ಕರ್ನಾಟಕ

karnataka

ETV Bharat / health

ಮಕ್ಕಳು ಊಟ ಮಾಡುವಾಗ ಮಾತ್ರವೇ ಮೊಬೈಲ್​ ನೋಡಿದರೂ ಕಣ್ಣಿಗೆ ಅಪಾಯ: ವೈದ್ಯರು - Habitual smartphone

ಮಕ್ಕಳು ಯಥೇಚ್ಛವಾಗಿ ಮೊಬೈಲ್​ ನೋಡುವುದರ ಪರಿಣಾಮದ ಕುರಿತು ವೈದ್ಯರು ತಿಳಿಸಿದ್ದಾರೆ.

Habitual smartphone use contributes to poor health
Habitual smartphone use contributes to poor health

By ETV Bharat Karnataka Team

Published : Mar 9, 2024, 4:47 PM IST

ನವದೆಹಲಿ: 10 ವರ್ಷದೊಳಗಿನ ಮಕ್ಕಳು ಸ್ಮಾರ್ಟ್​ಫೋನ್​ಗಳ ಚಟಕ್ಕೆ ಒಳಗಾಗುವುದರಿಂದ ಅವರ ಕಣ್ಣಿನ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ. ಅಷ್ಟೇ ಅಲ್ಲದೆ, ಅತಿ ಹೆಚ್ಚಿನ ಸಾಧನದ ಬಳಕೆ ಅವರ ದೈಹಿಕ ಆರೋಗ್ಯ ಮತ್ತು ನಡುವಳಿಕೆ ಬದಲಾವಣೆಗೆ ಕಾರಣವಾಗಲಿದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿ ಅನುಸಾರ, ಐದು ವರ್ಷದೊಳಗಿನ ಮಕ್ಕಳು ಅತಿ ಕಡಿಮೆ ಸಮಯವನ್ನು ಸ್ಕೀನಿಂಗ್​ನಲ್ಲಿ ಕಳೆಯಬೇಕು ಎಂದಿದೆ. ವಿಶ್ವ ಸಂಸ್ಥೆಯ ಆರೋಗ್ಯ ಮಂಡಳಿ ಶಿಫಾರಸು ಮಾಡುವಂತೆ 1 ವರ್ಷದೊಳಗಿನ ಮಕ್ಕಳಿಗೆ ಸ್ಕ್ರೀನ್​ ತೋರಿಸಬಾರದು. 2 ವರ್ಷದ ಮಕ್ಕಳಿಗೆ ದಿನಕ್ಕೆ ಅರ್ಧ ಗಂಟೆಗಿಂತ ಹೆಚ್ಚಿನ ಸಮಯ ಮೊಬೈಲ್​ ನೀಡಬಾರದು ಎಂದು ಸಲಹೆ ನೀಡಿದೆ. ಆದಾಗ್ಯೂ, ಒಂದು ವರ್ಷದೊಳಗಿನ ಮಕ್ಕಳಿಗೂ ಪೋಷಕರು ಮೊಬೈಲ್ ನೀಡುತ್ತಿದ್ದಾರೆ ಎಂದು ಗುರುಗ್ರಾಮ್​ನ ಮೆದಾಂತ್​ ದಿ ಮೆಡಿಸಿಟಿಯ ಮಕ್ಕಳ ತಜ್ಞ ಡಾ ರಾಜೀವ್​ ಉತ್ತಮ್​ ತಿಳಿಸಿದ್ದಾರೆ.

ಮೊಬೈಲ್​ ವೀಕ್ಷಣೆಯಿಂದ ಅನೇಕ ಸಮಸ್ಯೆಗಳು:ಅಧಿಕ ಮೊಬೈಲ್​​ ವೀಕ್ಷಣೆ ಮಾಡುವ ಮಕ್ಕಳಲ್ಲಿ ಅತಿಸಾರ, ಜ್ವರ ಮತ್ತು ಇತರ ಆರೋಗ್ಯ ಸಮಸ್ಯೆಗಳು ಕಂಡು ಬಂದಿದೆ. ಅನೇಕ ಅಧ್ಯಯನಗಳು ಕೂಡ ಸ್ಮಾರ್ಟ್​​ ಫೋನ್​ಗಳು ಮಕ್ಕಳ ಕಣ್ಣಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಮಕ್ಕಳು ದೀರ್ಘಕಾಲದ ಮೊಬೈಲ್​ ಬಳಕೆ ಅವರಲ್ಲಿ ದೃಷ್ಟಿ ದೋಷ ಮತ್ತು ಶುಷ್ಕತೆಗೆ ಕಾರಣವಾಗುತ್ತದೆ ಎಂದಿದ್ದಾರೆ. ಮಕ್ಕಳು ತುಂಬಾ ಹತ್ತಿರದಲ್ಲಿ ಮೊಬೈಲ್​ ವೀಕ್ಷಣೆ ಮಾಡುವುದರಿಂದ ಹೆಚ್ಚಿನ ರೇಡಿಯೇಷನ್​ ಆಗುತ್ತದೆ ಎಂದು ದ್ವಾರಕಾದ ಮಣಿಪಾಲ್​ ಆಸ್ಪತ್ರೆಯ ಮಕ್ಕಳ ತಜ್ಞ ಡಾ ವಿಕಾಸ್​​ ತನೇಜಾ ತಿಳಿಸಿದ್ದಾರೆ.

ಮಕ್ಕಳಲ್ಲಿ ಅಧಿಕ ಕಣ್ಣಿನ ಬಳಕಲಿಕೆ ಕಾಣಬಹುದಾಗಿದೆ. ಇದು ಅವರಲ್ಲಿ ಕೆಂಪಾಗುವಿಕೆ ಮತ್ತು ತುರಿಕೆಗೆ ಕಾರಣವಾಗುತ್ತದೆ. ಇದರಿಂದ ಪದೇ ಪದೆ ಕಣ್ಣನ್ನು ಉಜ್ಜುವುದು. ನೀರು ಬರುವಿಕೆ ಕಾರಣವಾಗುತ್ತದೆ. ಈ ಕಣ್ಣಿನ ಒತ್ತಡ ತಲೆನೋವು ಮತ್ತು ನಿದ್ರೆಯಲ್ಲಿ ಸಮಸ್ಯೆಗೆ ಕಾಣವಾಗುತ್ತದೆ. ಅಧಿಕ ಮೊಬೈಲ್​ ವೀಕ್ಷಣೆ ಕಣ್ಣಿನ ಸ್ನಾಯುವಿನ ಮೇಲೆ ಪರಿಣಅಮ ಬೀರಲಿದೆ ಎಂದಿದ್ದಾರೆ.

ನಿದ್ದೆ ನಷ್ಟ ಆತಂಕ ಮತ್ತು ಖಿನ್ನತೆಗೆ ಕಾರಣವಾಗುತ್ತೆ:ನಿದ್ರೆಯಲ್ಲಿನ ನಷ್ಟವೂ ಆತಂಕ ಮತ್ತು ಖಿನ್ನತೆಗೆ ಕಾರಣವಾಗುತ್ತದೆ. ಸಾಮಾನ್ಯವಾಗಿ ಏಕಾಂಗಿಯಾಗಿರುವ ಮಕ್ಕಳಲ್ಲಿ ಕಡಿಮೆ ಆತ್ಮಸ್ಥೈರ್ಯಕ್ಕೆ ಕಾರಣವಾಗುತ್ತದೆ. ಇದು ಹೆಚ್ಚಿನ ಕಿರಿಕಿರಿಗೆ ಕಾರಣವಾಗುವುದರ ಜೊತೆಗೆ ಕ್ರೋಧ ಮತ್ತು ನಡುವಳಿಕೆಯಲ್ಲಿ ಬದಲಾವಣೆಗೆ ಕಾರಣವಾಗುತ್ತದೆ. ಅಧಿಕ ಮೊಬೈಲ್ ವೀಕ್ಷಣೆ ನೈಜ ಜಗತ್ತಿನಿಂದ ನಿಮ್ಮನ್ನು ದೂರ ಮಾಡುತ್ತದೆ. ಅದರಲ್ಲೂ ಮಕ್ಕಳಲ್ಲಿ ಇದು ವರ್ಚುಯಲ್​ ಆಟಿಸಂ ಲಕ್ಷಣಕ್ಕೆ ಕಾರಣವಾಗುತ್ತದೆ.

ಊಟದ ಸಮಯದಲ್ಲಿ ಸ್ಮಾರ್ಟ್​​ಫೋನ್​ ಬಳಕೆಯು ಕಳಪೆ ತಿನ್ನುವ ಅಭ್ಯಾಸ, ಸ್ಥೂಲಕಾಯ ಮತ್ತು ಇತರ ಆರೋಗ್ಯ ಸಮಸ್ಯೆಗಳಾದ ಅಧಿಕ ರಕ್ತದೊತ್ತಡ ಮತ್ತು ಸಕ್ಕರೆ ಮಟ್ಟದ ಮೇಲೆ ಪರಿಣಾಮ ಬೀರು ಮಕ್ಕಳಲ್ಲಿ ಪೂರ್ವ ಮಧುಮೇಹದ ಹಂತ ಬೆಳವಣಿಗೆ ಕಾರಣವಾಗುತ್ತದೆ. ಮುಖ್ಯವಾಗಿ ದೃಷ್ಟಿ ದೋಷ ಮತ್ತು ಏಕಾಗ್ರತೆ ಕೊರೆಗೆ ಇದು ಕಾರಣವಾಗುತ್ತದೆ. ​

ಮಕ್ಕಳ ಮೊಬೈಲ್​ ಗೀಳು ಬಿಡಿಸಲು ಏನು ಮಾಡಬೇಕು:ಈ ಆರೋಗ್ಯ ಸಮಸ್ಯೆ ಕಡಿಮೆ ಮಾಡಲು ಪೋಷಕರು ತಮ್ಮ ಮಕ್ಕಳೊಂದಿಗೆ ಗುಣಮಟ್ಟದ ಸಮಯ ಕಳೆಯಲು ಆದ್ಯತೆ ನೀಡಬೇಕು. ಆರೋಗ್ಯಕರ ಆಹಾರ ಪದ್ಧತಿಗೆ ಪ್ರೋತ್ಸಾಸ ನೀಡಬೇಕು. ದಿನವೊಂದಕ್ಕೆ ಮೊಬೈಲ್​ ನೋಡುವ ಸಮಯವನ್ನು ಮಿತಿಗೊಳಿಸುವಂತೆ ಹೆಚ್ಚಿನ ಆದ್ಯತೆ ನೀಡಬೇಕು. ಜೊತೆಗೆ, ಹೊರಾಂಗಣ ಚಟುವಟಿಕೆಗಳು ಮತ್ತು ಪೌಷ್ಟಿಕಾಂಶದ ಊಟಗಳೊಂದಿಗೆ ಸಮತೋಲನ ನಡೆಸುವ ಮೂಲಕ ಸಮಗ್ರ ರೀತಿಯಲ್ಲಿ ಮಕ್ಕಳ ಬೆಳವಣಿಗೆಯಲ್ಲಿ ನಿರ್ಣಾಯಕ ಕ್ರಮವಹಿಸಬಹುದು ಎಂದು ತಜ್ಞರು ಸಲಹೆ ನೀಡಿದ್ದಾರೆ( ಐಎಎನ್​ಎಸ್​)

ಇದನ್ನೂ ಓದಿ: ಭಾರತದ 12.5 ಮಿಲಿಯನ್​ ಮಕ್ಕಳಲ್ಲಿ, ಜಾಗತಿಕವಾಗಿ 8ರಲ್ಲಿ ಒಬ್ಬರಿಗೆ ಸ್ಥೂಲಕಾಯ ಸಮಸ್ಯೆ: ವರದಿ

ABOUT THE AUTHOR

...view details