ಸುಡಾನ್(ಈಶಾನ್ಯ ಆಫ್ರಿಕಾ):ಒಮ್‌ದುರ್ಮನ್ ನಗರದಲ್ಲಿ ಮಂಗಳವಾರ ಸುಡಾನ್ ಮಿಲಿಟರಿ ವಿಮಾನ ಅಪಘಾತಗೊಂಡಿದ್ದು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 46 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ 2 ದಶಕಗಳಲ್ಲಿ ಈಶಾನ್ಯ ಆಫ್ರಿಕನ್ ರಾಷ್ಟ್ರದಲ್ಲಿ ಸಂಭವಿಸಿದ ಅತ್ಯಂತ ಭೀಕರ ವಿಮಾನ ಅಪಘಾತಗಳಲ್ಲಿ ಇದು ಒಂದಾಗಿದೆ.
ಆಂಟೊನೊವ್ ವಿಮಾನ ಒಮ್‌ದುರ್ಮನ್ ಜನನಿಬಿಡ ಜಿಲ್ಲೆಯ ಮೇಲೆ ಮಂಗಳವಾರ ಪತನಗೊಂಡಿತ್ತು. ಸಾವಿನ ಸಂಖ್ಯೆ ಹೊರತುಪಡಿಸಿ ಕನಿಷ್ಠ 10 ಜನರು ಗಾಯಗೊಂಡಿದ್ದಾರೆ ಖಾರ್ಟೌಮ್ ಮಾಧ್ಯಮ ಕಚೇರಿ ತಿಳಿಸಿದೆ. 19 ಜನರ ಆರಂಭಿಕ ಸಾವಿನ ಸಂಖ್ಯೆಯನ್ನು ಆರೋಗ್ಯ ಸಚಿವಾಲಯ ಒದಗಿಸಿದೆ. ರಾಜಧಾನಿ ಖಾರ್ಟೌಮ್‌ನ ಸಹೋದರಿ ನಗರವಾದ ಒಮ್ದುರ್ಮನ್ನ ಉತ್ತರಕ್ಕೆ ವಾಡಿ ಸಯೀದ್ನಾ ವಾಯುನೆಲೆಯಿಂದ ವಿಮಾನ ಹಾರುವಾಗ ಈ ಅಪಘಾತಕ್ಕೀಡಾಗಿದೆ ಎಂದು ಮಿಲಿಟರಿ ಹೇಳಿಕೆಯಲ್ಲಿ ತಿಳಿಸಿದೆ.
ಒಮ್ದುರ್ಮನ್ನ ಕರ್ರಾರಿ ಜಿಲ್ಲೆಯಲ್ಲಿ ಹಲವಾರು ಮನೆಗಳಿಗೂ ಅಪಘಾತ ಹಾನಿಯಾಗಿದೆ ಎಂದು ಮಾಧ್ಯಮ ಕಚೇರಿ ತಿಳಿಸಿದೆ. ಅಪಘಾತದಲ್ಲಿ ಸಶಸ್ತ್ರ ಪಡೆಗಳ ಸಿಬ್ಬಂದಿ ಮತ್ತು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಮಿಲಿಟರಿ ಈ ಹಿಂದೆ ಹೇಳಿತ್ತು, ಆದರೆ, ಅಂಕಿ - ಅಂಶಗಳನ್ನು ನೀಡಿರಲಿಲ್ಲ . ಶವಗಳನ್ನು ಒಮ್ದುರ್ಮನ್ನ ಆಸ್ಪತ್ರೆಗೆ ವರ್ಗಾಯಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಮೃತರಲ್ಲಿ ಮೇಜರ್ ಜನರಲ್ ಬಹರ್ ಅಹ್ಮದ್ ಬಹರ್ ಮತ್ತು ಲೆಫ್ಟಿನೆಂಟ್ ಕರ್ನಲ್ ಅವದ್ ಅಯೌಬ್ ಸೇರಿದಂತೆ ಹಿರಿಯ ಮಿಲಿಟರಿ ಅಧಿಕಾರಿಗಳು ಮತ್ತು ವಿಮಾನ ಸಿಬ್ಬಂದಿ ಸೇರಿದ್ದಾರೆ ಎಂದು ಮಿಲಿಟರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.