ಕರ್ನಾಟಕ

karnataka

ETV Bharat / state

ನಮ್ಮ ಮೆಟ್ರೋ ಪಿಲ್ಲರ್‌ಗಳಿಗೆ ಬಣ್ಣದ ಸ್ಪರ್ಶ: ಚನ್ನಪಟ್ಟಣದ ಕಲೆ ಬಿಂಬಿಸುವ ಕಲಾಕೃತಿಗಳು - BENGALURU METRO PILLARS PAINTED

"ಪಿಲ್ಲರ್ಸ್ ಆಫ್‌ ಬೆಂಗಳೂರು - ಪ್ರತಿನಿತ್ಯದ ಚಾಂಪಿಯನ್‌ಗಳ ಸಂಭ್ರಮಾಚರಣೆ" ಶೀರ್ಷಿಕೆಯಡಿ ಮೆಟ್ರೋ ಪಿಲ್ಲರ್‌ಗಳಿಗೆ ಬಣ್ಣದ ಸ್ಪರ್ಶ ನೀಡಲಾಗಿದೆ.

a-touch-of-color-on-bengaluru-metro-pillars
ನಮ್ಮ ಮೆಟ್ರೋ ಪಿಲ್ಲರ್‌ಗಳಿಗೆ ಬಣ್ಣದ ಸ್ಪರ್ಶ (ETV Bharat)

By ETV Bharat Karnataka Team

Published : Feb 13, 2025, 9:08 PM IST

ಬೆಂಗಳೂರು:ಬಯೋಕಾನ್‌ ಫೌಂಡೇಷನ್‌ನ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್‌)ಯಡಿಯಲ್ಲಿ ನಗರದ ಐವತ್ತಕ್ಕೂ ಹೆಚ್ಚು ಮೆಟ್ರೋ ಪಿಲ್ಲರ್‌ಗಳಿಗೆ ಚನ್ನಪಟ್ಟಣದ ಕಲೆಯನ್ನು ಬಿಂಬಿಸುವ ಬಣ್ಣದ ಕಲಾಕೃತಿಗಳನ್ನು ಚಿತ್ರಿಸಲಾಗಿದೆ.

ನಗರದ ಹುಸ್ಕೂರು ಗೇಟ್‌ನಿಂದ ಹೆಬ್ಬಗೋಡಿವರೆಗಿನ ಮಾರ್ಗದಲ್ಲಿರುವ 50ಕ್ಕೂ ಅಧಿಕ ಮೆಟ್ರೋ ಪಿಲ್ಲರ್‌ಗಳ ಮೇಲೆ "ಪಿಲ್ಲರ್ಸ್ ಆಫ್‌ ಬೆಂಗಳೂರು-ಪ್ರತಿನಿತ್ಯದ ಚಾಂಪಿಯನ್‌ಗಳ ಸಂಭ್ರಮಾಚರಣೆ" ಶೀರ್ಷಿಕೆಯಡಿಯಲ್ಲಿ ಚನ್ನಪಟ್ಟಣದ ಕಲೆಯನ್ನು ಬಿಂಬಿಸುವ ಕಲಾಕೃತಿಗಳನ್ನು ಸುಂದರವಾಗಿ ಮೂಡಿಸಲಾಗಿದೆ.

ಹೂ ಮಾರಾಟಗಾರರು, ಎಲೆಕ್ಟ್ರೀಷಿಯನ್‌, ಟೈಲರ್‌ಗಳು, ಪ್ಲಂಬರ್ಸ್‌, ವೈದ್ಯರು, ದಾದಿಯರು, ಸಂಗೀತಗಾರರು, ವಿಜ್ಞಾನಿಗಳು, ಐಟಿ ಉದ್ಯೋಗಿಗಳು, ಏರೋಸ್ಪೇಸ್‌ ಸೇರಿದಂತೆ ನಮ್ಮ ದೈನಂದಿನ ಜೀವನದ ಭಾಗವಾಗಿರುವ ಎಲ್ಲಾ ಪಾತ್ರಧಾರಿಗಳ ಚಿತ್ರಗಳು ಚನ್ನಪಟ್ಟಣದ ಗೊಂಬೆಗಳಂತೆ ಸುಂದರವಾದ ಕೆತ್ತನೆಯ ರೀತಿಯಲ್ಲಿ ಮೂಡಿಬಂದಿವೆ.

ನಮ್ಮ ಮೆಟ್ರೋ ಪಿಲ್ಲರ್‌ಗಳಿಗೆ ಬಣ್ಣದ ಸ್ಪರ್ಶ (ETV Bharat)

ಈ ಕುರಿತು ಪ್ರತಿಕ್ರಿಯಿಸಿದ ಬಯೋಕಾನ್ ಫೌಂಡೇಶನ್‌ ಮಿಷನ್‌ನ ನಿರ್ದೇಶಕ ಡಾ.ಅನುಪಮಾ ಶೆಟ್ಟಿ, "ನಮ್ಮ ದೈನಂದಿನ ಸೆಲೆಬ್ರಿಟೀಸ್‌ಗಳನ್ನು ನೆನೆಯಲು 'ಪಿಲ್ಲರ್ಸ್ ಆಫ್ ಬೆಂಗಳೂರು' ಹೆಸರಿನ ವಿನೂತನ ಕಾರ್ಯವನ್ನ ಕೈಗೆತ್ತಿಕೊಳ್ಳಲಾಗಿದೆ. ಹುಸ್ಕೂರು ಗೇಟ್‌ನಿಂದ ಪ್ರಾರಂಭವಾಗುವ ಮೆಟ್ರೋ ಪಿಲ್ಲರ್‌ಗಳ ಮೇಲೆ ನಮ್ಮ ಸಾಂಪ್ರದಾಯಿಕ ಕಲೆಯನ್ನು ಬಿಂಬಿಸುವ ಕಲಾ ಕೃತಿಗಳನ್ನು ಚಿತ್ರಿಸಲಾಗಿದ್ದು, ನೋಡುಗರನ್ನು ಮನಸೂರೆಗೊಳಿಸುತ್ತದೆ'' ಎಂದರು.

''ಈ ಎಲ್ಲಾ ಕಲಾಕೃತಿಗಳು ಬೀದಿ ಬದಿ ವ್ಯಾಪಾರಿಗಳು, ಆಟೋ ಡ್ರೈವರ್‌ಗಳಿಂದ ಹಿಡಿದು ಐಟಿ ವೃತ್ತಿಪರರವರೆಗೂ ಎಲ್ಲರನ್ನೂ ಒಳಗೊಂಡಿದೆ. ಚನ್ನಪಟ್ಟಣದ ಗೊಂಬೆಗಳ ಸ್ಪರ್ಶ ನೀಡಿ ಈ ಚಿತ್ರಗಳನ್ನ ಚಿತ್ರಿಸಿರುವುದು ಇನ್ನಷ್ಟು ವಿಭಿನ್ನವೆನಿಸಲಿದೆ" ಎಂದು ತಿಳಿಸಿದರು.

ಇದನ್ನೂ ಓದಿ:ಏಷ್ಯಾ-ಪೆಸಿಫಿಕ್‌ನ 100 ಬೆಸ್ಟ್‌ ಸಿಟಿಗಳ ಪಟ್ಟಿ: ಬೆಂಗಳೂರು, ಮೈಸೂರಿನ ಸ್ಥಾನ ಬಹಿರಂಗ

ABOUT THE AUTHOR

...view details