ಕರ್ನಾಟಕ

karnataka

ETV Bharat / sports

ವಿಜಯ್ ಹಜಾರೆ ಟ್ರೋಫಿಗೆ ಕರ್ನಾಟಕದ ಸಂಭಾವ್ಯ ಆಟಗಾರರ ಪಟ್ಟಿ ಪ್ರಕಟ; ಸ್ಥಾನ ಪಡೆದವರ ಮಾಹಿತಿ ಇಲ್ಲಿದೆ

ವಿಜಯ್ ಹಜಾರೆ ಏಕದಿನ ಸರಣಿಗೆ ಸಿದ್ಧತೆ ನಡೆದಿದ್ದು, ವಿಜಯ್‌ ಹಜಾರೆ ಸಂಭಾವ್ಯ ತಂಡವನ್ನು ಪ್ರಕಟಿಸಲಾಗಿದೆ.

VIJAY HAZARE TROPHY
ಕೆ.ಎಲ್. ರಾಹುಲ್ (IANS)

By ETV Bharat Karnataka Team

Published : 14 hours ago

ಬೆಂಗಳೂರು :ಇದೇ ತಿಂಗಳ 21ರಿಂದ ಆರಂಭವಾಗಲಿರುವ ವಿಜಯ್ ಹಜಾರೆ ಟ್ರೋಫಿಗೆ ಸಂಭಾವ್ಯ ಆಟಗಾರರ ಪಟ್ಟಿಯನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಪ್ರಕಟಿಸಿದೆ.

32 ಸಂಭಾವ್ಯ ಆಟಗಾರರ ಪಟ್ಟಿಯಲ್ಲಿ ಅನುಭವಿ ಆಟಗಾರರಾದ ಕೆ.ಎಲ್.ರಾಹುಲ್, ಪ್ರಸಿಧ್ ಕೃಷ್ಣ, ಶ್ರೇಯಸ್ ಗೋಪಾಲ್ ತಂಡದಲ್ಲಿ ಸ್ಥಾನ ಪಡೆದಿದ್ದು, ಮತ್ತೋರ್ವ ಅನುಭವಿ ಆಟಗಾರ ಮನೀಶ್ ಪಾಂಡೆ ಅವರನ್ನು ತಂಡದಿಂದ ಕೈಬಿಡಲಾಗಿದೆ.

ಕರ್ನಾಟಕ ಸಂಭಾವ್ಯ ತಂಡ:ಕೆ.ಎಲ್. ರಾಹುಲ್, ಮಯಾಂಕ್ ಅಗರ್ವಾಲ್, ಪ್ರಸಿದ್ಧ್ ಕೃಷ್ಣ, ದೇವದತ್ ಪಡಿಕ್ಕಲ್, ಎಲ್.ಆರ್.ಚೇತನ್, ಮ್ಯಾಕ್ನೈಲ್ ನೊರೊನ್ಹಾ, ಶ್ರೇಯಸ್ ಗೋಪಾಲ್, ಕೆ.ಎಲ್. ಶ್ರೀಜಿತ್, ಅಭಿನವ್ ಮನೋಹರ್, ಮನೋಜ್ ಭಾಂಡಗೆ, ಹಾರ್ದಿಕ್ ರಾಜ್, ಕೌಶಿಕ್.ವಿ, ವಿದ್ಯಾಧರ್ ಪಾಟೀಲ್, ಶುಭಾಂಗ್ ಹೆಗ್ಡೆ, ಅಭಿಲಾಷ್ ಶೆಟ್ಟಿ, ಸ್ಮರಣ್.ಆರ್, ಲವನೀತ್ ಸಿಸೋಡಿಯಾ, ವೈಶಾಕ್.ವಿ, ಮನ್ವಂತ್ ಕುಮಾರ್, ಯಶೋವರ್ಧನ್ ಪರಂತಾಪ್, ಪ್ರವೀಣ್ ದುಬೆ, ಎಂ.ವೆಂಕಟೇಶ್, ನಿಕಿನ್ ಜೋಸ್, ಅನೀಶ್.ಕೆ.ವಿ, ಕೆ.ಶಶಿಕುಮಾರ್, ಪಾರಸ್ ಗುರ್ಬೌಕ್ಸ್ ಆರ್ಯ, ಶಿಖರ್ ಶೆಟ್ಟಿ, ಕಿಶನ್.ಎಸ್.ಬೆದರೆ, ಹರ್ಷಿಲ್ ಧರ್ಮಾನಿ, ವಿದ್ವತ್ ಕಾವೇರಪ್ಪ, ಕೃತಿಕ್ ಕೃಷ್ಣ ಇವರು ಸಂಭಾವ್ಯ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದ ಪಟುಗಳಾಗಿದ್ದಾರೆ.

ವಿಜಯ್ ಹಜಾರೆ ಟ್ರೋಫಿಯ ಸಿ ಗ್ರೂಪ್‌ನಲ್ಲಿರುವ ಕರ್ನಾಟಕ ತಂಡ ಡಿಸೆಂಬರ್ 21ರಂದು ಅಹಮದಾಬಾದ್‌ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಮೊದಲ ಎದುರಾಳಿಯಾಗಿ ಮುಂಬೈ ತಂಡವನ್ನ ಎದುರಿಸಲಿದೆ.

ಇದನ್ನೂ ಓದಿ: ಭಾರತ-ಆಸ್ಟ್ರೇಲಿಯಾ ಟೆಸ್ಟ್: ಅಭ್ಯಾಸದ ವೇಳೆ ಟೀಂ ಇಂಡಿಯಾ ಸ್ಟಾರ್​ ಆಟಗಾರನಿಗೆ ಗಾಯ

ABOUT THE AUTHOR

...view details