Woolen Clothes Washing Tips:ಎಲ್ಲೆಡೆ ಚಳಿಯ ತೀವ್ರತೆ ಕ್ರಮೇಣ ಹೆಚ್ಚಾಗುತ್ತಿದೆ. ಚಳಿಯಿಂದ ರಕ್ಷಿಸಿಕೊಳ್ಳಲು ಸ್ವೆಟರ್, ಮಫ್ಲರ್‌ಗಳು ಹಾಗೂ ಇತರ ಉಣ್ಣೆಯ ಬಟ್ಟೆಗಳನ್ನು ವಾರ್ಡ್‌ರೋಬ್‌ನಿಂದ ಹೊರತೆಗೆಯಬೇಕಾಗಿದೆ. ಇದಕ್ಕಾಗಿ ಉಣ್ಣೆಯ ಬಟ್ಟೆಗಳನ್ನು ಬಳಸುವಾಗ ನಾವು ಅವುಗಳನ್ನು ತೊಳೆಯುತ್ತೇವೆ. ಈ ಎಲ್ಲಾ ಬಟ್ಟೆಗಳನ್ನು ಒಟ್ಟಿಗೆ ಶುಚಿಗೊಳಿಸದೆ ಪ್ರತ್ಯೇಕವಾಗಿ ಸ್ವಚ್ಛಗೊಳಿಸಬೇಕಾಗುತ್ತದೆ ಎಂದು ತಜ್ಞರು ತಿಳಿಸುತ್ತಾರೆ. ತೊಳೆಯುವ ವಿಧಾನ ಕೂಡ ವಿಭಿನ್ನವಾಗಿದೆ.
ಬಿಸಿಲಿನಲ್ಲಿ ಒಣಗಿಸಬೇಕು:ಇತರ ಬಟ್ಟೆಗಳಿಗೆ ಹೋಲಿಸಿದರೆ ಉಣ್ಣೆಯ ಬಟ್ಟೆಗಳನ್ನು ಹೆಚ್ಚು ಸಲ ಸ್ವಚ್ಛಗೊಳಿಸುವ ಅಗತ್ಯವಿಲ್ಲ. ಆದರೆ, ಇದನ್ನು ಬಳಸದೇ ಬಹಳ ದಿನಗಳ ಕಾಲ ಪಕ್ಕದಲ್ಲಿಟ್ಟರೆ ಕೆಟ್ಟ ವಾಸನೆ ಬರುತ್ತದೆ. ಆದರೆ, ನಾವು ಉಣ್ಣೆಯ ಬಟ್ಟೆಗಳನ್ನು ಶೇಖರಿಸಿ ಇಡುವ ಮುನ್ನ ಒಗೆಯುವುದರಿಂದ ಒಮ್ಮೆ ಬಿಸಿಲಿನಲ್ಲಿ ಇಟ್ಟರೆ ಸಾಕು. ಇವುಗಳಲ್ಲಿ ರೋಗಾಣುಗಳಿದ್ದರೆ ಅವೂ ಕೂಡಾ ನಾಶವಾಗುತ್ತವೆ ಎಂದು ತಜ್ಞರು ಹೇಳುತ್ತಾರೆ.
ಉಣ್ಣೆಯ ಬಟ್ಟೆಗಳನ್ನು ಪ್ರತ್ಯೇಕವಾಗಿ ತೊಳೆಯಿರಿ:ಇತರ ಬಟ್ಟೆಗಳೊಂದಿಗೆ ಉಣ್ಣೆಯ ಬಟ್ಟೆಗಳನ್ನು ಒಗೆಯುವುದು ಸರಿಯಲ್ಲ. ಏಕೆಂದರೆ ಅವು ಸರಿಯಾಗಿ ಸ್ವಚ್ಛವಾಗುವುದಿಲ್ಲ. ಅದಕ್ಕಾಗಿಯೇ ಅವುಗಳನ್ನು ಪ್ರತ್ಯೇಕವಾಗಿ ಸ್ವಚ್ಛಗೊಳಿಸಬೇಕಾಗುತ್ತದೆ. ಇದಕ್ಕಾಗಿ ಉಣ್ಣೆಯ ಬಟ್ಟೆಗಳನ್ನು ಸಂಪೂರ್ಣವಾಗಿ ತಣ್ಣೀರಿನಲ್ಲಿ ನೆನೆಸಿಡಬೇಕಾಗುತ್ತದೆ. ಕೆಲವರು ಉಣ್ಣೆಯ ಬಟ್ಟೆಗಳನ್ನು ಡಿಟರ್ಜೆಂಟ್ ಪೌಡರ್ನಲ್ಲಿ ಗಂಟೆಗಟ್ಟಲೆ ನೆನೆಸಿಡುತ್ತಾರೆ. ಆದರೆ, ಈ ರೀತಿ ಮಾಡುವುದರಿಂದ ಉಣ್ಣೆಯು ಬೇಗನೆ ಕೆಡುತ್ತದೆ. ಡಿಟರ್ಜೆಂಟ್ ಪೌಡರ್ ಸೇರಿಸದೆ ನೀರಿನಲ್ಲಿ ಸ್ವಲ್ಪ ಸಮಯದವರೆಗೆ ನೆನೆಸಲು ತಜ್ಞರು ಸೂಚಿಸುತ್ತಾರೆ.
ಜೋರಾಗಿ ಉಜ್ಜಬೇಡಿ:ಉಣ್ಣೆಯ ಬಟ್ಟೆಗಳ ಮೇಲೆ ಕಲೆಗಳಿದ್ದರೆ, ಕೆಲವರು ಅದನ್ನು ಜೋರಾಗಿ ಇಲ್ಲವೇ ಬಲ ಹಾಕಿ ಉಜ್ಜುತ್ತಾರೆ. ಕಲೆಗಳನ್ನು ಹೋಗಲಾಡಿಸಲು ಉಣ್ಣೆಯ ಬಟ್ಟೆಗಳನ್ನು ಸಂಪೂರ್ಣವಾಗಿ ನೆನೆಸಿದ ನಂತರ, ಉಪ್ಪು, ಪಾತ್ರೆ ತೊಳೆಯುವ ದ್ರವ, ವಿನೆಗರ್ ಸೇರಿಸಿ. ಇವುಗಳನ್ನು ಬಳಸಿ ಉಜ್ಜಿದರೆ ಸಾಕು. ಇಲ್ಲವೇ ಒಮ್ಮೆ ನೀರಿನಲ್ಲಿ ನೆನೆಸಿಟ್ಟು ಬಳಿಕ ನಿಧಾನವಾಗಿ ಉಜ್ಜಿದರೆ ಸಾಕು ಎಂದು ತಜ್ಞರು ಸಲಹೆ ನೀಡುತ್ತಾರೆ.