How Much Salt Intake per Day:ಮನೆ ಮತ್ತು ಹೋಟೆಲ್ನಲ್ಲಿ ಯಾವುದೇ ಖಾದ್ಯ ಸಿದ್ಧಪಡಿಸಿದರೂ ಅದರಲ್ಲಿ ಅಗತ್ಯಕ್ಕೆ ತಕ್ಕಷ್ಟು ಉಪ್ಪು ಇಲ್ಲದಿದ್ದರೆ ರುಚಿ ಬರುವುದಿಲ್ಲ. ಅತಿಹೆಚ್ಚು ಉಪ್ಪು ಸೇವಿಸುವುದರಿಂದ ಆರೋಗ್ಯಕ್ಕೂ ಕೂಡ ಒಳ್ಳೆಯದಲ್ಲ. ಉಪ್ಪಿನಲ್ಲಿ ಹೆಚ್ಚುವರಿ ಸೋಡಿಯಂ ಹೃದಯ, ಕಿಡ್ನಿ ಕಾಯಿಲೆ ಮತ್ತು ಪಾರ್ಶ್ವವಾಯು ಅಪಾಯ ಹೆಚ್ಚಿಸುತ್ತದೆ ಎಂದು ತಜ್ಞರು ತಿಳಿಸುತ್ತಾರೆ.
ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ, ಸೋಡಿಯಂ ಸೇವನೆಯು ದಿನಕ್ಕೆ 2 ಗ್ರಾಂ ಮೀರಬಾರದು. ನೀವು ಉಪ್ಪನ್ನು ಬಳಸಬೇಕಾದರೆ ಪೊಟ್ಯಾಸಿಯಮ್‌ನೊಂದಿಗೆ ಕಡಿಮೆ ಸೋಡಿಯಂ ಉಪ್ಪು ಆಯ್ಕೆ ಮಾಡಲು ಇತ್ತೀಚೆಗೆ ಡಬ್ಲ್ಯೂಎಚ್ಒನಿಂದ ಬಿಡುಗಡೆಯಾದ ಮಾರ್ಗಸೂಚಿಗಳು ತಿಳಿಸುತ್ತವೆ. ಆದ್ರೆ, ಈ ಮಾರ್ಗಸೂಚಿಗಳು ಗರ್ಭಿಣಿಯರು, ಮಕ್ಕಳು ಮತ್ತು ಮೂತ್ರಪಿಂಡ ಕಾಯಿಲೆ ಪೀಡಿತರಿಗೆ ಅನ್ವಯಿಸುವುದಿಲ್ಲ. ಈ ಬಗ್ಗೆ ವೈದ್ಯಕೀಯ ತಜ್ಞರು ಏನು ತಿಳಿಸುತ್ತಾರೆ ಎಂದು ತಿಳಿಯೋಣ. (ಸಂಶೋಧನಾ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ).
ವಿಶ್ವದಾದ್ಯಂತ ಪ್ರತಿವರ್ಷ 80 ಲಕ್ಷ ಸಾವಿನ ಪ್ರಕರಣಗಳು ಅಪೌಷ್ಟಿಕತೆಯಿಂದ ಉಂಟಾಗುತ್ತವೆ. ಇದರಲ್ಲಿ 19 ಲಕ್ಷ ಸಾವಿನ ಪ್ರಕರಣಗಳು ಅತಿಯಾದ ಉಪ್ಪು (ಸೋಡಿಯಂ) ಸೇವನೆಯಿಂದ ಸಂಭವಿಸುತ್ತಿವೆ. ಅದಕ್ಕಾಗಿಯೇ ಸೋಡಿಯಂ ಸೇವನೆ ಕಡಿಮೆ ಮಾಡುವುದರಿಂದ ರಕ್ತದೊತ್ತಡ ಕಡಿಮೆ ಮಾಡಬಹುದು. ಕಡಿಮೆ ಸೋಡಿಯಂ ಸೇವನೆಯಿಂದ ಹೃದ್ರೋಗ ಮತ್ತು ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯಂತಹ ಸಾಂಕ್ರಾಮಿಕವಲ್ಲದ ಕಾಯಿಲೆಗಳ ಅಪಾಯವು ಕಡಿಮೆಯಾಗುತ್ತದೆ. ಜೊತೆಗೆ ಕರುಳಿನ ಕ್ಯಾನ್ಸರ್ ಸೇರಿದಂತೆ ಇತರ ಕಾಯಿಲೆಗಳ ಅಪಾಯವೂ ಇರುವುದಿಲ್ಲ. ಸೋಡಿಯಂ ಕ್ಲೋರೈಡ್ ಉಪ್ಪಿನ ಬದಲಿಗೆ ಪೊಟ್ಯಾಸಿಯಮ್ ಕ್ಲೋರೈಡ್ ಉಪ್ಪನ್ನು ಬಳಸುವುದರಿಂದ ರಕ್ತದಲ್ಲಿನ ಸೋಡಿಯಂ ಮಟ್ಟವನ್ನು ಕಡಿಮೆ ಮಾಡಬಹುದು. ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡುವ ಪೊಟ್ಯಾಸಿಯಮ್ ಪ್ರಮಾಣವು ಹೆಚ್ಚಾಗುತ್ತದೆ ಎಂದು ತಜ್ಞರು ವಿವರಿಸುತ್ತಾರೆ.
ವಿಶ್ವ ಆರೋಗ್ಯ ಸಂಸ್ಥೆಯು ನಮ್ಮ ದೇಶದಲ್ಲಿ ಹಾಗೂ ವಿಶ್ವದಾದ್ಯಂತ 26 ಪ್ರಾಯೋಗಿಕ ಪರೀಕ್ಷೆಗಳನ್ನು ವಿಶ್ಲೇಷಿಸಿದ ತಜ್ಞರ ಅಭಿಪ್ರಾಯದ ಆಧಾರದ ಮೇಲೆ ಇತ್ತೀಚಿನ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದೆ. ಈ ಪರೀಕ್ಷೆಗಳು ಕಡಿಮೆ ಸೋಡಿಯಂ ಉಪ್ಪಿನೊಂದಿಗೆ ಸಂಕೋಚನದ ರಕ್ತದೊತ್ತಡವನ್ನು 4.76 mmHg ಮತ್ತು ಡಯಾಸ್ಟೊಲಿಕ್ ರಕ್ತದೊತ್ತಡವು 2.43 mmHg ಗಿಂತ ಕಡಿಮೆಯಾಗಿದೆ ಎಂದು ಬಹಿರಂಗಪಡಿಸಿತು. ಮಾರಣಾಂತಿಕವಲ್ಲದ ಪಾರ್ಶ್ವವಾಯು ಅಪಾಯವನ್ನು ಶೇ. 10ರಷ್ಟು ಹಾಗೂ ಹೃದ್ರೋಗದ ಸಾವುಗಳು ಶೇ.23 ರಷ್ಟು ಕಡಿಮೆಯಾಗಿದೆ. ಪೊಟ್ಯಾಸಿಯಮ್ ಕ್ಲೋರೈಡ್ ಉಪ್ಪು ರಕ್ತದಲ್ಲಿನ ಪೊಟ್ಯಾಸಿಯಮ್ ಮಟ್ಟವನ್ನು ಹೆಚ್ಚಿಸುತ್ತದೆ ಎಂಬುದು ಕಂಡುಬಂದಿದೆ. ಒಟ್ಟಾರೆಯಾಗಿ ಸೋಡಿಯಂ ಸೇವನೆ ಕಡಿಮೆ ಮಾಡುವುದು ಅತ್ಯಂತ ಮುಖ್ಯವಾದ ವಿಷಯವಾಗಿದೆ. ಆದರೆ, ಇದು ಸಾಧ್ಯವಾಗದಿದ್ದಾಗ ಕಡಿಮೆ ಸೋಡಿಯಂ ಉಪ್ಪನ್ನು ಬಳಸುವುದು ಒಳ್ಳೆಯದು.
ಉಪ್ಪಿನಲ್ಲಿರುವ ಸೋಡಿಯಂ ಕ್ಲೋರೈಡ್ ರಕ್ತದೊತ್ತಡದ ಮೇಲೆ ಗಮನಾರ್ಹ ಪರಿಣಾಮ ಉಂಟು ಮಾಡುತ್ತದೆ. ರಕ್ತದಲ್ಲಿ ಹೆಚ್ಚಿದ ಸೋಡಿಯಂ ಮಟ್ಟವು ರಕ್ತನಾಳಗಳನ್ನು ಹೆಚ್ಚು ಸಂಕುಚಿತಗೊಳಿಸುತ್ತದೆ. ಮತ್ತೊಂದೆಡೆ, ರಕ್ತದಲ್ಲಿನ ದ್ರವದ ಶೇಕಡಾವಾರು ಪ್ರಮಾಣವು ಹೆಚ್ಚಾಗುತ್ತದೆ ಹಾಗೂ ರಕ್ತದ ಪ್ರಮಾಣವೂ ಹೆಚ್ಚಾಗುತ್ತದೆ. ರಕ್ತನಾಳಗಳ ಸಾಮರ್ಥ್ಯವನ್ನು ನಿರ್ಧರಿಸಲಾಗುತ್ತದೆ. ಈ ಸಂಕೋಚನಗಳು ಹಾಗೂ ರಕ್ತದ ಪ್ರಮಾಣದಲ್ಲಿ ಹೆಚ್ಚಳದಿಂದ ರಕ್ತದೊತ್ತಡ ಹೆಚ್ಚಾಗುತ್ತದೆ. ಇದು ಹೃದಯದ ಮೇಲೆ ಮುಖ್ಯವಾದ ಪ್ರಭಾವ ಬೀರುತ್ತದೆ. ರಕ್ತದೊತ್ತಡ ಹೆಚ್ಚಾದಾಗ ಅದು ಹೃದಯದ ಮೇಲೆ ಹೆಚ್ಚು ಒತ್ತಡ ಬೀರುತ್ತದೆ. ಇದು ಹೆಚ್ಚು ಬಲವಾಗಿ ಸಂಕುಚಿತಗೊಳ್ಳುವ ಮೂಲಕ ರಕ್ತವನ್ನು ಪಂಪ್ ಮಾಡಲು ಕಾರಣವಾಗುತ್ತದೆ.
-ಡಾ.ಎ.ವಿ. ಆಂಜನೇಯಲು, ಹೃದ್ರೋಗ ತಜ್ಞ