ದಕ್ಷಿಣ ಚಿತ್ರರಂಗದ ಖ್ಯಾತ ನಟ ನಾಗ ಚೈತನ್ಯ ಹಾಗೂ ನಟಿ ಶೋಭಿತಾ ಧೂಳಿಪಾಲ ಜೋಡಿಯ ಅದ್ಧೂರಿ ವಿವಾಹ ಸಮಾರಂಭಕ್ಕೆ ದಿನಗಣನೆ ಆರಂಭವಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ಜೋಡಿಯ ಹಳ್ದಿ ಸಮಾರಂಭದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ವಧು-ವರ ಒಂದೇ ಸ್ಥಳದಲ್ಲಿ ನಡೆದ ಶಾಸ್ತ್ರದಲ್ಲಿ ಭಾಗಿಯಾಗಿದ್ದಾರೆ. ಕಾರ್ಯಕ್ರಮ ಅತ್ಯಂತ ಸಾಂಪ್ರದಾಯಿಕವಾಗಿ ನಡೆದಿದೆ. ಈ ಸಮಾರಂಭದಲ್ಲಿ ಕುಟುಂಬ ಸದಸ್ಯರು ಮತ್ತು ಆಪ್ತರು ಮಾತ್ರ ಭಾಗವಹಿಸಿದ್ದರು. ಸದ್ಯ ಕಾರ್ಯಕ್ರಮದ ಕೆಲ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಇದು ಲವ್ ಕಮ್ ಅರೇಂಜ್ ಮ್ಯಾರೇಜ್. ಬಹುದಿನಗಳ ಪ್ರೀತಿಗೆ ಮದುವೆ ಮದ್ರೆ ಒತ್ತಲು ನಾಗ ಚೈತನ್ಯ-ಶೋಭಿತಾ ಸಜ್ಜಾಗಿದ್ದಾರೆ. ಉಭಯ ಕುಟುಂಬದಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಡಿಸೆಂಬರ್ನಲ್ಲಿ ವಿಹಾಹ ನಡೆಯಲಿದ್ದು, ಆಗಸ್ಟ್ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅದ್ಧೂರಿ ಮದುವೆ ಸಮಾರಂಭಕ್ಕೆ ಸಿದ್ಧತೆಗಳು ನಡೆದಿದ್ದು ಫೋಟೋ, ವಿಡಿಯೋಗಳಿಗಾಗಿ ಅಭಿಮಾನಿಗಳು ಕಾತರರಾಗಿದ್ದಾರೆ. ಆದ್ರೆ ಇದು ಖಾಸಗಿ ಸಮಾರಂಭದಂತೆ ತೋರುತ್ತಿದೆ.
ಡಿಸೆಂಬರ್ 4ರಂದು ನಾಗ-ಶೋಭಿತಾ ಹಸೆಮಣೆ ಏರಲಿದ್ದಾರೆ. ಈ ವಿವಾಹ ಸಮಾರಂಭಕ್ಕೆ ಕುಟುಂಬಸ್ಥರು, ಸ್ನೇಹಿತರು ಸಾಕ್ಷಿಯಾಗಲಿದ್ದಾರೆ ಎಂದು ವರದಿಯಾಗಿತ್ತು. ಆದ್ರೆ ಜೋಡಿಯಿಂದಾಗಲಿ, ಕುಟುಂಬಸ್ಥರಿಂದಾಗಲಿ ಯಾವುದೇ ಅಧಿಕೃತ ಘೋಷಣೆ ಬಂದಿಲ್ಲ.
ಬಹಳ ಸಮಯದಿಂದ ಡೇಟಿಂಗ್ನಲ್ಲಿದ್ದ ಜೋಡಿ ಎಲ್ಲಿಯೂ ತಮ್ಮ ಪ್ರೀತಿಯನ್ನು ಬಿಟ್ಟುಕೊಟ್ಟಿರಲಿಲ್ಲ. ಆದ್ರೆ ವದಂತಿಗಳು ಮಾತ್ರ ಸಿಕ್ಕಾಪಟ್ಟೆ ಹರಡಿದ್ದವು. ವೆಕೇಶನ್ ಫೋಟೋಗಳು ಸಹ ವೈರಲ್ ಆಗಿದ್ದವು. ವದಂತಿಗಳನ್ನು ಉದ್ದೇಶಿಸಿ ಎಲ್ಲಿಯೂ ನೇರವಾಗಿ ಏನೂ ಮಾತನಾಡಿರಲಿಲ್ಲ. ಆದ್ರೆ ಇದೇ ಸಾಲಿನ ಆಗಸ್ಟ್ 8ರಂದು ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ತಮ್ಮ ಪ್ರೇಮ ಸಂಬಂಧವನ್ನು ಅಧಿಕೃತವಾಗಿ ಘೋಷಿಸಿದ್ದರು.