ಕರ್ನಾಟಕ

karnataka

ETV Bharat / state

1 ಬೈಕ್, 20 ದಿನ, 12 ಜ್ಯೋತಿರ್ಲಿಂಗಗಳ ದರ್ಶನ: ಮೈಕ್ರೋ ಲ್ಯಾಬ್ಸ್‌ ಪ್ರವೀಣ್‌ ಸಿಂಗ್‌ ಸಾಹಸ - 12 jyotirlingas

ಪ್ರವೀಣ್‌ ಸಿಂಗ್‌ ಅವರು ತಮ್ಮ ಬೈಕ್‌ನಲ್ಲಿ 12 ಜ್ಯೋತಿರ್ಲಿಂಗಗಳ ದರ್ಶನವನ್ನು 20 ದಿನಗಳಲ್ಲಿ ಪೂರ್ಣಗೊಳಿಸಿ ಗಮನ ಸೆಳೆದಿದ್ದಾರೆ.

Etv Bharatmotorbike-pilgrimage-expedition-to-12-jyotirlingas-by-praveen-singh
20 ದಿನಗಳಲ್ಲೇ ಬೈಕ್​ನಲ್ಲಿ 12 ಜ್ಯೋತಿರ್ಲಿಂಗಗಳ ದರ್ಶನ ಪಡೆದ ಮೈಕ್ರೋ ಲ್ಯಾಬ್ಸ್‌ ಪ್ರವೀಣ್‌ ಸಿಂಗ್‌

By ETV Bharat Karnataka Team

Published : Feb 7, 2024, 9:29 PM IST

ಬೆಂಗಳೂರು: ದೇಶದ ಪ್ರತಿಷ್ಠಿತ ಔಷಧಿ ಕಂಪನಿಯಾದ ಮೈಕ್ರೋ ಲ್ಯಾಬ್ಸ್​ನ ಮಾರುಕಟ್ಟೆ ಮತ್ತು ಮಾರಾಟ ವಿಭಾಗದ ಉಪಾಧ್ಯಕ್ಷ ಪ್ರವೀಣ್‌ ಸಿಂಗ್‌ ಸಾಹಸಿ ಅಭಿಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಭಾರತದಾದ್ಯಂತ ಇರುವ 12 ಜ್ಯೋತಿರ್ಲಿಂಗಗಳನ್ನು ಬೈಕ್‌ ಮೂಲಕವೇ ಸುತ್ತಾಡಿದ್ದಾರೆ. ಈ ಮೂಲಕ ಧಾರ್ಮಿಕ ಪ್ರವಾಸಕ್ಕೆ ಹೊಸ ಆಯಾಮ ನೀಡಿದ್ದಾರೆ.

ಪ್ರವೀಣ್ ಸಿಂಗ್‌ ಅವರಿಗೆ ಬೈಕ್‌ ರೈಡಿಂಗ್‌ ಪ್ರವೃತ್ತಿಯಾಗಿದ್ದು, ರೈಡ್‌ ವಿತ್‌ ಪರ್ಪಸ್‌ ಎಂಬುದು ಇವರ ಧ್ಯೇಯವಾಕ್ಯ. ಇದೇ ಸದಾಶಯದೊಂದಿಗೆ ಸಾಂಸ್ಕೃತಿಕ ಮತ್ತು ಧಾರ್ಮಿಕ ಶ್ರೀಮಂತಿಕೆಯ ಸ್ಥಳಗಳಿಗೆ ಭೇಟಿ ನೀಡಿದ್ದಾರೆ.

12 ಜ್ಯೋತಿರ್ಲಿಂಗಗಳನ್ನು ಭಗವಾನ್‌ ಶಿವನ ಅಭಿವ್ಯಕ್ತಿ ಎಂದು ಪೂಜಿಸಲಾಗುತ್ತದೆ. ಈ ದೇವಾಲಯಗಳಲ್ಲಿನ ಪ್ರಾಥಮಿಕ ಚಿತ್ರಣವೆಂದರೆ ಲಿಂಗ. ಇದು ಶಿವನ ಅನಂತ ಸ್ವಭಾವವನ್ನು ಸಂಕೇತಿಸುತ್ತದೆ. ಮಾತ್ರವಲ್ಲದೇ ದೈವಿಕ ಶಕ್ತಿಯನ್ನು ಹೊರಸೂಸುತ್ತದೆ. ಜ್ಯೋತಿರ್ಲಿಂಗ ಶಬ್ದ ಶಿವನ ವಿಕಿರಣಗಳ ಸೂಚಕ. ಈ ಸ್ಥಳಗಳು ದೈವಿಕ ಬೆಳಕು ಮತ್ತು ಮಹತ್ವ ಸಾರುತ್ತವೆ. ಇಂತಹ ಮಹತ್ವದ ಮತ್ತು ಪವಿತ್ರ ಯಾತ್ರಾ ಸ್ಥಳಗಳಾದ ಜ್ಯೋತಿರ್ಲಿಂಗಗಳ ದರ್ಶನವನ್ನು ಪ್ರವೀಣ್‌ ಇಪ್ಪತ್ತು ದಿನಗಳಲ್ಲಿ ಪೂರ್ಣಗೊಳಿಸಿದ್ದಾರೆ. ಒಟ್ಟು 8,500 ಕಿ.ಮೀ ಗೂ ಅಧಿಕ ದೂರದ ಪಯಣವನ್ನು ಇವರು ಫಲಪ್ರದವಾಗಿ ಮುಗಿಸಿದ್ದಾರೆ.

"ನಮ್ಮ ಸಂಸ್ಕೃತಿಯಲ್ಲಿ ಹುದುಗಿರುವ ಆಧ್ಯಾತ್ಮಿಕ ಪರಂಪರೆಯನ್ನು ಬೆಳಗಿಸುವ ಜ್ಯೋತಿರ್ಲಿಂಗಗಳು ದೈವಿಕ ಶಕ್ತಿಯ ರೂಪಕ. ಆದ್ದರಿಂದ ಯುವ ಸಮೂಹವನ್ನು ಪ್ರೇರೆಪಿಸುವುದು ನಮ್ಮ ಗುರಿ. ಶ್ರೀಮಂತ ಪರಂಪರೆಯನ್ನು ರಕ್ಷಿಸುವ ಉದ್ದೇಶದಿಂದ ಇಂತಹ ಧಾರ್ಮಿಕ ಸಾಹಸ ಯಾತ್ರೆ ಕೈಗೊಂಡೆ" ಎಂದು ಪ್ರವೀಣ್‌ ಸಿಂಗ್‌ ಹೇಳಿದ್ದಾರೆ.

ಮೈಕ್ರೋ ಲ್ಯಾಬ್ಸ್‌ನ ಮಾನವ ಸಂಪನ್ಮೂಲ ವಿಭಾಗದ ಉಪಾಧ್ಯಕ್ಷ ವಿ.ಆರ್.‌ರಾಮಕೃಷ್ಣ ಈ ಕುರಿತು ಮಾತನಾಡಿ, "ಬೈಕ್‌ ಸವಾರಿ ವಾರಾಂತ್ಯದಲ್ಲಿ ಊಟ, ಉಪಹಾರಕ್ಕಾಗಿ ಅಲ್ಲ, ಜನಪ್ರಿಯ ತಾಣಗಳ ವೀಕ್ಷಣೆಗೂ ಅಲ್ಲ ಎಂದು ಪ್ರವೀಣ್‌ ತೋರಿಸಿದ್ದಾರೆ. ಅವರು ಸ್ಫೂರ್ತಿದಾಯಕವಾದ ಧಾರ್ಮಿಕ ಪ್ರವಾಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ವೈಯಕ್ತಿಕ ಭಾವನೆಗಳನ್ನು ಸಾಕಾರಗೊಳಿಸಿಕೊಳ್ಳುತ್ತಿರುವ ಜೊತೆಗೆ ಕೆಲಸದ ಬದ್ಧತೆಯನ್ನು ಸಮರ್ಥವಾಗಿ ಸಮತೋಲನದಿಂದ ತೆಗೆದುಕೊಂಡು ಹೋಗುವ ಪ್ರವೀಣ್‌ ಪ್ರಶಂಸೆಗೆ ಅರ್ಹರು" ಎಂದರು.

ಇದನ್ನೂ ಓದಿ:ಪ್ರವಾಸಕ್ಕೆ ಬಂದ ಜಪಾನ್ ಮಹಿಳೆ ಗೋಕರ್ಣದಲ್ಲಿ ನಾಪತ್ತೆ

ABOUT THE AUTHOR

...view details