ಕರ್ನಾಟಕ

karnataka

ETV Bharat / health

ಬಾಯಿಚಪ್ಪರಿಸಿ ಕೇಕ್​, ಬಿಸ್ಕೆಟ್​, ಬ್ರೇಡ್​ ತಿನ್ನುವ ಮುನ್ನ ಎಚ್ಚರ; ಯಾಕೆ ಎಂದರೆ? - processed foods may raise diabetes

ಬಾಯಿ ಚಪ್ಪರಿಸಿ ತಿನ್ನುವಂತಹ ಅಲ್ಟ್ರಾ ಸಂಸ್ಕರಿತ ಆಹಾರದಲ್ಲಿರುವ ಎಮಲ್ಸಿಫೈಯರ್‌ ಮಧುಮೇಹಕ್ಕೆ ಕಾರಣವಾಗುತ್ತದೆ.

Xantham guar gum in ultra processed foods may raise diabetes risk
Xantham guar gum in ultra processed foods may raise diabetes risk

By IANS

Published : Apr 25, 2024, 1:22 PM IST

ನವದೆಹಲಿ: ಕೇಕ್​, ಬಿಸ್ಕೆಟ್​​, ಬ್ರೇಡ್​, ಯೋಗರ್ಟ್​, ಐಸ್​ಕ್ರಿಂನಂತಹ ಅಲ್ಟ್ರಾ ಸಂಸ್ಕರಿತ ಆಹಾರಗಳನ್ನು ಬಹುತೇಕ ಮಂದಿ ಬಾಯಿ ಚಪ್ಪರಿಸಿ ತಿನ್ನುತ್ತೇವೆ. ಆದರೆ, ಇನ್ಮುಂದೆ ಈ ರೀತಿ ತಿನ್ನುವ ಮುನ್ನ ಒಮ್ಮೆ ಯೋಚಿಸಿ ಎನ್ನುತ್ತಿದೆ ಈ ಅಧ್ಯಯನದ ವರದಿ. ಕಾರಣ ಈ ಆಹಾರಗಳಲ್ಲಿ ಕ್ಸಾಂಥಮ್ ಮತ್ತು ಗೌರ್ ಗಮ್‌ನಂತಹ ಎಮಲ್ಸಿಫೈಯರ್‌ಗಳಲ್ಲಿ ಸಮೃದ್ಧವಾಗಿವೆ. ಇದು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದೆ.

ಎಮಲ್ಸಿಫೈಯರ್​​ ಸಾಮಾನ್ಯವಾಗಿ ಹಲವು ವಸ್ತುಗಳಿಗೆ ಸೇರ್ಪಡೆ ಮಾಡಲಾಗುತ್ತದೆ. ಇದನ್ನು ಹೆಚ್ಚಾಗಿ ಸಂಸ್ಕರಿತ ಮತ್ತು ಪ್ಯಾಕೇಜ್ಡ್​​​ ಫುಡ್​ಗಳು ಅದರ ಅಂದ ಹೆಚ್ಚಿಸುವ ಸಲುವಾಗಿ ಜೊತೆಗೆ ಗ್ರಾಹಕರ ಬಾಯಿ ಚಪ್ಪರಿಸುವಂತೆ ಮಾಡಲು ಹಾಗೂ ಅದರ ವಿನ್ಯಾಸವನ್ನು ಹೆಚ್ಚಿಸಲು ಬಳಕೆ ಮಾಡುತ್ತಾರೆ.

ಈ ಕುರಿತು ಲ್ಯಾನ್ಸೆಟ್​ ಡಯಾಬೀಟಿಸ್​ ಅಂಡ್​ ಎಂಡೊಕ್ರಿನೊಲಾಜಿಯಲ್ಲಿ ವರದಿಯೊಂದು ಪ್ರಕಟವಾಗಿದೆ. ಎಮಲ್ಸಿಫೈಯರ್​​ ಮೊನೊ ಮತ್ತು ಫ್ಯಾಟಿ ಆಸಿಡ್​ನ ಡಿಗ್ಲೆಸೆರಿಡಸ್, ಲೆಸಿಥಿನ್‌ಗಳು, ಫಾಸ್ಫೇಟ್‌ಗಳು, ಸೆಲ್ಯುಲೋಸ್‌ಗಳು, ಗಮ್ಸ್​ ಮತ್ತು ಪೆಕ್ಟಿನ್​ ಮೊಮೊ ಮತ್ತು ಡಿಗ್ಲಿಸರೈಡ್​ಗಳನ್ನು ಹೊಂದಿದ್ದು, ಇದು ಟೈಪ್​ 2 ಮಧುಮೇಹ ಅಭಿವೃದ್ಧಿ ಮಾಡುತ್ತದೆ.

ಅಷ್ಟೇ ಅಲ್ಲ, ಈ ಹಿಂದಿನ ಅಧ್ಯಯನದಲ್ಲಿ ಈ ಎಮಲ್ಸಿಫೈಯರ್​ಗಳು ಸ್ತನ ಮತ್ತು ಪ್ರಾಸ್ಟೇಟ್​ ಕ್ಯಾನ್ಸರ್​ ಅಭಿವೃದ್ಧಿ ಮಾಡುತ್ತದೆ ಎಂದು ಕೂಡ ತಿಳಿಸಲಾಗಿತ್ತು.

ಫ್ರಾನ್ಸ್​​ನ ಐಎನ್​ಆರ್​ಎಇ (ಕೃಷಿ, ಆಹಾರ ಮತ್ತು ಪರಿಸರ ರಾಷ್ಟ್ರೀಯ ಸಂಶೋಧನಾ ಸಂಸ್ಥೆ) ಅಧ್ಯಯನ ಮಾಡಿದಂತೆ ಎಮಲ್ಸಿಫೈಯರ್​​​ ಆಹಾರಗಳನ್ನು ಸೇವನೆಯನ್ನು 14 ವರ್ಷಗಳ ಅವಧಿಯ ಫಾಲೋ ಅಪ್​ನಲ್ಲಿ ಗಮನಿಸಿದಾಗ ಇದು ಟೈಪ್​ 2 ಮಧುಮೇಹಕ್ಕೆ ಕಾರಣವಾಗಿರುವುದು ಕಂಡು ಬಂದಿದೆ. ಈ ಅಧ್ಯಯನವನ್ನು 2009ರಿಂದ 2023ರವರೆಗೆ ನಡೆಸಲಾಗಿದ್ದು, 1,04,139 ವಯಸ್ಕರು ಭಾಗಿಯಾಗಿದ್ದರು. ಈ ವೇಳೆ, 1,056 ಪ್ರಕರಣದಲ್ಲಿ ದೀರ್ಘವಾಧಿಯ ಎಮಲ್ಸಿಫೈಯರ್​ ಬಳಕೆಯಿಂದ ಮಧುಮೇಹ ಕಂಡು ಬಂದಿದೆ.​

ಈ ಸಂಶೋಧನಾ ಫಲಿತಾಂಶಗಳು ಏಕ ಗಮನ ಅಧ್ಯಯನಗಳಾಗಿದೆ. ಇದರ ನಡುವಿನ ಸಾಮಾನ್ಯ ಸಂಬಂಧವನ್ನು ಸ್ಥಾಪನೆ ಮಾಡಲು ಸಾಧ್ಯವಿಲ್ಲ. ಈ ಆಹಾರ ಸಂಯೋಜಕ ಎಮಲ್ಸಿಫೈಯರ್‌ಗಳು ಮತ್ತು ಟೈಪ್ 2 ಡಯಾಬಿಟಿಸ್‌ನ ಆಕ್ರಮಣವನ್ನು ಸಂಪರ್ಕಿಸುವ ಕಾರ್ಯವಿಧಾನಗಳನ್ನು ಮತ್ತಷ್ಟು ತಿಳಿಯುವ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ವಿಶ್ವಾದ್ಯಂತ ಇತರ ಸಾಂಕ್ರಾಮಿಕ ರೋಗಶಾಸ್ತ್ರೀಯ ಅಧ್ಯಯನಗಳಲ್ಲಿ ಮತ್ತೊಮ್ಮೆ ನಡೆಸಬೇಕಿದೆ. ಮಧ್ಯಸ್ಥಿಕೆಯ ಪ್ರಾಯೋಗಿಕ ಅಧ್ಯಯನಗಳೊಂದಿಗೆ ಪೂರಕವಾಗಿದೆ ಎಂದು ಅಧ್ಯಯನದ ಪ್ರಮುಖ ಲೇಖಕರಾದ ಐಎನ್​ಆರ್​ಎಇ ಜೂನಿಯರ್​ ಪ್ರೊಫೆಸರ್​​ ಮಥಿಲ್ಡೆ ತೊವೀರ್​ ತಿಳಿಸಿದ್ದಾರೆ.

ಆದಾಗ್ಯೂ ನಮ್ಮ ಸಂಶೋಧನೆಯು ಆಹಾರ ಉದ್ಯಮಗಳಲ್ಲಿ ಇಂತಹ ಸೇರ್ಪಡೆಗಳ ಬಳಕೆ ಕುರಿತು ನಿಯಂತ್ರಣ ಮತ್ತು ಮರು ಮೌಲ್ಯಮಾಪದನ ಚರ್ಚೆಗೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಮಧುಮೇಹಿಗಳಲ್ಲಿ ತಕ್ಷಣಕ್ಕೆ ಸಕ್ಕರೆ ಮಟ್ಟ ಹೆಚ್ಚಾದರೆ ಏನಾಗುತ್ತೆ; ಇಲ್ಲಿದೆ ತಜ್ಞರ ಮಾತು

ABOUT THE AUTHOR

...view details