ ಲೆಕ್ಕವನ್ನು ತುಲನಾತ್ಮಕವಾಗಿ ಪರಿಶೀಲಿಸಿ ಆನೆಗಳ ಅಂದಾಜು ಲೆಕ್ಕವನ್ನು ಹಾಕಲಾಗುತ್ತದೆ ಎಂದು ಬಿಳಿಗಿರಿರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದ (ಬಿಆರ್​ಟಿ) ಡಿಸಿಎಫ್ ದೀಪ್.ಜೆ ತಿಳಿಸಿದ್ದಾರೆ.

4 ರಾಜ್ಯಗಳಲ್ಲಿ ಏಕಕಾಲಕ್ಕೆ ಆನೆ ಗಣತಿ:ಇದು ಎರಡನೇ ಆನೆ ಗಣತಿಯಾಗಿದೆ. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳ ಸೇರಿ ದಕ್ಷಿಣ ಭಾರತದ ನಾಲ್ಕು ರಾಜ್ಯಗಳಲ್ಲಿ ಏಕಕಾಲಕ್ಕೆ ಆನೆ ಗಣತಿ ನಡೆಯುತ್ತಿದೆ. ಆನೆಗಳ ಬಾಹ್ಯ ಗಾಯಗಳು, ದಂತದ ಗಾತ್ರ ಮತ್ತು ಅದರ ದಂತವಿಲ್ಲದ ಗಂಡು ಆನೆ ಸಂಖ್ಯೆಯನ್ನೂ ಪತ್ತೆ ಮಾಡಲಾಗುತ್ತದೆ. ಆನೆಗಳ ನಡವಳಿಕೆ ಮತ್ತು ಚಲನವಲನಗಳ ಬಗ್ಗೆಯೂ ಅಧ್ಯಯನ ನಡೆಸಲಾಗುತ್ತದೆ.

ಇದನ್ನೂ ಓದಿ:ಎರಡನೇ ವರ್ಷದ ಆನೆ ಗಣತಿಗೆ ದಕ್ಷಿಣ ಭಾರತದ 4 ರಾಜ್ಯಗಳು ಸಜ್ಜು

ABOUT THE AUTHOR

...view details