ಬೆಂಗಳೂರು: ಮಾಜಿ ಸಿಎಂ ಎಸ್. ಎಂ. ಕೃಷ್ಣ ನಿವಾಸಕ್ಕೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಸುಧಾಕರ್ ಭೇಟಿ ನೀಡಿದರು. ಯುಗಾದಿ ಹಬ್ಬದ ಶುಭಾಶಯ ಕೋರುವ ಜತೆಗೆ ರಾಜಕೀಯ ವಿಚಾರಗಳ ಕುರಿತು ಚರ್ಚಿಸಿ ಆಶೀರ್ವಾದ ಪಡೆದುಕೊಂಡರು. ಬಳಿಕ ಮಾತನಾಡಿದ ಡಾ. ಸುಧಾಕರ್, ಸಾಮಾನ್ಯವಾಗಿ ಹೊಸ ವರ್ಷದ ಸಂದರ್ಭದಲ್ಲಿ, ಯುಗಾದಿ ಹೊತ್ತಲ್ಲಿ ಭೇಟಿಯಾಗಿ ಶುಭಾಶಯ ಕೊರುತ್ತೇನೆ. ಯುಗಾದಿ ಸಂದರ್ಭದಲ್ಲಿ ನನ್ನ ರಾಜಕೀಯ ಗುರು ಎಸ್.ಎಂ ಕೃಷ್ಣ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದೆ. ಅವರು ಸಹ ಚುನಾವಣೆಯಲ್ಲಿ ಗೆದ್ದು ಬರಬೇಕು ಎಂದು ಆಶೀರ್ವಾದ ಮಾಡಿ, ಕೆಲವು ಸಲಹೆಯನ್ನು ಕೊಟ್ಟಿದ್ದಾರೆ ಎಂದರು.
ಎಸ್.ಎಂ ಕೃಷ್ಣ ಭೇಟಿಯಾಗಿ ಆಶೀರ್ವಾದ ಪಡೆದ ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಸುಧಾಕರ್ - Dr K Sudhakar met S M Krishna - DR K SUDHAKAR MET S M KRISHNA
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಕೆ ಸುಧಾಕರ್ ತಮ್ಮ ರಾಜಕೀಯ ಗುರು ಮಾಜಿ ಸಿಎಂ ಎಸ್. ಎಂ. ಕೃಷ್ಣ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
Published : Apr 9, 2024, 8:22 PM IST
ಈ ಪ್ರಾಯದಲ್ಲಿ ಆಳವಾದ ಅಂತಾರಾಷ್ಟ್ರೀಯ, ರಾಷ್ಟ್ರೀಯ ವಿಚಾರದ ಬಗ್ಗೆ ಇರುವ ಜ್ಞಾನ ಅನನ್ಯ, ಹೀಗಾಗಿ ಪ್ರತಿಬಾರಿ ಭೇಟಿಯಾದಾಗ ಹೊಸ ವಿಚಾರ ತಿಳಿದುಕೊಳ್ಳುತ್ತೇನೆ. ಕ್ಷೇತ್ರದ ಬಗ್ಗೆ ಕೆಲವು ಸಲಹೆಯನ್ನು ಕೊಟ್ಟಿದ್ದಾರೆ. ಅಪಾರವಾದ ಅನುಭವ ಹೊಂದಿದ್ದಾರೆ, ಸಂಸದರು ಕೂಡ ಆಗಿದ್ದವರು. ಕೇಂದ್ರ ಸಚಿವರು ಸಹ ಆಗಿದ್ದರು. ನನಗೆ ತಿಳಿದಿರುವ ಹಾಗೆ ಈ ದೇಶದ ನಾಲ್ಕು ಮನೆಯಲ್ಲಿ ಕೆಲಸ ಮಾಡಿದ ಅನುಭವ ಇರುವ ಬೆರಳೆಣಿಕೆಯ ರಾಜಕಾರಣಿಗಳಲ್ಲಿ ಎಸ್.ಎಂ ಕೃಷ್ಣ ಕೂಡ ಒಬ್ಬರು. ವಿಧಾನಸಭೆ, ವಿಧಾನ ಪರಿಷತ್, ರಾಜ್ಯಸಭೆ, ಲೋಕಸಭೆಯಲ್ಲಿ ಕೆಲಸ ಮಾಡಿದ್ದಾರೆ. ಅವರು ಒಂದು ಯೂನಿವರ್ಸಿಟಿ ಇದ್ದಂತೆ. ಅದೇ ರೀತಿ ಮಾಜಿ ಪ್ರಧಾನಿ ದೇವೇಗೌಡರಿಗೂ ಸಹ ಅನುಭವ ಇದೆ ಎಂದು ಕೊಂಡಾಡಿದರು.
ಇದನ್ನೂ ಓದಿ:28 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಿಸುವ ಮೂಲಕ ಮೋದಿಗೆ ಉಡುಗೊರೆ ನೀಡುತ್ತೇವೆ: ಬಿ.ಎಸ್.ಯಡಿಯೂರಪ್ಪ - B S Yediyurappa