ಕರ್ನಾಟಕ

karnataka

ETV Bharat / state

ಪತಿ-ಪತ್ನಿ ವರ್ಗಾವಣೆ ಮಾಡುವಂತೆ ಕೋರಿ 35 ಮಂದಿ ಪೊಲೀಸರಿಂದ ಸಿಎಂ, ಗೃಹ ಸಚಿವರಿಗೆ ಪತ್ರ - Police Trasfer Letter - POLICE TRASFER LETTER

ಪತಿ-ಪತ್ನಿ ವರ್ಗಾವಣೆ ಮಾಡುವಂತೆ ಕೋರಿ 35 ಮಂದಿ ಪೊಲೀಸರು ಮುಖ್ಯಮಂತ್ರಿ, ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ.

POLICE TRASFER LETTER
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ (ETV Bharat)

By ETV Bharat Karnataka Team

Published : Aug 3, 2024, 7:33 PM IST

ಬೆಂಗಳೂರು:ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪತಿ-ಪತ್ನಿ ಅಂತರ್​ ಜಿಲ್ಲಾ ವರ್ಗಾವಣೆಗೆ ರಾಜ್ಯ ಸರ್ಕಾರ ಕಳೆದ ಫೆಬ್ರುವರಿಯಲ್ಲಿ ಅಸ್ತು ಎಂದಿತ್ತು. ಆದ್ಯತೆ ಮೇರೆಗೆ ನಿಯಮಾಸಾರ ವರ್ಗಾವಯಿಸುವಂತೆ ನಿರ್ಧಾರ ಕೈಗೊಂಡರೂ ಅನುಷ್ಠಾನವಾಗುತ್ತಿಲ್ಲ. ಪತಿ ಅಥವಾ ಪತ್ನಿ ಒಂದೇ ಕಡೆ ಕಡ್ಡಾಯವಾಗಿ ಏಳು ವರ್ಷ ಕಾರ್ಯ ನಿರ್ವಹಣೆ ಮಾಡಿದ್ದರೆ ಅಂತರ್​ ಜಿಲ್ಲಾ ವರ್ಗಾವಣೆಗೆ ಅರ್ಹರು ಎಂದು ಆದೇಶ ಹೊರಡಿಸಿದ್ದರೂ ಕಾರ್ಯರೂಪಕ್ಕೆ ಬರುತ್ತಿಲ್ಲ. ಇದರಿಂದ ಕೌಟುಂಬಿಕ ಕಲಹ ಹೆಚ್ಚಾಗುತ್ತಿವೆ ಎಂದು 35 ಮಂದಿ ಪೊಲೀಸ್ ಕಾನ್ಸ್​ಟೇಬಲ್​ಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಿ.ಪರಮೇಶ್ವರ್ ಅವರಿಗೆ ಪತ್ರ ಬರೆದಿದ್ದಾರೆ.

ಆಯಾ ಪೊಲೀಸ್ ಘಟಕದಲ್ಲಿ ಒಂದೇ ಕಡೆ 7 ವರ್ಷಗಳ ಕಾಲ ಕಡ್ಡಾಯವಾಗಿ ಕೆಲಸ ಮಾಡಿದ ಸಿಬ್ಬಂದಿಗೆ ವರ್ಗಾವಣೆ ಅರ್ಹರಾಗಿದ್ದು, ಆದ್ಯತೆ ಮೇರೆಗೆ ಪತಿ-ಪತ್ನಿ ವರ್ಗಾವಣೆಗೆ ಮಾಡುವಂತೆ ಸಚಿವ ಪರಮೇಶ್ವರ್ ಅವರು ಡಿಜಿ ಅಲೋಕ್ ಮೋಹನ್​ ಅವರಿಗೆ ಸೂಚಿಸಿದ್ದರು. ಆದೇಶದಂತೆ 7 ವರ್ಷಗಳ ಕಾಲ ಸೇವೆ ಪೂರೈಸಿದ್ದರೂ ವರ್ಗಾವಣೆ ಮಾಡುತ್ತಿಲ್ಲ. ಅಲ್ಲದೆ 10 ವರ್ಷ ಮೇಲ್ಮಟ್ಟ ಸಿಬ್ಬಂದಿಗೆ ವರ್ಗಾವಣೆ ಮಾಡುವುದಾಗಿ ಮೇಲಾಧಿಕಾರಿಗಳು ಹೇಳುತ್ತಿದ್ದಾರೆ. ಇದರಿಂದ ದಂಪತಿ ನಡುವೆ ಕೌಟುಂಬಿಕ ಕಲಹ ಹೆಚ್ಚಾಗುತ್ತಿದೆ. ಪತಿ-ಪತ್ನಿ ದೂರವಾಗಿರುವುದರಿಂದ ಕರ್ತವ್ಯದ ಕಡೆ ಗಮನಹರಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ವಿಚ್ಛೇದನ ಅರ್ಜಿ ಸಲ್ಲಿಸುವ ಪ್ರಮೇಯಗಳು ಅಧಿಕವಾಗುತ್ತಿರುವುದು ಆತಂಕಕಾರಿ. ಹೀಗಾಗಿ ವರ್ಗಾವಣೆ ಮಾಡುವಂತೆ ಕೋರಿ 35 ಮಂದಿ ಪೊಲೀಸ್ ಸಿಬ್ಬಂದಿ ಪತ್ರದಲ್ಲಿ ಸಹಿ ಮಾಡಿದ್ದಾರೆ.

ಇದನ್ನೂ ಓದಿ: ಮಳೆಹಾನಿ: ಚಿಕ್ಕಮಗಳೂರು ಜಿಲ್ಲೆಗೆ ವಿಶೇಷ ಪ್ಯಾಕೇಜ್‌ಗಾಗಿ ಸಿಎಂಗೆ ಸಚಿವ ಕೆ.ಜೆ. ಜಾರ್ಜ್ ಮನವಿ - Chikkamagaluru Rain Damage

ABOUT THE AUTHOR

...view details