ಕರ್ನಾಟಕ

karnataka

ETV Bharat / state

Karnataka News Today - Live Updates: ಕರ್ನಾಟಕ Tue Oct 08 2024 ಇತ್ತೀಚಿನ ಸುದ್ದಿ - KARNATAKA NEWS TODAY TUE OCT 08 2024

Etv Bharat
Etv Bharat (Etv Bharat)

By Karnataka Live News Desk

Published : Oct 8, 2024, 7:15 AM IST

Updated : Oct 8, 2024, 10:42 PM IST

10:39 PM, 08 Oct 2024 (IST)

ವಕೀಲರ ಅಭಿವ್ಯಕ್ತಿ ಸ್ವಾತಂತ್ರ್ಯ ನಿರ್ಬಂಧಿಸುವ ಆದೇಶಗಳನ್ನು ಭಾರತೀಯ ವಕೀಲರ ಪರಿಷತ್ ಹೊರಡಿಸಲಾಗದು: ಹೈಕೋರ್ಟ್

ಭಾರತೀಯ ವಕೀಲರ ಪರಿಷತ್​ ವಕೀಲರ ಅಭಿವ್ಯಕ್ತಿ ಸ್ವಾತಂತ್ರ್ಯ ನಿರ್ಬಂಧಿಸುವಂತಹ ಆದೇಶಗಳನ್ನು ಹೊರಡಿಸಲಾಗದು ಎಂದು ಹೈಕೋರ್ಟ್​ ಆದೇಶಿಸಿದೆ. | Read More

ETV Bharat Live Updates - FREEDOM OF EXPRESSION

08:36 PM, 08 Oct 2024 (IST)

ದಸರಾ ಫಲಪುಷ್ಪ ಪ್ರದರ್ಶನ: ಗಮನ ಸೆಳೆಯುತ್ತಿದೆ ಪಂಚ ಗ್ಯಾರಂಟಿ

ಮೈಸೂರಿನಲ್ಲಿ ನಡೆಯುತ್ತಿರುವ ದಸರಾ ಫಲಪುಷ್ಪ ಪ್ರದರ್ಶನದಲ್ಲಿ ಸರ್ಕಾರದ ಪಂಚ ಗ್ಯಾರಂಟಿಗಳು ಗಮನ ಸೆಳೆಯುತ್ತಿವೆ. | Read More

ETV Bharat Live Updates - FIVE GUARANTEES

08:30 PM, 08 Oct 2024 (IST)

ರಾಜ್ಯಾದ್ಯಂತ ಸಾಮಾಜಿಕ-ಆರ್ಥಿಕ ಬೆಳವಣಿಗೆಗೆ ಚಾಲನೆ ನೀಡಲು 'ಅಕ್ಕ ಕೆಫೆ' ಸಜ್ಜಾಗಿದೆ: ಸಚಿವ ಡಾ.ಪಾಟೀಲ್

ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಅವರು 'ಅಕ್ಕ ಕೆಫೆ' ಕುರಿತು ಮಾತನಾಡಿದ್ದಾರೆ. ಈ ಯೋಜನೆ ರಾಜ್ಯದ ಸಾಮಾಜಿಕ ಆರ್ಥಿಕ ಅಭಿವೃದ್ಧಿ, ಮಹಿಳಾ ಸಬಲೀಕರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದ್ದಾರೆ. | Read More

ETV Bharat Live Updates - MINISTER DR SHARAN PRAKASH PATIL

08:08 PM, 08 Oct 2024 (IST)

1,399 ರೂಪಾಯಿಯ ಟ್ರೆಕ್ಕಿಂಗ್ ಪ್ಯಾಂಟ್ ತಲುಪಿಸದ ಡೆಕಥ್ಲಾನ್​ಗೆ ₹35,000 ದಂಡ

ಗ್ರಾಹಕನೊಬ್ಬ ಆರ್ಡರ್​​ ಮಾಡಿದ್ದ ಟ್ರಕ್ಕಿಂಗ್ ಟ್ರೌಸರ್ ತಲುಪಿಸಲು ವಿಫಲವಾದ ಡೆಕಾಥ್ಲಾನ್​ಗೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ 35,000 ರೂಪಾಯಿ ದಂಡ ವಿಧಿಸಿದೆ. | Read More

ETV Bharat Live Updates - DECATHLON

07:56 PM, 08 Oct 2024 (IST)

ನ.1ರಂದು ಬೆಳಗಾವಿಯಲ್ಲಿ ಅದ್ಧೂರಿ‌ ರಾಜ್ಯೋತ್ಸವ, ಕರಾಳ ದಿನಾಚರಣೆಗೆ ಅವಕಾಶವಿಲ್ಲ: ಡಿಸಿ

ಬೆಳಗಾವಿಯಲ್ಲಿ ನ.1ರಂದು ಕರ್ನಾಟಕ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಜಿಲ್ಲಾಡಳಿತ ನಿರ್ಧರಿಸಿದೆ. | Read More

ETV Bharat Live Updates - BELAGAVI

07:47 PM, 08 Oct 2024 (IST)

ಮತ್ತೆ ಮುನ್ನೆಲೆಗೆ ಬಂದ ಜಾತಿಗಣತಿ ವರದಿ: ಒಕ್ಕಲಿಗ ಸಮುದಾಯದ ನಿಲುವೇನು?

ಜಾತಿಗಣತಿ ವರದಿಯನ್ನು ಈಗಾಗಲೇ ಹಲವು ಸಂಘಟನೆಗಳು ವಿರೋಧಿಸಿವೆ. ಇದನ್ನು ಗಮನದಲ್ಲಿರಿಸಿಕೊಂಡು ಮರುಸಮೀಕ್ಷೆ ನಡೆಸುವುದು ಸೂಕ್ತ ಎಂದು ರಾಜ್ಯ ಒಕ್ಕಲಿಗರ ಸಂಘ ಸರ್ಕಾರವನ್ನು ಒತ್ತಾಯಿಸಿದೆ. | Read More

ETV Bharat Live Updates - VOKKALIGA COMMUNITY

07:42 PM, 08 Oct 2024 (IST)

6 ಜಿಲ್ಲೆಗಳ RTO ಚೆಕ್‌ಪೋಸ್ಟ್​ಗಳ ಮೇಲೆ ಲೋಕಾಯುಕ್ತ ದಾಳಿ: ಕಿಟಿಕಿಯಿಂದ ಹಣ ಎಸೆದ ಸಿಬ್ಬಂದಿ!

ಅಕ್ರಮವಾಗಿ ಹಣ ವಸೂಲಿ ಮಾಡುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಆರ್‌ಟಿಒ ಚೆಕ್‌ಪೋಸ್ಟ್​ಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. | Read More

ETV Bharat Live Updates - BENGALURU

07:39 PM, 08 Oct 2024 (IST)

ಪ್ರಧಾನಿ ಮೋದಿ ಅಭಿವೃದ್ಧಿಯ ಗ್ಯಾರಂಟಿಗೆ ಹರಿಯಾಣದ ಜನಮನ್ನಣೆ: ಬಿ.ವೈ.ವಿಜಯೇಂದ್ರ

ಹರಿಯಾಣದಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವುದು ನಮ್ಮೆಲ್ಲರಿಗೆ ಸಂತಸ ತಂದುಕೊಟ್ಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. | Read More

ETV Bharat Live Updates - HARYANA ELECTION RESULT

07:15 PM, 08 Oct 2024 (IST)

ದಸರಾ: ನೈಋತ್ಯ ರೈಲ್ವೆಯಿಂದ ವಿಶೇಷ ರೈಲು ಸಂಚಾರ ಆರಂಭ

ದಸರಾ ಹಬ್ಬದ ಪ್ರಯುಕ್ತ ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲು ನೈಋತ್ಯ ರೈಲ್ವೆಯಿಂದ ವಿಶೇಷ ರೈಲು ಸೇವೆ ಆರಂಭಿಸಲು ನಿರ್ಧರಿಸಿದೆ. | Read More

ETV Bharat Live Updates - SOUTH WESTERN RAILWAY

06:29 PM, 08 Oct 2024 (IST)

'ಇದು ದರ್ಶನ್ ರಕ್ತಚರಿತ್ರೆ' -ಎಸ್​ಪಿಪಿ ಪ್ರಸನ್ನ ಕುಮಾರ್ ವಾದ: ದರ್ಶನ್​ಗೆ ಇಂದೂ ಸಿಗದ ಜಾಮೀನು

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್​ಗೆ ಇಂದೂ ಕೂಡ ಜಾಮೀನು ಸಿಕ್ಕಿಲ್ಲ. ಮುಂದಿನ ವಿಚಾರಣೆಯಲ್ಲಿ ಕೋರ್ಟ್ ನಾಳೆ ಮಧ್ಯಾಹ್ನ 12.30ಕ್ಕೆ ಮುಂದೂಡಿತು. | Read More

ETV Bharat Live Updates - RENUKASWAMY MURDER CASE

06:13 PM, 08 Oct 2024 (IST)

ಜಾತಿನಿಂದನೆ ಆರೋಪ: ಕಿರುತೆರೆ ಹಾಸ್ಯನಟ ಕಾರ್ತಿಕ್ ಸ್ಪಷ್ಟನೆ ಹೀಗಿದೆ - Caste abuse allegation

ಯಾವುದೇ ಸಮುದಾಯಕ್ಕೆ ನೋವಾಗುವ ರೀತಿಯಲ್ಲಿ ನಾನು ಮಾತನಾಡಿಲ್ಲ. ಒಂದು ವೇಳೆ ಜಾತಿ ನಿಂದನೆ ಮಾಡಿದ ರೀತಿ ಕೇಳಿಸಿದ್ದಲ್ಲಿ ಕ್ಷಮಿಸಿ ಎಂದು ಹಾಸ್ಯನಟ ಹುಲಿ ಕಾರ್ತಿಕ್ ಸ್ಪಷ್ಟನೆ ನೀಡಿದ್ದಾರೆ. | Read More

ETV Bharat Live Updates - COMEDIAN HULI KARTHIK

06:01 PM, 08 Oct 2024 (IST)

ಎಸ್‌.ನಿಜಲಿಂಗಪ್ಪನವರ ನಿವಾಸ ಖರೀದಿಸಲು ಕೆಪಿಸಿಸಿ ನಿರ್ಧಾರ: ಪುತ್ರ ಕಿರಣ್ ಶಂಕರ್ ಹೇಳಿದ್ದೇನು? - S Nijalingappa Residence

ಚಿತ್ರದುರ್ಗ ನಗರದ ವಿ.ಸಿ.ಬಡಾವಣೆಯಲ್ಲಿ ಅಭಿವೃದ್ಧಿ ಕಾಣದೇ ಪಾಳುಬಿದ್ದ ಸ್ಥಿತಿಯಲ್ಲಿರುವ ಮಾಜಿ ಮುಖ್ಯಮಂತ್ರಿ, ದಿವಂಗತ ಎಸ್‌.ನಿಜಲಿಂಗಪ್ಪನವರ ನಿವಾಸವನ್ನು ಖರೀದಿಸಲು ಕೆಪಿಸಿಸಿ ಮುಂದಾಗಿದೆ. | Read More

ETV Bharat Live Updates - KPCC

05:57 PM, 08 Oct 2024 (IST)

ಜಾತಿಗಣತಿ ವರದಿ ಅಂಗೀಕರಿಸಲು ಸರ್ಕಾರ ಬದ್ಧ: ಸಿಎಂ ಸಿದ್ದರಾಮಯ್ಯ

ನಮ್ಮ ಪಕ್ಷದ ಎಲ್ಲ ನಾಯಕರು ತಾತ್ವಿಕವಾಗಿ ಜಾತಿಗಣತಿಯನ್ನು ಒಪ್ಪಿಕೊಂಡಿದ್ದಾರೆ. ಯಾರ ವಿರೋಧವೂ ಇಲ್ಲ. ಇದನ್ನು ಅಂಗೀಕರಿಸಲು ಸರ್ಕಾರ ಕೂಡ ಬದ್ಧವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. | Read More

ETV Bharat Live Updates - CM SIDDARAMAIAH

05:52 PM, 08 Oct 2024 (IST)

ತುಮಕೂರು ರೈಲು ನಿಲ್ದಾಣಕ್ಕೆ ಡಾ.ಶಿವಕುಮಾರ ಸ್ವಾಮೀಜಿ ಹೆಸರಿಡುವಂತೆ ಪ್ರಧಾನಿಗೆ ಸೋಮಣ್ಣ ಮನವಿ

ಪ್ರಧಾನಿ ಮೋದಿ ಅವರನ್ನು ಭೇಟಿಯಾದ ಸಚಿವ ವಿ.ಸೋಮಣ್ಣ, ತುಮಕೂರು ರೈಲು ನಿಲ್ದಾಣಕ್ಕೆ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಹೆಸರಿಡುವಂತೆ ಮನವಿ ಮಾಡಿದರು. | Read More

ETV Bharat Live Updates - TUMAKURU RAILWAY STATION

05:40 PM, 08 Oct 2024 (IST)

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್​

ಸಿಎಂ ಬದಲಾವಣೆ ಚರ್ಚೆಯ ನಡುವೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿ, ಊಹಾಪೋಹಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. | Read More

ETV Bharat Live Updates - CM CHANGE ISSUE

04:51 PM, 08 Oct 2024 (IST)

ಲೈಂಗಿಕ ಕಿರುಕುಳ ಆರೋಪದ ಬಗ್ಗೆ ಶಾಸಕ ವಿನಯ್ ಕುಲಕರ್ಣಿ ಹೇಳಿದ್ದೇನು?

ಲೈಂಗಿಕ ಕಿರುಕುಳ ಆರೋಪದ ಬಗ್ಗೆ ಶಾಸಕ ವಿನಯ್ ಕುಲಕರ್ಣಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಆರೋಪ ಸತ್ಯಕ್ಕೆ ದೂರವಾದದ್ದು. ತನಿಖೆ ನಡೆದು ಸತ್ಯ ಹೊರಬರಲಿ ಎಂದಿದ್ದಾರೆ. | Read More

ETV Bharat Live Updates - SEXUAL HARASSEMENT CASE

04:19 PM, 08 Oct 2024 (IST)

ಕಿತ್ತೂರು ಕೋಟೆ, ಇತಿಹಾಸ ಉಳಿಸಲು ₹58 ಕೋಟಿ ಬಿಡುಗಡೆ: ಸಚಿವ ಕೃಷ್ಣಬೈರೇಗೌಡ

ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಕಿತ್ತೂರು ಕೋಟೆ ಹಾಗೂ ಇತಿಹಾಸಕ್ಕಾಗಿ 58 ಕೋಟಿ ರೂ. ಬಿಡುಗಡೆ ಮಾಡಿರುವುದಾಗಿ ತಿಳಿಸಿದ್ದಾರೆ. | Read More

ETV Bharat Live Updates - KITTURU FORT

04:09 PM, 08 Oct 2024 (IST)

ಝೀರೊ ಟ್ರಾಫಿಕ್‌ ನಿಯಮ ಉಲ್ಲಂಘನೆ: ಶಾಸಕ ಜನಾರ್ದನ ರೆಡ್ಡಿ ರೇಂಜ್ ರೋವರ್ ಕಾರು ವಶಕ್ಕೆ

ಸಿಎಂ ತೆರಳುವ ವೇಳೆ ಝೀರೊ ಟ್ರಾಫಿಕ್‌ ನಿಯಮ ಉಲ್ಲಂಘಿಸಿದ್ದರಿಂದ ಪೊಲೀಸರು ಶಾಸಕ ಜನಾರ್ದನ ರೆಡ್ಡಿ ಅವರ ಒಂದು ಹಾಗೂ ಅವರ ಬೆಂಬಲಿಗರ ಎರಡು ಕಾರುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. | Read More

ETV Bharat Live Updates - JANARDHAN REDDY

04:01 PM, 08 Oct 2024 (IST)

ಜಾತಿ ಗಣತಿ ವರದಿ ಬಗ್ಗೆ ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ

ಜಾತಿ ಗಣತಿ ವರದಿಯನ್ನು ನೋಡದೆಯೇ ಚರ್ಚೆ ಮಾಡಲಾಗುತ್ತಿದೆ. ಈ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು. | Read More

ETV Bharat Live Updates - BENGALURU

03:38 PM, 08 Oct 2024 (IST)

'ಅಪಘಾತ ನಡೆದಾಗ ವಾಹನಕ್ಕೆ ಪರವಾನಗಿ ಇಲ್ಲದಿದ್ದರೂ ವಿಮಾ ಕಂಪನಿ ಸಂತ್ರಸ್ತರಿಗೆ ಪರಿಹಾರ ನೀಡಬೇಕು'

ಅಪಘಾತ ಸಂಭವಿಸಿದಾಗ ವಾಹನಕ್ಕೆ ಪರವಾನಗಿ, ಫಿಟ್ನೆಸ್ ಸರ್ಟಿಫಿಕೇಟ್ ಇಲ್ಲದಿದ್ದರೂ ಸಂತ್ರಸ್ತರಿಗೆ ವಿಮಾ ಕಂಪನಿ ಪರಿಹಾರ ಪಾವತಿಸಬೇಕು ಎಂದು ಹೈಕೋರ್ಟ್ ಇಂದು​ ಆದೇಶಿಸಿದೆ. | Read More

ETV Bharat Live Updates - INSURANCE COMPANY

03:23 PM, 08 Oct 2024 (IST)

ಬಿಎಂಟಿಸಿ ಬಸ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಮಹಿಳೆ ಮೇಲೆ ಹರಿದ ಕಾರು, ಸ್ಥಳದಲ್ಲೇ ಸಾವು

ಕೆಂಗೇರಿಯ ಉಲ್ಲಾಳ ಸಮೀಪದ 100 ಅಡಿ​ ರಸ್ತೆಯಲ್ಲಿ ಸ್ಕೂಟರ್​ಗೆ ಬಿಎಂಟಿಸಿ ಬಸ್​ ಡಿಕ್ಕಿಯಾಗಿ ಮಹಿಳೆ ಸಾವನ್ನಪ್ಪಿದ್ದಾರೆ. | Read More

ETV Bharat Live Updates - RING ROAD NEAR ULLALA

02:24 PM, 08 Oct 2024 (IST)

ಮುಡಾ ಪ್ರಕರಣ ಹರಿಯಾಣ ಚುನಾವಣೆ ಮೇಲೆ ಎಫೆಕ್ಟ್ ಆಗಿದೆ: ಕೆ.ಬಿ. ಕೋಳಿವಾಡ

ಕರ್ನಾಟಕದ ಮುಡಾ ಪ್ರಕರಣ ಹರಿಯಾಣ ಚುನಾವಣೆ ಮೇಲೆ ಎಫೆಕ್ಟ್ ಆಗಿದೆ ಎಂದು ಕೈ ಮುಖಂಡ ಕೆ.ಬಿ.ಕೋಳಿವಾಡ ಹೇಳಿದ್ದಾರೆ. | Read More

ETV Bharat Live Updates - KOLIWAD REACT ON HARYANA ELECTION

02:18 PM, 08 Oct 2024 (IST)

ರಾಯಚೂರು ರೈತ ದಸರಾ ಉದ್ಘಾಟನೆಗೆ ಆಗಮಿಸಿದ ಡಿ.ಕೆ.ಶಿವಕುಮಾರ್​ಗೆ​ ಘೇರಾವ್​ ಹಾಕಲು ಯತ್ನ

ಒಳ ಮೀಸಲಾತಿ ಜಾರಿಗೊಳಿಸುವಂತೆ ಘೋಷಣೆ ಕೂಗಿದ ಐಕ್ಯ ಹೋರಾಟ ಸಮಿತಿ ಕಾರ್ಯಕರ್ತರು ಡಿಸಿಎಂ ಡಿ ಕೆ.ಶಿವಕುಮಾರ್​ ಅವರಿಗೆ ಮನವಿ ನೀಡಿದರು. | Read More

ETV Bharat Live Updates - RAICHUR

01:26 PM, 08 Oct 2024 (IST)

ಯುವ ದಸರಾ: ರವಿ ಬಸ್ರೂರು ಮ್ಯೂಸಿಕ್​​ಗೆ ಕುಣಿದು ಕುಪ್ಪಳಿಸಿದ ಜನತೆ; ಪ್ರೇಕ್ಷಕರ ಮನಗೆದ್ದ ವಿವಿಧ ತಂಡಗಳು

ಯುವ ದಸರಾ ಭಾಗವಾಗಿ ಸಂಗೀತ ಮಾಂತ್ರಿಕ ರವಿ ಬಸ್ರೂರು ನೀಡಿದ ಮ್ಯೂಸಿಕ್​ ಪ್ರೋಗ್ರಾಮ್​ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. | Read More

ETV Bharat Live Updates - RAVI BASRUR MUSIC PROGRAM

01:23 PM, 08 Oct 2024 (IST)

ಸಿದ್ದರಾಮಯ್ಯ ಸಿಎಂ ಆಗಿ ಎಷ್ಟು ವರ್ಷ ಇರುತ್ತಾರೆ ಎಂಬುದನ್ನು ಹೈಕಮಾಂಡ್​ಗೆ ಕೇಳಿ: ಸಚಿವ ಜಾರಕಿಹೊಳಿ

ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಜೋರಾಗಿಯೇ ಸದ್ದು ಮಾಡುತ್ತಿದ್ದು, ಈ ಬಗ್ಗೆ ಕಾಂಗ್ರೆಸ್​ ಸಚಿವರಾದ ಸತೀಶ್​ ಜಾರಕಿಹೊಳಿ ಹಾಗೂ ಕೃಷ್ಣ ಬೈರೇಗೌಡ ಪ್ರತಿಕ್ರಿಯೆ ನೀಡಿದ್ದಾರೆ. | Read More

ETV Bharat Live Updates - MYSURU

01:18 PM, 08 Oct 2024 (IST)

ಜಮ್ಮು ಕಾಶ್ಮೀರ, ಹರಿಯಾಣ ಫಲಿತಾಂಶ: ಹೀಗಿದೆ ರಾಜ್ಯ ಕಾಂಗ್ರೆಸ್​ ನಾಯಕರ ಪ್ರತಿಕ್ರಿಯೆ

ಜಮ್ಮು ಮತ್ತು ಕಾಶ್ಮೀರ ಮತ್ತು ಹರಿಯಾಣದಲ್ಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ತಮ್ಮ ಪಕ್ಷ ಗಳಿಸುತ್ತಿರುವ ಸ್ಥಾನಗಳ ಬಗ್ಗೆ ರಾಜ್ಯದ ಕಾಂಗ್ರೆಸ್​ ನಾಯಕರು ಮಾತನಾಡಿದ್ದಾರೆ. | Read More

ETV Bharat Live Updates - BENGALURU

11:42 AM, 08 Oct 2024 (IST)

ಮೈಸೂರು ದಸರಾ: ವಜ್ರಮುಷ್ಠಿ ಕಾಳಗಕ್ಕೆ ಚಾಮರಾಜನಗರ ಪೈಲ್ವಾನ್​ ಶ್ರೀನಿವಾಸ್ ಜಟ್ಟಿ ರೆಡಿ

ವಿಜಯದಶಮಿ ದಿನ ಜಂಬೂ ಸವಾರಿಗೂ ಮುನ್ನ ರಾಜಮನತನದವರ ಸಮ್ಮುಖದಲ್ಲಿ ಅರಮನೆಯ ಕರಿಕಲ್ಲು ತೊಟ್ಟಿಯಲ್ಲಿ ಈ ವಜ್ರಮುಷ್ಠಿ ಕಾಳಗ ನಡೆಯುತ್ತದೆ. | Read More

ETV Bharat Live Updates - CHAMARAJANAGAR

11:07 AM, 08 Oct 2024 (IST)

ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ಮಳೆ ಮತ್ತಷ್ಟು ಬಿರುಸು; ನಾಲ್ಕು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆ

ರಾಜ್ಯದ ಹಲವು ಕಡೆಗಳಲ್ಲಿ ಬೀಳುತ್ತಿರುವ ಮಳೆ ಬಿರುಸುಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. | Read More

ETV Bharat Live Updates - ANNOUNCEMENT OF ORANGE ALERT

11:04 AM, 08 Oct 2024 (IST)

ಕಿತ್ತೂರು ಇತಿಹಾಸ ಸಾರುತ್ತಿದೆ ಇಂದಿರಾ ಗಾಂಧಿ ಉದ್ಘಾಟಿಸಿದ್ದ ರಾಣಿ ಚೆನ್ನಮ್ಮ ವಸ್ತು ಸಂಗ್ರಹಾಲಯ

ಮಾಜಿ ಮುಖ್ಯಮಂತ್ರಿ ಎಸ್.ಆರ್.ಕಂಠಿ ಅವರ ವಿಶೇಷ ಆಸಕ್ತಿಯಿಂದ ತಲೆ ಎತ್ತಿರುವ ರಾಣಿ ಚೆನ್ನಮ್ಮ ವಸ್ತು ಸಂಗ್ರಹಾಲಯ ವೀಕ್ಷಿಸಲು ರಾಜ್ಯ, ಹೊರ ರಾಜ್ಯಗಳಿಂದ ದಿನನಿತ್ಯ ಆಗಮಿಸುವ ನೂರಾರು ಜನರು ಕಿತ್ತೂರು ಇತಿಹಾಸವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ‌. | Read More

ETV Bharat Live Updates - KITTURU RANI CHENNAMMA MUSEUM

10:55 AM, 08 Oct 2024 (IST)

ಮಂಗಳೂರು ದಸರಾ: ಒಂದೇ ಸೂರಿನಡಿ ನವದುರ್ಗೆಯರ ಬೃಹತ್ ವಿಗ್ರಹ, ಇದು ದೇಶದಲ್ಲೇ ಹೊಸ ಕಲ್ಪನೆ

ಕುದ್ರೋಳಿ ದೇವಸ್ಥಾನದಲ್ಲಿ ಶಾರದೆಯ ಜೊತೆಗೆ ಸಿದ್ಧಿಧಾತ್ರಿ, ಮಹಾಗೌರಿ, ಮಹಾಕಾಳಿ, ಕಾತ್ಯಾಯಿನಿ, ಸ್ಕಂದಮಾತಾ, ಚಂದ್ರಘಂಟಾ, ಬ್ರಹ್ಮಚಾರಿಣಿ, ಶೈಲಪುತ್ರಿ, ಆದಿಶಕ್ತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. | Read More

ETV Bharat Live Updates - DAKSHINA KANNADA

10:39 AM, 08 Oct 2024 (IST)

ಜಾತಿನಿಂದನೆ ಆರೋಪ: ಕಿರುತೆರೆ ಹಾಸ್ಯ ನಟ ಕಾರ್ತಿಕ್ ವಿರುದ್ಧ ಎಫ್ಐಆರ್

ಜಾತಿನಿಂದನೆ ಆರೋಪದಡಿ ಕಿರುತೆರೆ ಹಾಸ್ಯ ನಟ ಕಾರ್ತಿಕ್ ವಿರುದ್ಧ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. | Read More

ETV Bharat Live Updates - FIR AGAINST COMEDY ACTOR KARTHIK

10:35 AM, 08 Oct 2024 (IST)

ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರಿಯುತ್ತಾರೆ: ಸತೀಶ್​ ಜಾರಕಿಹೊಳಿ

ಈಗಾಗಲೇ ಸಿದ್ದರಾಮಯ್ಯ ಅವರು ಸಿಎಂ ಆಗಿರುವಾಗ ಮತ್ತೆ ದಲಿತ ಸಿಎಂ ಆಗ್ತಾರೆ ಎನ್ನುವ ಪ್ರಶ್ನೆಯೇ ಹುಟ್ಟುವುದಿಲ್ಲ ಎಂದು ಸಚಿವ ಸತೀಶ್​ ಜಾರಕಿಹೊಳಿ ಹೇಳಿದರು. | Read More

ETV Bharat Live Updates - MANDYA

10:25 AM, 08 Oct 2024 (IST)

ಆರ್‌ಟಿಒ ಚೆಕ್ ಪೋಸ್ಟ್​ಗಳ ಮೇಲೆ ರಾಜ್ಯಾದ್ಯಂತ ಲೋಕಾಯುಕ್ತ ದಾಳಿ

ಆರ್‌ಟಿಒ ಚೆಕ್ ಪೋಸ್ಟ್ ಮೇಲೆ ರಾಜ್ಯಾದ್ಯಂತ ದಾಳಿ ಮಾಡಿದ ಲೋಕಾಯುಕ್ತ ಅಧಿಕಾರಿಗಳ ತಂಡ, ಪರಿಶೀಲನೆ ನಡೆಸುತ್ತಿದೆ. | Read More

ETV Bharat Live Updates - LOKAYUKTA RAID ON RTO CHECK POSTS

09:42 AM, 08 Oct 2024 (IST)

ಚಾಮರಾಜನಗರ ಯುವ ದಸರಾಗೆ ಚಾಲನೆ ನೀಡಿದ ನಟ ನಾಗಭೂಷಣ್: 'ಇಲ್ಲೇ ಪಿಡಿಒ ಆಗಿದ್ದೆ' ಎಂದ ಟಗರುಪಲ್ಯ ನಟ

ಚಾಮರಾಜನಗರ ಜಿಲ್ಲಾ ದಸರಾಗೆ ಸಚಿವ ಕೆ. ವೆಂಕಟೇಶ್​ ಅವರು ಸೋಮವಾರ ಚಾಲನೆ ನೀಡಿದ್ದು, ಒಟ್ಟು ಮೂರು ದಿನಗಳ ಕಾಲ ಅದ್ಧೂರಿಯಾಗಿ ದಸರಾ ಕಾರ್ಯಕ್ರಮಗಳು ಜರುಗಲಿವೆ. | Read More

ETV Bharat Live Updates - CHAMARAJANAGAR

09:20 AM, 08 Oct 2024 (IST)

ಟರ್ಕಿ ದೇಶದ ಸಜ್ಜೆ ಬೆಳೆದು ಬಂಪರ್ ಲಾಭ ಪಡೆದ ಗಂಗಾವತಿ ರೈತ: ಹೊಲಕ್ಕೆ ಕೃಷಿ ಅಧಿಕಾರಿಗಳು ಭೇಟಿ

ಈ ಟರ್ಕಿ ಬೆಳೆಯಿಂದ ರೈತರಿಗೆ ಹೆಚ್ಚು ಪ್ರಯೋಜನವಾಗುವುದಾದರೆ, ಈ ತಳಿಯ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಿ ಒದಗಿಸಲಾಗುವುದು ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ. | Read More

ETV Bharat Live Updates - KOPPALA

08:31 AM, 08 Oct 2024 (IST)

ಅನಧಿಕೃತ ಕೊಳವೆ ಬಾವಿ, ಆಸ್ತಿ ಹಾನಿ ಪ್ರಕರಣಗಳ ಸಂಬಂಧ ಪಾಲಿಕೆಯಿಂದ ದೂರು: ಎಫ್‌ಐಆರ್‌ ದಾಖಲು

ಅನಧಿಕೃತ ಕೊಳವೆಬಾವಿ ಕುರಿತು ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಹಾಗೂ ಆಸ್ತಿ ಹಾನಿ ಮಾಡಿರುವ ಕುರಿತು ಆರ್‌.ಆರ್ ನಗರ ಪೊಲೀಸ್ ಠಾಣೆಯಲ್ಲಿ ಬಿಬಿಎಂಪಿ ದೂರು ನೀಡಿದ್ದು, ಎಫ್​ಐಆರ್​ ದಾಖಲಾಗಿದೆ. | Read More

ETV Bharat Live Updates - BENGALURU

07:15 AM, 08 Oct 2024 (IST)

ಗ್ರಾಮಸಭೆಗೆ ಮಾರ್ಗಸೂಚಿ; ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆ ತಲುಪಿಸುವಲ್ಲಿ ಕ್ರಮ ವಹಿಸುವಂತೆ ಸಚಿವ ಖರ್ಗೆ ಸೂಚನೆ

ಗ್ರಾಮಸಭೆ ನಡೆಸಲು ಮಾರ್ಗಸೂಚಿ ಬಿಡುಗಡೆ ಮಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಗ್ರಾಮಗಳ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆ ತಲುಪಿಸುವಲ್ಲಿ ಕ್ರಮ ವಹಿಸುವಂತೆ ಸೂಚನೆ ನೀಡಿದರು. | Read More

ETV Bharat Live Updates - GRAM SABHA GUIDELINE

07:07 AM, 08 Oct 2024 (IST)

ನಾಲ್ಕು ಹೆಚ್ಚುವರಿ ರಾಷ್ಟ್ರೀಯ ದಿನಗಳ ಆಚರಣೆಗೆ ಕೋರಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ವಕೀಲ ಎಂ.ಎಸ್. ಚಂದ್ರಶೇಖರಬಾಬು ಹಾಗೂ ಖಗೋಳಶಾಸಜ್ಞ ಜಿ. ರವೀಂದ್ರ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ವಿಚಾರಣೆ ನಡೆಸಿದ ಎನ್.ವಿ. ಅಂಜಾರಿಯಾ ಹಾಗೂ ಕೆ.ವಿ. ಅರವಿಂದ್ ಅವರಿದ್ದ ವಿಭಾಗೀಯ ಪೀಠ ಅರ್ಜಿಯನ್ನು ವಜಾಗೊಳಿಸಿತು. | Read More

ETV Bharat Live Updates - KARNATAKA HIGH COURT

07:03 AM, 08 Oct 2024 (IST)

ಮೈಸೂರು ದಸರಾ: ಆಗಸದಲ್ಲಿ ಮೂಡಿದ ಸಹಸ್ರಾರು ಡ್ರೋನ್‌ಗಳ ಕಲರವ; ವಿಜಯ್​ ಪ್ರಕಾಶ್ ಗಾಯನ ಮೋಡಿ

ಪಂಜಿನ ಕವಾಯತು ಮೈದಾನದಲ್ಲಿ 1500 ಡ್ರೋನ್‌ಗಳು ಬಾನಂಗಳದಲ್ಲಿ ವಿವಿಧ ಚಿತ್ತಾರಗಳನ್ನು ಮೂಡಿಸಿದರೆ, ಮತ್ತೊಂದೆಡೆ ಗಾಯಕ ವಿಜಯ್​ ಪ್ರಕಾಶ್​ ಅವರ ಗಾಯನ ಡ್ರೋನ್​ ಶೋಗೆ ಸಾಥ್​ ನೀಡಿತು. | Read More

ETV Bharat Live Updates - MYSURU

06:58 AM, 08 Oct 2024 (IST)

ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಆಡಳಿತಾಧಿಕಾರಿ ನೇಮಿಸಿ ಸರ್ಕಾರ ಆದೇಶ

ಸಂಘದ ಹೊಸ ಆಡಳಿತ ಮಂಡಳಿ ರಚನೆಯಾಗುವವರೆಗೆ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಆಡಳಿತಾಧಿಕಾರಿಯಾಗಿ ನೇಮಿಸಲಾಗಿದೆ. | Read More

ETV Bharat Live Updates - STATE GOVT EMPLOYEES ASSOCIATION

06:53 AM, 08 Oct 2024 (IST)

ಕಪ್ಪತ್ತಗುಡ್ಡ ವನ್ಯಜೀವಿಧಾಮದಲ್ಲಿನ 28 ಗಣಿಗಾರಿಕೆ ಪ್ರಸ್ತಾವನೆ ಮುಂದೂಡಲು ತೀರ್ಮಾನ - Mining Proposal

ಕಪ್ಪತ್ತಗುಡ್ಡ ವನ್ಯಜೀವಿಧಾಮದಲ್ಲಿನ 28 ಗಣಿಗಾರಿಕೆ ಪ್ರಸ್ತಾವನೆ ಮುಂದೂಡಲು ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ 16ನೇ ರಾಜ್ಯ ವನ್ಯಜೀವಿ ಮಂಡಳಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. | Read More

ETV Bharat Live Updates - MINING PROPOSAL IN KAPPATAGUDDA
Last Updated : Oct 8, 2024, 10:42 PM IST

ABOUT THE AUTHOR

...view details