ಕರ್ನಾಟಕ

karnataka

ETV Bharat / state

ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ: ದೇಶದಲ್ಲಿಯೇ ಕರ್ನಾಟಕದ ಪ್ರಮುಖ ನಗರಗಳ ವಾಯು ಮಾಲಿನ್ಯ ಕಡಿಮೆ..! - KARNATAKAS AIM FOR CLEANER AIR

ಕರ್ನಾಟಕವನ್ನು ವಾಯು ಮಾಲಿನ್ಯ ಮುಕ್ತ ಮಾಡಲು ಮಾಲಿನ್ಯ ನಿಯಂತ್ರಣ ಮಂಡಳಿ ತಗೆದುಕೊಂಡ ಕ್ರಮಗಳು ಮತ್ತು ಪ್ರಮುಖ ನಗರಗಳಲ್ಲಿ ಇರುವ ಮಾಲಿನ್ಯದ ಪ್ರಮಾಣ ಬಗ್ಗೆಗಿನ ಮಾಹಿತಿ ಇಲ್ಲಿದೆ

KARNATAKAS AIM FOR CLEANER AIR
ಪ್ರಮುಖ ನಗರಗಳಲ್ಲಿರುವ ಮಾಲಿನ್ಯದ ಪ್ರಮಾಣ ಬಗ್ಗೆಗಿನ ಮಾಹಿತಿ (IANS)

By ETV Bharat Karnataka Team

Published : Dec 2, 2024, 2:08 PM IST

ಬೆಂಗಳೂರು:ಸಹ್ಯಾದ್ರಿ ಪರ್ವತ ಶ್ರೇಣಿ, ಪಶ್ಚಿಮ ಘಟ್ಟಗಳ ಸಾಲಿನಿಂದ ಕೂಡಿದ ಕರ್ನಾಟಕದಲ್ಲಿ ವಾಯು ಮಾಲಿನ್ಯ ಮಿಶ್ರಣ ಪರಿಸ್ಥಿತಿ ಇದ್ದು, ಗಾರ್ಡನ್​ ಸಿಟಿಯಾಗಿದ್ದ ಬೆಂಗಳೂರಿನಲ್ಲಿ ಸುಧಾರಿತ ವಾಯು ಗುಣಮಟ್ಟ ಇದೀಗ ಕಾಳಜಿ ವಿಷಯವೂ ಆಗಿದೆ. ಬೆಂಗಳೂರಿನಲ್ಲಿ ನಗರದ ವಾಯು ಗುಣಮಟ್ಟ ಮಾಲಿನ್ಯ 92ರ ವರ್ಗದಲ್ಲಿ ಕಂಡಿದ್ದು, ಕೆಲವು ಸೂಕ್ಷ್ಮ ಆರೋಗ್ಯವಂತರಲ್ಲಿ ಉಸಿರಾಟದ ಸಮಸ್ಯೆಗಳು ಕಂಡು ಬರುತ್ತಿದೆ.

ಇನ್ನು ಕಲ್ಬುರ್ಗಿ, ಹಾವೇರಿಯಲ್ಲಿ ಶುದ್ದ ವಾಯುವಿದ್ದು, ಇಲ್ಲಿನ ಎಕ್ಯೂಐ ಕ್ರಮವಾಗಿ 38 ಮತ್ತು 42 ಇದೆ. ಈ ನಡುವೆ ಹುಬಳ್ಳಿಯ ಎಕ್ಯೂಐ 495 ದಾಖಲಾಗುವ ಮೂಲಕ ಎಚ್ಚರಿಕೆ ಮೂಡಿಸುತ್ತಿದೆ. ಬೆಂಗಳೂರಿನ ವಾಯು ಮಾಲಿನ್ಯಕ್ಕೆ ಪ್ರಮುಖ ಕಾರಣ ವಾಹನ ಮಾಲಿನ್ಯ, ರಸ್ತೆಯ ಧೂಳು, ಕಟ್ಟಡ ನಿರ್ಮಾಣ ಚಟುವಟಿಕೆ ಸೇರಿದಂತೆ ಹೆಚ್ಚುತ್ತಿರುವ ಡಿಸೇಲ್​ ಪೆಟ್ರೋಲ್​ ವಾಹನ ಹಾಗೂ ಹಳೆಯಾದ ಇಂಜಿನ್​ಗಳ ಬಳಕೆಯಾಗಿದೆ.

ರಾಜ್ಯವಾರು ಮಾಲಿನ್ಯ ನಿಯಂತ್ರಣದ ಕಾರ್ಯ:ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನದಂದು ಕರ್ನಾಟಕವೂ ಅನೇಕ ಉಪಕ್ರಮದ ಮೂಲಕ ವಾಯು ಮಾಲಿನ್ಯದ ಕುರಿತು ಸಕ್ರಿಯವಾಗಿ ತಿಳಿಸುವ ಕಾರ್ಯ ನಡೆಸುತ್ತಿದೆ. ಭಾರತದ ಇತರ ನಗರ ಕೇಂದ್ರಗಳಿಗೆ ಹೋಲಿಸಿದರೆ ಕರ್ನಾಟಕ ಅನೇಕ ನಗರಗಳು ಉತ್ತಮ ಗಾಳಿಯ ಗುಣಮಟ್ಟವನ್ನು ವರದಿ ಮಾಡುವುದರೊಂದಿಗೆ, ಪರಿಸರ ಸವಾಲುಗಳನ್ನು ಸಮರ್ಥವಾಗಿ ಎದುರಿಸುತ್ತಿದೆ. ಅದರಲ್ಲೂ ಎಲೆಕ್ಟ್ರಿಕ್ ವಾಹನಗಳನ್ನು (ಇವಿಗಳು) ಉತ್ತೇಜಿಸುವುದು, ಕಟ್ಟುನಿಟ್ಟಾದ ಕೈಗಾರಿಕಾ ಹೊಗೆ ಹೊರಸೂಸುವಿಕೆ ಮಾನದಂಡಗಳನ್ನು ಅನುಷ್ಠಾನ ಮತ್ತು ನಗರ ಹಸಿರೀಕರಣವನ್ನು ಸುಧಾರಿಸುವುದು ಸೇರಿದೆ.

ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟ: ಬೆಂಗಳೂರು, ಮೈಸೂರು ಮತ್ತು ಮಂಗಳೂರಿನಲ್ಲಿ ಸುಧಾರಿತ ವಾಯುಗುಣಮಟ್ಟ ಹೊಂದಿದ್ದು, ಈ ವರ್ಷ ಈ ನಗರದಲ್ಲಿ ಅನುಮತಿಸಲ್ಪಟ್ಟ ಎಕ್ಯೂಐ ವರದಿಯಾಗಿದೆ. ಆದಾಗ್ಯೂ, ಈ ನಗರಗಳು ಅಪರೂಪಕ್ಕೆ ಒಮ್ಮೆ ಎಂಬಂತೆ ವಾಯು ಗುಣಮಟ್ಟ ಹೆಚ್ಚಿಸಿಕೊಳ್ಳುತ್ತದೆ. ವಿಶೇಷವಾಗಿ ಚಳಿಗಾಲ ಮತ್ತು ಹೆಚ್ಚಿನ ಟ್ರಾಫಿಕ್​ ಸಮಯದಲ್ಲಿ ಪಿಎ. 2.5 ರಿಂದ ಪಿಎಂ 10 ಮಟ್ಟ ದಾಖಲಾಗುತ್ತದೆ.

ಬೆಂಗಳೂರು:ಸಿಲಿಕಾನ್​ ವ್ಯಾಲಿ ಎಂದೇ ಜನನಿತವಾದ ಬೆಂಗಳೂರು ವೇಗವಾದ ನಗರೀಕರಣಕ್ಕೆ ಒಳಗಾಗುತ್ತಿದ್ದು, ವಾಹನಗಳಿಂದ ಹೊರಸೂಸುವ ಹೊಗೆ ಹೆಚ್ಚುತ್ತಿರುವುದರಿಂದ ಹೆಚ್ಚಿನ ಸವಾಲನ್ನು ಎದುರಿಸುತ್ತಿದೆ. ನಗರದ ಎಕ್ಯೂಐ ಸುಧಾರಿತದಿಂದ ಕಳಪೆಯವರೆಗೆ ಕಣ್ಣಮುಚ್ಚಾಲೆ ಆಡುತ್ತದೆ. ಅದರಲ್ಲೂ ನಗರದ ಪ್ರಮುಖ ಟ್ರಾಫಿಕ್​ ತಾಣಗಳಾದ ಸಿಲ್ಕ್​ ಬೋರ್ಡ್​ ಮತ್ತು ಕೆಆರ್​ ಪುರಂನಲ್ಲಿ ಹೆಚ್ಚು.

ಮೈಸೂರು: ಸಾಂಸ್ಕೃತಿಕ ನಗರದಲ್ಲಿ ಉತ್ತಮ ನಗರ ಯೋಜನೆ ಮತ್ತು ಕಡಿಮೆ ವಾಹನಗಳಿಂದ ಶುದ್ಧ ಗಾಳಿಯು ಹೆಚ್ಚಿದೆ. ಆದಾಗ್ಯೂ ಕೈಗಾರಿಕಾ ಪ್ರದೇಶ ಮತ್ತು ಕಟ್ಟಡ ನಿರ್ಮಾಣ ಚಟುವಟಿಕೆಯಿಂದ ಸ್ಥಳೀಯ ಮಾಲಿನ್ಯಗಳು ಎಕ್ಯೂಐ ಮಟ್ಟ ಹೆಚ್ಚಳಕ್ಕೆ ಕಾರಣವಾಗುತ್ತದೆ.

ಮಂಗಳೂರು: ಕರಾವಳಿಯ ಗಾಳಿ ನಗರದ ಗಾಳಿಯ ಮಟ್ಟ ಕಾಯ್ದುಕೊಳ್ಳಲು ಸಹಕಾರಿಯಾಗಿದೆ. ಆದರೂ ಕೈಗಾರಿಕೆ ಮತ್ತು ಬಂದರುಗಳಲ್ಲಿನ ವಾಹನ ಬಳಕೆ ಕಾಳಜಿ ವಿಷಯವಾಗಿದೆ.

ಬೆಂಗಳೂರು ವಾಯು ಮಾಲಿನ್ಯ: ವಾಹನಗಳ ಪಾತ್ರ: ಬೆಂಗಳೂರಿನಲ್ಲಿ 12 ಮಿಲಿಯನ್​ ನೋಂದಾಯಿತ ವಾಹನಗಳಿವೆ. ಬೆಂಗಳೂರು ನಗರದ ಮಾಲಿನ್ಯ ಪ್ರಭಾವಿ ಅಂಶಗಳೇ ಈ ವಾಹನಗಳು ಹೊಗೆಯಾಗಿದೆ. ನಗರದಲ್ಲಿ ಉಂಟಾಗುವ ಟ್ರಾಫಿಕ್​ ಜಾಮ್​ ಇದರ ಮಟ್ಟವನ್ನು ದೀರ್ಘಕಾಲ ಹೆಚ್ಚಿಸುತ್ತದೆ. ಇದರಲ್ಲಿ ಡಿಸೇಲ್​ ಚಾಲಿತ ವಾಹನಗಳ ಕೊಡುಗೆ ಹೆಚ್ಚಿದೆ. ಸಾರ್ವಜನಿಕ ಸಾರಿಗೆಯನ್ನು ಸುಧಾರಿಸುವ ಪ್ರಯತ್ನಗಳ ಹೊರತಾಗಿಯೂ, ಖಾಸಗಿ ವಾಹನಗಳ ಬಗ್ಗೆ ಮೂಡುತ್ತಿರುವ ಒಲವು ನಗರದ ಮೂಲಸೌಕರ್ಯದ ಮೇಲೆ ಹೊರೆಯನ್ನು ಹೆಚ್ಚಿಸಿದೆ.

ಕ್ರಮಗಳು:

  • ಎಲೆಕ್ಟ್ರಿಕಲ್​ ವಾಹನಕ್ಕೆ ಉತ್ತೇಜನೆ: ಸರ್ಕಾರವೂ ಇವಿ ವಾಹನಗಳ ಉತ್ತೇಜನ ಮತ್ತು ಅಳವಡಿಕೆಗೆ ಮುಂದಾಗಿದ್ದು, ನಗರದ ಪ್ರಮುಖ ಕೇಂದ್ರದಲ್ಲಿ ಚಾರ್ಜಿಂಗ್​ ಸ್ಟೇಷನ್​ ನಿರ್ಮಾಣ ಮಾಡುವ ಮೂಲಕ ಇವಿ ಕೊಳ್ಳಲು ಉತ್ತೇಜಿಸುತ್ತಿದೆ.
  • ಸಾರ್ವಜನಿಕ ಸಾರಿಗೆ ವಿಸ್ತರಣೆ: ಮೆಟ್ರೋ ರೈಲು ಸಂಪರ್ಕಗಳ ವಿಸ್ತರಣೆ ಮತ್ತು ಎಲೆಕ್ಟ್ರಿಕ್​ ಬಸ್​ಗಳ ಪರಿಚಯಿಸುವಿಕೆಯು ಇದರಲ್ಲಿ ಪ್ರಮುಖವಾಗಿದೆ.
  • ಕೈಗಾರಿಕೆ ಮತ್ತು ನಿರ್ಮಾಣ ನಿಯಮ: ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್​ಪಿಸಿಬಿ) ಕೈಗಾರಿಕೆಗಳ ಹೊಗೆ ಮತ್ತು ಕಟ್ಟಡ ನಿರ್ಮಾಣ ಚಟುವಟಿಕೆಯಿಂದ ಉಂಟಾಗುವ ಧೂಳು ನಿಯಂತ್ರಣಕ್ಕೆ ಕಟ್ಟು ನಿಟ್ಟಿನ ಕ್ರಮ ನಡೆಸಿದೆ.
  • ನಾಗರಿಕರ ಅರಿವು ಕಾರ್ಯಕ್ರಮ: ಕಾರ್​ಪೂಲಿಂಗ್​, ಸಾರ್ವಜನಿಕ ಸಾರಿಗೆಗಳ ನಿಯಮಿತ ಬಳಕೆ ಮತ್ತು ವಾಹನ ಹೊಗೆ ಗುಣಮಟ್ಟ ಕಾಪಾಡುವ ಕುರಿತು ಸಾರ್ವಜನಿಕ ಅರಿವು ಮೂಡಿಸಲಾಗುತ್ತಿದೆ.
  • ನಗರ ಹಸಿರುವ ಉಪಕ್ರಮ: ಗಿಡ ನೆಡುವು ಕಾರ್ಯ, ಇರುವ ಜಾಗದಲ್ಲಿ ಗಿಡಗಳ ಸಂರಕ್ಷಣೆ ಮಾಡುವ ಮೂಲಕ ಪರಿಣಾಮಕಾರಿಯಾಗಿ ಮಾಲಿನ್ಯ ನಿಯಂತ್ರಣ ಮಾಡಲಾಗುತ್ತಿದೆ.
  • ಪಗ್ರತಿ ಮತ್ತು ಸವಾಲು: ಮಾಲಿನ್ಯ ನಿಯಂತ್ರಣದಲ್ಲಿ ಕರ್ನಾಟಕದ ಪಾತ್ರ ಕರ್ನಾಟಕವು ಶ್ಲಾಘನೀಯ ಆಗಿದ್ದರೂ, ಕ್ರಮ ಜಾರಿಯಲ್ಲಿನ ಲೋಪ, ಇವಿ ಮೂಲ ಸೌಕರ್ಯ ಕೊರತೆ, ಹೆಚ್ಚುತ್ತಿರುವ ನಗರ ವಿಸ್ತರಣೆಗಳು ಪ್ರಗತಿಗೆ ತಡೆಯಾಗಿದೆ. ಅದರಲ್ಲೂ ಹೆಚ್ಚುತ್ತಿರುವ ದಟ್ಟಣೆ ಮತ್ತು ವಾಹನಗಳು ಸುಸ್ಥಿರ ಪ್ರಯತ್ನದ ಅವಶ್ಯಕತೆ ಒತ್ತಿ ಹೇಳಿದೆ

ಕರ್ನಾಟಕವೂ ರಾಷ್ಟ್ರೀಯ ನಿಯಂತ್ರಣ ದಿನದಂದು ಅನೇಕ ನೀತಿ ಕಾರಿ ಮತ್ತು ರಕ್ಷಣಾ ಕ್ರಮವನ್ನು ನಡೆಸಿದೆ. ಆದಾಗ್ಯೂ ವಾಯು ಮಟ್ಟದಲ್ಲಿನ ಸುಸ್ಥಿರ ಅಭಿವೃದ್ಧಿಗೆ ಸರ್ಕಾರದ ಕ್ರಮದ ಜೊತೆಗೆ ಕೈಗಾರಿಕೆ, ನಾಗರಿಕರ ಪ್ರಯತ್ನವೂ ಪ್ರಮುಖವಾಗಿದೆ. ಎಲ್ಲರ ಜೊತೆಗಿನ ಕಾರ್ಯದಿಂದಾಗಿ ಮಾತ್ರವೇ ರಾಜ್ಯವೂ ಶುದ್ಧ , ಆರೋಗ್ಯಯುತ ಪರಿಸರ ಪ್ರಗತಿಯಲ್ಲಿ ಮುಖ್ಯವಾಗಿದೆ.

ಒಗ್ಗಟ್ಟಿನ ಕ್ರಮ ಪ್ರಮುಖ: ವಾಯು ಮಾಲಿನ್ಯ ಕೇವಲ ಪರಿಸರದ ಸಮಸ್ಯೆಯಲ್ಲ. ಇದು ಸಾರ್ವಜನಿಕ ಆರೋಗ್ಯ ಕಾಳಜಿ ವಿಚಾರ. ಕರ್ನಾಟಕ ಸುಸ್ಥಿರ ಕಾರ್ಯಾಚರಣೆ ಮತ್ತು ಶುದ್ಧ, ಆರೋಗ್ಯ ನಗರ ನಿರ್ಮಾಣದಲ್ಲಿ ಕಟ್ಟು ನಿಟ್ಟಿನ ನಿಯಮ ಜಾರಿಗೆ ಮುಂದಾಗಬೇಕಿದೆ.

ಬೆಂಗಳೂರಲ್ಲಿ ಹೆಚ್ಚುತ್ತಿರುವ ವಾಹನಗಳ ಸವಾಲು: ಬೆಂಗಳೂರಿನಲ್ಲಿ 11 ಮಿಲಿಯನ್​ ನೋಂದಾಯಿತ ವಾಹನಗಳಿದ್ದು, ಇವು ನಗರದ ಜನರ ಲೈಫ್​ಲೈನ್​ ಆಗುವ ಜೊತೆಗೆ ಮಾಲಿನ್ಯಕ್ಕೆ ಕಾರಣವಾಗುವ ಅಂಶವೂ ಇದೆ. ಈ ನಿಟ್ಟಿನಲ್ಲಿ ಜನರು ತಮ್ಮ ದೈನಂದಿನ ಸೇವೆಗೆ ಸಾರ್ವಜನಿಕ ಸಾರಿಗೆ ಬಳಕೆ ಮಾಡುವುದು ಉತ್ತಮ.

ಅರಿವು ಮತ್ತು ಆವಿಷ್ಕಾರ: ಶುದ್ಧ ಗಾಳಿಯು ಆರಂಭವಾಗುವುದು ಶುದ್ಧ ಆಯ್ಕೆಯಿಂದ. ಅದು ಎಲೆಕ್ಟ್ರಿಕಲ್​ ವಾಹನ ಅಳವಡಿಕೆ ಅಥವಾ ನಗರದಲ್ಲಿ ಗಿಡಗಳ ನೆಡುವಿಕೆ ಕ್ರಮದಿಂದ.

ಇದನ್ನೂ ಓದಿ: ವಾಯು ಗುಣಮಟ್ಟ ಸುಧಾರಣೆ ಸೂಚ್ಯಂಕ: ದೇಶದಲ್ಲಿ ಸೂರತ್​​ ನಂ.1, ಬೆಂಗಳೂರಿನ ಸ್ಥಾನವೆಷ್ಟು?

ABOUT THE AUTHOR

...view details