ಕರ್ನಾಟಕ

karnataka

ETV Bharat / state

Watch ವಿಡಿಯೋ: ಜ್ಯುವೆಲ್ಲರಿ ಮಾಲೀಕನ ಗಮನ ಬೇರೆಡೆ ಸೆಳೆದು ಒಡವೆಯೊಂದಿಗೆ ಪರಾರಿಯಾದ ಯುವಕ - JEWELLERY THEFT

ಆನೇಕಲ್​ನ ಸೂರ್ಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಜ್ಯುವೆಲ್ಲರಿ ಅಂಗಡಿಯೊಂದರ ಮಾಲೀಕರ ಗಮನ ಬೇರೆಡೆ ಸೆಳೆದು, ಒಡವೆಯೊಂದಿಗೆ ಯುವಕ ಪರಾರಿಯಾದ ಘಟನೆ ನಡೆದಿದೆ.

a-young-man-stolen-jewellery
ಒಡವೆಯೊಂದಿಗೆ ಪರಾರಿಯಾದ ಯುವಕ (ETV Bharat)

By ETV Bharat Karnataka Team

Published : Nov 8, 2024, 4:00 PM IST

Updated : Nov 8, 2024, 5:06 PM IST

ಆನೇಕಲ್ (ಬೆಂಗಳೂರು) : ಒಡವೆ ಅಂಗಡಿಯ ಮಾಲೀಕರ ಗಮನ ಬೇರೆಡೆ ಸೆಳೆದು ಒಡವೆಯೊಂದಿಗೆ ಯುವಕ ಪರಾರಿಯಾದ ಘಟನೆ ಸೂರ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಚಂದಾಪುರದ ಲಕ್ಷ್ಮಿ ಜ್ಯುವೆಲ್ಲರಿ ಅಂಗಡಿಯಲ್ಲಿ ಒಡವೆ ಕೊಳ್ಳಲು ಬಂದು ಬಹುಕಾಲ ಮಾತಿನಲ್ಲಿಯೇ ಅಡ್ಡಾಡುತ್ತಿದ್ದ ಯುವಕ, ಇಬ್ಬರು ಮಹಿಳೆಯರು ಹೊರ ಹೋದ ನಂತರ, ಬೇರೆ ಡಿಸೈನ್ ಒಡವೆ ತೋರಿಸಿ ಎಂದು ಮಾಲೀಕರಿಗೆ ಸತಾಯಿಸಿದ್ದ. ಆಗ ಅಂಗಡಿ ಮಾಲೀಕ ರಾಜು ಇನ್ನೂ ಬೇರೆಯ ತರಹದ ಒಡವೆ ತೋರಿಸಲು ಒಳ ಹೋಗಿದ್ದೇ ತಡ ಇತ್ತ ಒಡವೆ ಕದ್ದು ಯುವಕ ಪರಾರಿಯಾಗಿದ್ದಾನೆ.

ಜ್ಯುವೆಲ್ಲರಿ ಮಾಲೀಕನ ಗಮನ ಬೇರೆಡೆ ಸೆಳೆದು ಒಡವೆಯೊಂದಿಗೆ ಪರಾರಿಯಾದ ಯುವಕ (ETV Bharat)

ಒಟ್ಟು 400 ಗ್ರಾಂ ತೂಕದ 32 ಲಕ್ಷ ಬೆಲೆ ಬಾಳುವ ಚಿನ್ನದ ಒಡವೆಯನ್ನು ಕದ್ದು ಪರಾರಿಯಾದ ಯುವಕನ ಚಲನವಲನ ಅಂಗಡಿ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ :Davanagere crime: ವೈದ್ಯರ ಮನೆಗೆ ಕನ್ನ; ₹22 ಲಕ್ಷ ನಗದು, ಚಿನ್ನಾಭರಣ ಕಳ್ಳತನ

Last Updated : Nov 8, 2024, 5:06 PM IST

ABOUT THE AUTHOR

...view details