ಮೈಸೂರು:ಹುಣಸೂರು ತಾಲ್ಲೂಕಿನ ಪ್ರಸಿದ್ಧ ಜೈನ ಕ್ಷೇತ್ರ ಗೊಮ್ಮಟಗಿರಿಯಲ್ಲಿ ವೈರಾಗ್ಯ ಮೂರ್ತಿ ಗೊಮ್ಮಟೇಶ್ವರನಿಗೆ 75ನೇ ಮಹಾಮಸ್ತಕಾಭಿಷೇಕ ಅದ್ಧೂರಿಯಾಗಿ ಶುಕ್ರವಾರ ಆರಂಭವಾಯಿತು. ಈ ಕಾರ್ಯಕ್ರಮದಲ್ಲಿ ಮೇಘಾಲಯದ ರಾಜ್ಯಪಾಲ ಹಾಗೂ ಕನ್ನಡಿಗರಾದ ಸಿ. ಹೆಚ್. ವಿಜಯ್ ಶಂಕರ್, ಸುತ್ತೂರಿನ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಗಳು, ಕನಕಗಿರಿಯ ಸ್ವಸ್ತೀ ಶ್ರೀ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ಹಾಗೂ ಅಪಾರ ಭಕ್ತರು ಜತೆಗೆ ವಿವಿಧ ಧಾರ್ಮಿಕ ಸ್ವಾಮೀಜಿಗಳು ಭಾಗವಹಿಸಿದ್ದರು.
ಡಿ.13 ರಿಂದ ಪ್ರಾರಂಭಗೊಂಡಿದ್ದು 15ರ ವರೆಗೆ ಮೂರು ದಿನಗಳ ಕಾಲ ಜಾತ್ರಾ ಮಹೋತ್ಸವ ಹಾಗೂ ಮಹಾಮಸ್ತಕಾಭಿಷೇಕ ಜರುಗಲಿದೆ.
ಗೊಮ್ಮಟಗಿರಿಯಲ್ಲಿ ವೈರಾಗ್ಯ ಮೂರ್ತಿಗೆ ಮಹಾಮಸ್ತಕಾಭಿಷೇಕ (ETV Bharat) ವಿವಿಧ ರೀತಿಯ ದ್ರವ್ಯಗಳನ್ನು ತುಂಬಿದ 108 ಕಳಶಗಳಲ್ಲಿ ಜೈನ ಸಂಪ್ರದಾಯದಂತೆ, ಮಂತ್ರ ಪಠಣ, ಘೋಷಗಳೊಂದಿಗೆ ಮಹಾಮಸ್ತಕಾಭಿಷೇಕ ನೆರವೇರಿತು. ಇದರ ಜತೆಗೆ ಎಳನೀರು, ಕಬ್ಬಿನಹಾಲಿನ ಅಭಿಷೇಕ, ಕ್ಷೀರಾಭಿಷೇಕ, ಅರಿಶಿನ- ಕುಂಕುಮ ಅಭಿಷೇಕ, ಕೇಸರಿ- ಶ್ರೀಗಂಧದ ಅಭಿಷೇಕಗಳು ನೆರವೇರಿದವು. ದೇಶದ ಹಲವು ಕಡೆಗಳಿಂದ ಆಗಮಿಸಿದ ಜೈನ ಭಕ್ತರು ಮೂರು ದಿನದ ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಇದನ್ನೂ ಓದಿ:Watch.. ಸುಬ್ರಹ್ಮಣ್ಯ: ನೀರಿನಲ್ಲಿ ಬಂಡಿ ಉತ್ಸವದೊಂದಿಗೆ ಕುಕ್ಕೆ ಜಾತ್ರೆ ಸಮಾಪ್ತಿ; ಭಕ್ತರೊಂದಿಗೆ ಯಶಸ್ವಿನಿ ನೀರಾಟ