ಬೆಂಗಳೂರು: ಭಾನುವಾರ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್ ಮೈದಾನದಿಂದ ಪ್ರಾರಂಭವಾಗಲಿರುವ ಟಿ.ಸಿ.ಎಸ್ ವರ್ಲ್ಡ್ 10 ಕೆ ನೆಡೆಯಲಿದೆ. ಈ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋ ಎಲ್ಲ ನಾಲ್ಕು ಟರ್ಮಿನಲ್‌ಗಳಿಂದ ಬೆಳಗ್ಗೆ 7ರ ಬದಲಿಗೆ 3.35ಕ್ಕೆ ತನ್ನ ರೈಲು ಸೇವೆಗಳನ್ನು ಪ್ರಾರಂಭಿಸಲಿದೆ.
ನಾಗಸಂದ್ರ, ಸಿಲ್ಕ್ ಇನ್‌ಸ್ಟಿಟ್ಯೂಟ್, ಚಲ್ಲಘಟ್ಟ, ಮತ್ತು ವೈಟ್‌ಫೀಲ್ಡ್ (ಕಾಡುಗೋಡಿ) ಮೆಟ್ರೋ ನಿಲ್ದಾಣಗಳಿಂದ ಬೆಳಗಿನಜಾವ 3.35 ಕ್ಕೆ ಪ್ರಾರಂಭವಾಗಲಿದೆ. ರೈಲುಗಳು 3.35 ರಿಂದ 4:25ರ ವರೆಗೆ 10 ನಿಮಿಷಗಳ ಅಂತರದಲ್ಲಿ ಚಲಿಸಲಿವೆ ಎಂದು ಬಿ.ಎಂ.ಆರ್.ಸಿ.ಎಲ್ ತಿಳಿಸಿದೆ. ನಾಡಪ್ರಭು ಕೆಂಪೇಗೌಡ ಸ್ಟೇಷನ್ ಮೆಜೆಸ್ಟಿಕ್‌ನಿಂದ ಎಂಜಿ ರಸ್ತೆ ಕಡೆಗೆ ಮೊದಲ ರೈಲು ಸೇವೆಯು ಬೆಳಗ್ಗೆ 4.10 ಕ್ಕೆ ಇರುತ್ತದೆ ಮತ್ತು ನಂತರ 10 ನಿಮಿಷಗಳ ಅಂತರದಲ್ಲಿ ಬೆಳಗ್ಗೆ 5 ರವರೆಗೆ ಚಲಿಸಲಿವೆ ಮತ್ತು ನಂತರ ರೈಲುಗಳು ಎಂದಿನಂತೆ ಓಡಾಡದಲಿವೆ ಎಂದಿದೆ.