ಕುಮಾರಸ್ವಾಮಿ ತಿಮಿಂಗಿಲ ಯಾರೆಂದು ಹೇಳಿದ್ರೆ ಪ್ರಕರಣ ಮುಗಿಯುತ್ತದೆ: ಡಾ.ಜಿ.ಪರಮೇಶ್ವರ್ (ETV Bharat) ಬೆಂಗಳೂರು: ಕುಮಾರಸ್ವಾಮಿಯವರೇ ತಿಮಿಂಗಿಲ ಯಾರೆಂದು ಹೇಳಿದ್ರೆ ಪ್ರಕರಣ ಮುಗಿಯುತ್ತದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ. ರೇವಣ್ಣ ಪ್ರಕರಣ ರಾಜಕೀಯ ಪ್ರೇರಿತ. ಇದರ ಹಿಂದೆ ದೊಡ್ಡ ತಿಮಿಂಗಿಲವೇ ಇದೆ ಎಂಬ ಹೆಚ್ಡಿಕೆ ಹೇಳಿಕೆಗೆ ಅವರು ಈ ರೀತಿಯಾಗಿ ಪ್ರತಿಕ್ರಿಯಿಸಿದರು.
ಇಂದು ಸದಾಶಿವನಗರದ ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ತಿಮಿಂಗಿಲ ಯಾರೆಂದು ತಿಳಿಸಿದರೆ ಈ ಪ್ರಕರಣ ಮುಗಿಯುತ್ತದೆ. ಕುಮಾರಸ್ವಾಮಿಯವರೇ ಹೇಳಿದ್ರೆ ಒಳ್ಳೆಯದು. ಅವರು ಪ್ರತಿದಿನ ಒಂದೊಂದು ಹೇಳಿಕೆ ಕೊಡುತ್ತಾರೆ. ಅವರು ದಾಖಲೆ ಕೊಟ್ಟ ನಂತರ ತನಿಖೆ ಮಾಡಲಿಲ್ಲ ಎಂದು ಹೇಳಲಿ ಎಂದು ಸವಾಲು ಹಾಕಿದರು.
ಪ್ರಜ್ವಲ್ ರೇವಣ್ಣ ಇಂದು ರಾಜ್ಯಕ್ಕೆ ವಾಪಸ್ ಆಗಲಿದ್ದಾರೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಪರಮೇಶ್ವರ್, ನಿಮಗೆ ಮಾಹಿತಿ ಇದೆಯೇ?, ಹೇಳಿ. ಟಿಕೆಟ್ ಬುಕ್ ಆಗಿರುವ ಬಗ್ಗೆ ಮಾಹಿತಿ ತಮಗೆ ಇದೆಯಾ?. ಗೃಹ ಇಲಾಖೆಗೆ ಮಾಹಿತಿ ಇರುತ್ತದೆ. ನಿಮಗೆ ಹೇಳಲು ಆಗಲ್ಲ. ನಿಮಗೆ ಗೊತ್ತಿದ್ರೆ ಹೇಳಿ ತನಿಖೆಗೆ ಸಹಾಯ ಆಗುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ:ರೇವಣ್ಣ ಬಂಧನ ರಾಜಕೀಯ ಪ್ರೇರಿತ; ಹೆಚ್.ಡಿ. ಕುಮಾರಸ್ವಾಮಿ - HD Kumaraswamy
107 ಸಾಹಿತಿಗಳು ಸಿಎಂಗೆ ಬರೆದ ಪತ್ರದ ವಿಚಾರವಾಗಿ ಪ್ರತಿಕ್ರಿಯಿಸಿ, ಸಾಹಿತಿಗಳು ಬರೆದ ಪತ್ರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಸಾಹಿತಿಗಳು ಸಮಾಜದ ಬಗ್ಗೆ ಕಳಕಳಿ ಇರುವವರು. ಅನೇಕ ವಿಷಯಗಳನ್ನು ನಿತ್ಯ ಗಮನಿಸಿರುತ್ತಾರೆ. ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಪತ್ರವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಎಸ್.ಐ.ಟಿ ಎಲ್ಲವನ್ನೂ ಪರಿಗಣಿಸುತ್ತದೆ ಎಂದು ತಿಳಿಸಿದರು.
ಇನ್ನು, ಸಿಎಂ ಜೊತೆಗಿನ ಸಭೆ ವಿಚಾರವಾಗಿ ಪ್ರತಿಕ್ರಿಯಿಸಿದ ಗೃಹ ಸಚಿವರು ಸಭೆಯ ವಿಚಾರ ಬಹಿರಂಗವಾಗಿ ಹೇಳುವಂತದ್ದಲ್ಲ. ಸತೀಶ್ ಜಾರಕಿಹೊಳಿ ಪುತ್ರಿ ಸ್ಪರ್ಧೆ ಮಾಡಿದ್ರು. ಆ ವಿಚಾರವಾಗಿ ಸತೀಶ್ ಅವರನ್ನು ಭೇಟಿಯಾಗಿದ್ದೆ ಎಂದಷ್ಟೇ ಹೇಳಿದರು.
ಇದನ್ನೂ ಓದಿ:ಪರಿಷತ್ ಚುನಾವಣೆ: ಬಿಜೆಪಿಗೆ 4, ಜೆಡಿಎಸ್ಗೆ 2 ಕ್ಷೇತ್ರ; ದಕ್ಷಿಣ ಶಿಕ್ಷಕರ ಕಣಕ್ಕೆ ನಾಳೆ ಅಭ್ಯರ್ಥಿ ಘೋಷಣೆ? - Council Election