ಹುಬ್ಬಳ್ಳಿ: ಕೇಂದ್ರದ ಬಜೆಟ್ ಕುರಿತು ಹುಬ್ಬಳ್ಳಿಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಮಧ್ಯಂತರ ಬಜೆಟ್ನಲ್ಲಿ ಪ್ರಮುಖವಾಗಗಿ ನಾಲ್ಕು ಸೆಕ್ಟರ್ಗಳಿಗೆ ಆದ್ಯತೆ ನೀಡಲಾಗಿದೆ. ಒಂದು ಕೋಟಿ ಮನೆಗಳಿಗೆ ಸೋಲಾರ್ ಫಲಕ ಅಳವಡಿಕೆ, ಮಹಿಳೆಯರಿಗೆ ಸರ್ವೈಕಲ್ ಕ್ಯಾನ್ಸರ್ ಲಸಿಕೆ, ಯುವ ಜನತೆಗೆ ಆದ್ಯತೆ, ಬಡವರಿಗೆ ಮನೆ ನಿರ್ಮಾಣದ ಬಗ್ಗೆ ಬಜೆಟ್ನಲ್ಲಿ ಉಲ್ಲೇಖಿಸಲಾಗಿದೆ.
ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಎಸ್ ಪಿ ಸಂಶಿಮಠ, ಜಿಎಸ್‌ಟಿಯಲ್ಲಿ ಸರಳೀಕರಣ ಮಾಡ್ತಾರೆ ಅಂತ ಅಂದುಕೊಂಡಿದ್ದೆವು. ಆದರೆ, ನಮ್ಮ ನಿರೀಕ್ಷೆ ಹುಸಿಯಾಗಿದೆ. ಇದೊಂದು ಮಧ್ಯಂತರ ಬಜೆಟ್ ಆಗಿರುವುದರಿಂದ ವಿಶೇಷವೇನು ಇಲ್ಲ. ಹಳೇ ಯೋಜನೆಗಳನ್ನೇ ಮುಂದುವರೆಸಿಕೊಂಡು ಹೋಗಿದ್ದಾರೆ. ಹೇಳಿಕೊಳ್ಳುವಂತಹ ಯಾವುದೇ ಯೋಜನೆಗಳನ್ನು ಘೋಷಣೆ ಮಾಡಿಲ್ಲ. ಇದೊಂದು ಸಾಮಾನ್ಯ ಬಜೆಟ್ ಎಂದು ತಿಳಿಸಿದ್ದಾರೆ.
ಆದಾಯ ತೆರಿಗೆ ಪ್ರಸ್ತಾವನೆ ಇಲ್ಲದ್ದಕ್ಕೆ ಬೇಸರ:ಇದೇ ವೇಳೆ ಮಾತನಾಡಿದ ಚಾರ್ಟರ್ಡ್ ಅಕೌಂಟೆಂಟ್ ವೈ ಎಂ ಕಟಾವಕರ್, ಈ ಬಜೆಟ್ನಲ್ಲಿ ಆದಯಾ ತೆರಿಗೆ ಬಗ್ಗೆ ಯಾವುದೇ ಪ್ರಸ್ತಾವನೆ ಆಗಿಲ್ಲ. ಹಿಂದಿನ ವರ್ಷ ಬಜೆಟ್ನಲ್ಲಿ ಘೋಷಣೆ ಮಾಡಿದ್ದ ತೆರಿಗೆ ವಿನಾಯಿತಿಯನ್ನು ಮುಂದು ವರೆಸಿದ್ದಾರೆ. ಜಿಎಸ್ಟಿ ಬಗ್ಗೆ ನಿರೀಕ್ಷೆ ಇತ್ತು. ಇದನ್ನು ತಗೆದುಕೊಂಡಿಲ್ಲ. ಹೀಗಾಗಿ ಕೈಗಾರಿಕೋದ್ಯಮಿಗಳಿಗೆ ಅಸಮಾಧಾನವಾಗಿದೆ. ಮುಂಬರು ಬಜೆಟ್ನಲ್ಲಾದರೂ ಈ ಬಗ್ಗೆ ಗಮನ ಹರಿಸಿ ಪ್ರಸ್ತಾವನೆ ಮಾಡಬೇಕಿದೆ. ಉಳಿದಂತೆ ಇದರಲ್ಲಿ ಯಾವುದೇ ಗ್ಯಾರಂಟಿಗಳ ಘೋಷಣೆಯಾಗಿಲ್ಲ. ಉಚಿತ ಭಾಗ್ಯಗಳ ಘೋಷಣೆಯಾಗಿಲ್ಲ. ಯಾವುದೇ ವಿನಾಯಿತಿ ಘೋಷಣೆಗಯಾಗದಿರುವುದು ಬಜೆಟ್ನ ವಿಶೇಷವಾಗಿದೆ. ಇದೊಂದು ಯಥಾಸ್ಥಿತಿಯ ಬಜೆಟ್ ಆಗಿದೆ ಎಂದು ಹೇಳಿದರು.