ಶಿವಮೊಗ್ಗ:ಮಹಾನಗರಗಳಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದ ಸಣ್ಣ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್ ಆಫ್ ಇಂಡಿಯಾದ(SIDBI) ಶಿವಮೊಗ್ಗದ ಶಾಖೆಗೆ ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ವರ್ಚುವಲ್ ಮೂಲಕ ಚಾಲನೆ ನೀಡಿದ್ದಾರೆ.
ಶಿವಮೊಗ್ಗ ವಿನೋಬನಗರದಲ್ಲಿನ ಕಚೇರಿಯನ್ನು ಸಂಸದ ಬಿ.ವೈ.ರಾಘವೇಂದ್ರ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ನಮ್ಮ ಶಿವಮೊಗ್ಗಕ್ಕೆ ಎಸ್ಐಡಿಬಿಐ ಬ್ರಾಂಚ್ ಬೇಕು ಎಂದು ನಾವು ವಿನಂತಿಸಿದ್ದೆವು. ಇದಕ್ಕೆ ಸ್ಪಂದಿಸಿದ ನಿರ್ಮಲಾ ಸೀತರಾಮನ್ ಅವರಿಗೆ ಜಿಲ್ಲೆಯ ಪರವಾಗಿ ಅಭಿನಂದನೆಗಳು ಎಂದರು.
ಶಿವಮೊಗ್ಗದಲ್ಲಿ ಎಸ್ಐಡಿಬಿಐ ಬ್ಯಾಂಕ್ ಶಾಖಾ ಕಚೇರಿಗೆ ಚಾಲನೆ (ETV Bharat) ಎಸ್ಐಡಿಬಿಐ ಬ್ಯಾಂಕ್ನಿಂದ ಸಾಕಷ್ಟು ಅನುಕೂಲಗಳಿವೆ. ಎಂಎಸ್ಎಂಇನಲ್ಲಿನ ಅನುಕೂಲಗಳು ಬೃಹತ್ ನಗರಗಳಿಗೆ ಮಾತ್ರ ಸಿಗುತ್ತಿತ್ತು. ಇದೀಗ ಶಿವಮೊಗ್ಗದಂತಹ ಸಣ್ಣ ನಗರಕ್ಕೂ ಸಹ ಎಸ್ಐಡಿಬಿಐ ಬ್ಯಾಂಕ್ ಬಂದಿದೆ. ಇದರ ಸದುಪಯೋಗವನ್ನು ಎಲ್ಲರೂ ಮಾಡಿಕೊಳ್ಳಬೇಕು ಎಂದು ವಿನಂತಿಸಿಕೊಂಡರು.
ಎಸ್ಐಡಿಬಿಐ ಬ್ಯಾಂಕ್ನ ಹುಬ್ಬಳ್ಳಿಯ ಡೆಪ್ಯೂಟಿ ಮ್ಯಾನೇಜರ್ ಗುಣಶೇಖರನ್, ಶಿವಮೊಗ್ಗ ಎಸ್ಐಡಿಬಿಐ ಬ್ಯಾಂಕ್ ಮ್ಯಾನೇಜರ್ ಶಿವಕುಮಾರ್, ಶಾಸಕರಾದ ಚನ್ನಬಸಪ್ಪ, ಧನಂಜಯ್ ಸರ್ಜಿ ಸೇರಿದಂತೆ ಶಿವಮೊಗ್ಗದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರು, ಪದಾಧಿಕಾರಿಗಳು, ಜಿಲ್ಲಾ ಕೈಗಾರಿಕಾ ಸಂಘದ ಪದಾಧಿಕಾರಿಗಳು ಹಾಜರಿದ್ದರು.
ಇದನ್ನೂ ಓದಿ:ಸಿಎಂ ಸಿದ್ದರಾಮಯ್ಯನವರ ದ್ವೇಷ ರಾಜಕಾರಣಕ್ಕೆ ನಾವು ಬಗ್ಗಲ್ಲ: ಸಚಿವ ಪ್ರಹ್ಲಾದ್ ಜೋಶಿ