ಬೆಳಗಾವಿ:ತಾಲೂಕು ವ್ಯಾಪ್ತಿಯ ಗಡಿಯ ಬದಲಿಗೆ ಹತ್ತಿರದ ಸಗಟು ಮಾರಾಟ ಮಳಿಗೆಯಿಂದ (ಡಬ್ಲ್ಯೂಎಸ್‌ಡಿ) ನ್ಯಾಯಬೆಲೆ ಅಂಗಡಿಗಳಿಗೆ ಆಹಾರ ಧಾನ್ಯಗಳನ್ನು ಪೂರೈಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಲೆಕ್ಕನಿಯಂತ್ರಕರು ಮತ್ತು ಮಹಾ ಲೆಕ್ಕಪರಿಶೋಧಕರ ವರದಿ (ಸಿಎಜಿ) ಒತ್ತಾಯಿಸಿದೆ.
ವಿಧಾನಸಭೆಯಲ್ಲಿ ಮಂಡಿಸಲಾದ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಸರಬರಾಜು ನಿರ್ವಹಣೆ ಕುರಿತ ವರದಿಯಲ್ಲಿ, ಡಬ್ಲ್ಯೂಎಸ್‌ಡಿಗಳಿಂದ ಗೋದಾಮಿನ ಕಾರ್ಯಾಚರಣೆಗಳಿಗೆ ರಾಜ್ಯ ಸರ್ಕಾರ ಮಾರ್ಗಸೂಚಿಗಳನ್ನು ರೂಪಿಸಬೇಕು. ಕಳಪೆ ನಿರ್ವಹಣೆಯ ಮೇಲೆ ನಿಗಾಹಿಸಬೇಕು ಮತ್ತು ವ್ಯವಸ್ಥಾಪಕರ ಮೇಲೆ ಜವಾಬ್ದಾರಿಗಳನ್ನು ನಿಗದಿಪಡಿಸಬೇಕು. ವಾಹನಗಳ ಸಾಮರ್ಥ್ಯ ಮೀರಿ ಅಧಿಕ ಹೊರೆ ಹೊತ್ತ ಸಾಗಾಣಿಕೆದಾರರಿಗೆ ದಂಡ ವಿಧಿಸುವುದನ್ನು ರಾಜ್ಯ ಸರ್ಕಾರ ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ.