ಗಂಗಾವತಿ:ಇಲ್ಲಿನ ಜುಲೈನಗರದಿಂದ ರಾಣಾಪ್ರತಾಪ್ ಸಿಂಗ್ ವೃತ್ತದವರೆಗೂ ಅಳವಡಿಸಿರುವ ಹೊಸ ಮಾದರಿಯ ವಿದ್ಯುತ್ ಕಂಬಗಳನ್ನು ತೆರವು ಮಾಡುವಂತೆ ಹಾಗೂ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ಸಂಸ್ಥೆ ಕೊಪ್ಪಳ (ಕೆಆರ್ಐಡಿಎಲ್) ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಮಾಡಿದ್ದ ಆದೇಶವನ್ನು ತಹಶೀಲ್ದಾರ್ ಯು.ನಾಗರಾಜ್ ಹಿಂಪಡೆದಿದ್ದಾರೆ.
ಆಗಸ್ಟ್ 28ರಂದು ಸಂಜೆ ಮಾಡಿದ್ದ ಆದೇಶವನ್ನು ಹಿಂಪಡೆದಿರುವ ತಹಶೀಲ್ದಾರ್, ಈ ಬಗ್ಗೆ ಸಂಬಂಧಿತ ಸಂಕ್ಷಮ ಪ್ರಾಧಿಕಾರದಲ್ಲಿ ಜನಾಭಿಪ್ರಾಯ ಪಡೆದು ಮುಂದುವರೆಯಲು, ಧಾರ್ಮಿಕ, ಮತೀಯ ಭಾವನೆಯಂತಹ ಸೂಕ್ಷ್ಮ ವಿಚಾರ ಉಂಟಾದಲ್ಲಿ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಅಲ್ಲದೇ, ಜಿಲ್ಲಾಧಿಕಾರಿಗಳ ಮೌಖಿಕ ಆದೇಶದ ಹಿನ್ನೆಲೆಯಲ್ಲಿ ಆ.28ರಂದು ತಹಶೀಲ್ದಾರ್ ಕಚೇರಿಯಿಂದ ಹೊರಡಿಸಿದ್ದ ಆದೇಶ ಹಿಂಪಡೆಯಲಾಗುತ್ತಿದೆ. ಈ ಪ್ರಕರಣವನ್ನು ಇದೇ ಹಂತದಲ್ಲಿ ವಿಲೇವಾರಿ ಮಾಡಿ ಎಂದು ತಹಸೀಲ್ದಾರ್ ನಾಗರಾಜ್ ನಗರ ಠಾಣೆಯ ಪೊಲೀಸ್ ಅಧಿಕಾರಿಗಳಿಗೆ ಪತ್ರದ ಮೂಲಕ ಸೂಚನೆ ನೀಡಿದ್ದಾರೆ.