ಕರ್ನಾಟಕ

karnataka

ETV Bharat / state

ಲೀಡರ್, ಐಡಿಯಾಲಜಿ ಎಲ್ಲಾ ಒಂದೇ; ಸಮಾವೇಶದ ಬ್ಯಾನರ್ ಅಷ್ಟೇ ಚೇಂಜ್ ಆಗಿದೆ: ಸಚಿವ ಸತೀಶ್ ಜಾರಕಿಹೊಳಿ - MINISTER SATISH JARKIHOLI REACT

ಹಾಸನದಲ್ಲಿ ಹಮ್ಮಿಕೊಂಡಿರುವ ಕಾಂಗ್ರೆಸ್ ಸಮಾವೇಶದ ಹೆಸರು ಬದಲಾವಣೆ ಕುರಿತು ಸಚಿವ ಸತೀಶ್ ಜಾರಕಿಹೊಳಿ ಸಮರ್ಥನೆ ನೀಡಿದರು. ಏನೇ ಮಾಡಿದರೂ ಅದು ಕಾಂಗ್ರೆಸ್​ಗೋಸ್ಕರ ಎಂದು ಹೇಳಿದರು.

MINISTER SATISH JARKIHOLI REACT
ಸಚಿವ ಸತೀಶ್ ಜಾರಕಿಹೊಳಿ (ETV Bharat)

By ETV Bharat Karnataka Team

Published : Dec 4, 2024, 4:51 PM IST

ಬೆಂಗಳೂರು: ಸಮಾವೇಶವನ್ನು ಡಿ ಕೆ ಶಿವಕುಮಾರ್ ಮಾಡಿದ್ರೂ ಕಾಂಗ್ರೆಸ್​ಗೆ. ಅಹಿಂದ ಮಾಡಿದ್ರೂ ಕಾಂಗ್ರೆಸ್​ಗೆ ಮಾಡೋದು ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.

ನಗರದಲ್ಲಿಂದು ಮಾತನಾಡಿದ ಅವರು, ಹಾಸನ ಸಮಾವೇಶ ಹೆಸರು ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಲೀಡರ್, ಐಡಿಯಾಲಜಿ ಎಲ್ಲಾ ಒಂದೇ ಆಗಿದೆ. ಆದರೆ, ಬ್ಯಾನರ್ ಚೇಂಜ್ ಆಗಿದೆ ಅಷ್ಟೇ. ಅಹಿಂದ ಅಂದ್ರೆ ಕಾಂಗ್ರೆಸ್, ಅವರು ಕಾಂಗ್ರೆಸ್ ಬಿಟ್ಟಿಲ್ಲ.‌ ಅಹಿಂದದವರು ಬಿಜೆಪಿ, ಜೆಡಿಎಸ್​ಗೆ ಮತ ಹಾಕಲ್ಲ. ಕಾರ್ಯಕ್ರಮದ ಹೆಸರು ಬರುವವರಿಗೆ ಬರುತ್ತೆ. ಕೆಲಸ ಮಾಡುವವರು ಮುಂದೆ ಬರುವವರು ಅವರೇ. ಹೆಸರು ಬದಲಾವಣೆ ಬಗ್ಗೆ ಯಾರನ್ನ ಕೇಳಬೇಕೋ ಕೇಳಿ ಎಂದರು.

2028ಗೆ ಸತೀಶ್ ಜಾರಕಿಹೊಳಿ ಸಿಎಂ ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ನಾನು ಈಗ ಕ್ಲೇಮ್ ಮಾಡ್ತಿಲ್ಲ. 2028ಕ್ಕೆ ಸಿಎಂ ಅಂತ ಹೇಳಿದ್ದೇನೆ. ಮೊದಲಿನಿಂದಲೂ ಹೇಳ್ತಿದ್ದೇನೆ. ಆಗ ನಾನೇ ಸಿಎಂ ಅಂತ ಕ್ಲೇಮ್ ಮಾಡ್ತಿಲ್ಲ. ನಾನು ಸಿಎಂ ಆಕಾಂಕ್ಷಿ ಅಂತ ಅಷ್ಟೇ ಹೇಳ್ತಿರೋದು. ನನ್ನಂತೆ ಆಕಾಂಕ್ಷಿಗಳು ಇರ್ತಾರೆ. ನಾನೇ ಆಗ್ತೇನೆ ಅಂತ ಏನೂ ಹೇಳ್ತಿಲ್ಲ. ಅಲ್ಲಿಯವರೆಗೆ ಈ ಹುದ್ದೆ ಆಕಾಂಕ್ಷಿ ನಾನಲ್ಲ ಎಂದು ಸ್ಪಷ್ಟಪಡಿಸಿದರು.

ಸಿಎಂ ಕುರ್ಚಿ ಬಗ್ಗೆ ಡಿಕೆಶಿ ಹೇಳಿಕೆ ವಿಚಾರವಾಗಿ ಮಾತನಾಡಿ, ಅದರ ಬಗ್ಗೆ ನನಗೆ ಮಾಹಿತಿ ಇಲ್ಲ. ಅದನ್ನು ಹೈಕಮಾಂಡ್ ನಿರ್ಧರಿಸುತ್ತೆ. ಒಪ್ಪಂದ ದೆಹಲಿಯಲ್ಲೇ ಆಗಿರಬಹುದು. ಅದರ ಬಗ್ಗೆ ನನಗೆ ಗೊತ್ತಿಲ್ಲ. ಅದು ಹೈಕಮಾಂಡ್ ಮಟ್ಟದಲ್ಲಿ ನಡೆದಿರಬಹುದು. ಅವರಿಗಷ್ಟೇ ಗೊತ್ತು, ನಮಗೆ ಗೊತ್ತಿಲ್ಲ. ನಾನು ಮೊದಲೇ ಅದನ್ನು ಹೇಳಿದ್ದೆನ್ನಲ್ಲ. ಡಿ.ಕೆ. ಸುರೇಶ್ ಸಹ 5 ವರ್ಷ ಅವರೇ ಇರ್ತಾರೆ ಅಂದ್ರಲ್ಲ. ಅದಕ್ಕೆ ಅವರ ಆಪ್ತರು ಹೇಳ್ತಾರೆ. ಸಿಎಂ ವಿಚಾರದ ಒಪ್ಪಂದದ ಬಗ್ಗೆ ಗೊತ್ತಿಲ್ಲ ಎಂದರು.

ಸಿಎಂ ಮುಡಾ ಅಕ್ರಮ ವಿಚಾರ ಲೋಕಾಯುಕ್ತಕ್ಕೆ ಇಡಿ ಪತ್ರದ​ ವಿಚಾರವಾಗಿ ಪ್ರತಿಕ್ರಿಯಿಸಿ, ಅದರ ಬಗ್ಗೆ ನನಗೆ ಮಾಹಿತಿ ಇಲ್ಲ. ಯಾವ ಆಧಾರದ‌ಮೇಲೆ ಕೊಟ್ಟಿದ್ದಾರೆ ಗೊತ್ತಿಲ್ಲ. ಲೀಗಲ್ ಟೀಂ ಎಲ್ಲವನ್ನ ನೋಡಿಕೊಳ್ಳುತ್ತೆ. ಇಡಿಯವರು ಮನಿಲಾಂಡ್ರಿಂಗ್ ಕೇಸ್​ ಅಷ್ಟೇ ಮಾಡಬೇಕು. ಮುಡಾ ಹಗರಣದ ತನಿಖೆಯಲ್ಲೇ ಗೊಂದಲವಿದೆ. ಈ ಬಗ್ಗೆ ಸುಪ್ರೀಂನಲ್ಲಿ ಹಲವು ಪಿಟಿಷನ್​ಗಳಿವೆ. ಅಲ್ಲಿ ಇನ್ನೂ ತೀರ್ಮಾನವಾಗಿಲ್ಲ. ಹಾಗಾಗಿ ಏಕೆ ಕೊಟ್ರು, ಏನು ಅನ್ನೋದು ಗೊತ್ತಿಲ್ಲ. ಲೋಕಾಯುಕ್ತದವರು ತನಿಖೆ ಮಾಡ್ತಿದ್ದಾರೆ. ಎಲ್ಲವನ್ನು ಲೀಗಲ್ ಟೀಂ ಇದೆ ನೋಡುತ್ತೆ ಎಂದು ತಿಳಿಸಿದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನ ವಿಚಾರವಾಗಿ ಮಾತನಾಡಿ, ನನಗೆ ಅದರ ಬಗ್ಗೆ ಏನೂ ಗೊತ್ತಿಲ್ಲ. ಅಧ್ಯಕ್ಷ ಸ್ಥಾನದ ಬಗ್ಗೆ ನನಗೆ ಏನೂ ಹೇಳಿಲ್ಲ. ಯಾವ ಒತ್ತಡವೂ ನನಗೆ ಬಂದಿಲ್ಲ. ಅದನ್ನು ನಾನು ಕೇಳಿಯೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಇಡಿ ಲೋಕಾಯುಕ್ತಕ್ಕೆ ಪತ್ರ ಬರೆದಿರೋದು ರಾಜಕೀಯ ಪ್ರೇರಿತ: ಸಿಎಂ ಸಿದ್ದರಾಮಯ್ಯ

ABOUT THE AUTHOR

...view details