ನಟ ವಿಕ್ಕಿ ಕೌಶಲ್ ಮುಖ್ಯಭೂಮಿಕೆಯ ಹಿಸ್ಟಾರಿಕಲ್ ಡ್ರಾಮಾ 'ಛಾವಾ' ಬಾಕ್ಸ್ ಆಫೀಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ಮುಂದುವರಿಸಿದೆ. 13ನೇ ದಿನಗಳಲ್ಲಿ ಸಿನಿಮಾ ಭಾರತೀಯ ಮಾರುಕಟ್ಟೆಯಲ್ಲಿ 400 ಕೋಟಿ ರೂ. ಬಾಚಿಕೊಂಡಿದೆ. ಫೆಬ್ರವರಿ 14ರಂದು ಬಿಡುಗಡೆಯಾದ 'ಛಾವಾ' ದೇಶ, ವಿದೇಶಗಳಲ್ಲಿ ಯಶಸ್ಸು ಕಂಡಿದೆ. ಕಥಾವಸ್ತು, ನಟನೆ, ನಿರೂಪಣೆ ಮತ್ತು ಕ್ಯಾಮರಾ ಕೈಚಳಕದಿಂದಾಗಿ ಅಭಿಮಾನಿಗಳನ್ನು ಚಿತ್ರಮಂದಿರಗಳಿಗೆ ಸೆಳೆಯುತ್ತಿದೆ.
ಮರಾಠಾ ಕಾದಂಬರಿ ಆಧರಿಸಿದ ಚಿತ್ರವು ರಾಜ ಛತ್ರಪತಿ ಸಂಭಾಜಿ ಮಹಾರಾಜರ ಕಥೆ ಹೇಳಿದೆ. ಮೊಘಲ್ ಚಕ್ರವರ್ತಿ ಔರಂಗಜೇಬನ ವಿರುದ್ಧದ ಅವರ ಹೋರಾಟವನ್ನು ಮನೋಜ್ಞವಾಗಿ ಚಿತ್ರಿಸಿದೆ. ಚಿತ್ರಮಂದಿರಗಳಲ್ಲಿ ಫೆ.14ರಂದು ಅದ್ಧೂರಿಯಾಗಿ ತೆರೆಕಂಡಿದ್ದು, ಮೊದಲ ದಿನವೇ 31 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಈ ಕಲೆಕ್ಷನ್ ರಾಷ್ಟ್ರಪ್ರಶಸ್ತಿ ವಿಜೇತ ನಟ ವಿಕ್ಕಿ ಕೌಶಲ್ ವೃತ್ತಿಜೀವನಕ್ಕೂ ಹೊಸ ಮಾನದಂಡವನ್ನು ಸ್ಥಾಪಿಸಿತು. ಅಲ್ಲದೇ, ಮೊದಲ ದಿನವೇ ಅತಿ ಹೆಚ್ಚು ಕಲೆಕ್ಷನ್ ಮಾಡಿದ 2025ರ ಸಿನಿಮಾವಾಗಿಯೂ ಹೊರಹೊಮ್ಮಿದೆ. ತೆರೆ ಕಂಡ ಮೊದಲ ವಾರದಲ್ಲಿ 219.25 ಕೋಟಿ ರೂ. ವ್ಯವಹಾರ ನಡೆಸಿದೆ.
ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಪ್ರಕಾರ, ಛಾವಾ ಮಂಗಳವಾರ ಅಂದರೆ 12ನೇ ದಿನ 18.5 ಕೋಟಿ ರೂ. ಗಳಿಸಿತ್ತು. ಕಳೆದ ದಿನ ಬುಧವಾರ ತನ್ನ 13ನೇ ದಿನದಂದು ಅಂದಾಜು 23 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಮಹಾಶಿವರಾತ್ರಿಯ ರಜೆ ಗಳಿಕೆ ಏರಿಕೆ ಕಾಣಲು ನೆರವಾಯಿತು.
ದಿನ | ಭಾರತದ ನಿವ್ವಳ ಕಲೆಕ್ಷನ್ |
ದಿನ 1 | 31 ಕೋಟಿ ರೂಪಾಯಿ. |
ದಿನ 2 | 37 ಕೋಟಿ ರೂಪಾಯಿ. |
ದಿನ 3 | 48.5 ಕೋಟಿ ರೂಪಾಯಿ. |
ದಿನ 4 | 24 ಕೋಟಿ ರೂಪಾಯಿ. |
ದಿನ 5 | 25.25 ಕೋಟಿ ರೂಪಾಯಿ. |
ದಿನ 6 | 32 ಕೋಟಿ ರೂಪಾಯಿ. |
ದಿನ 7 | 21.5 ಕೋಟಿ ರೂಪಾಯಿ. |
ದಿನ 8 | 23.5 ಕೋಟಿ ರೂಪಾಯಿ. |
ದಿನ 9 | 44 ಕೋಟಿ ರೂಪಾಯಿ. |
ದಿನ 10 | 40 ಕೋಟಿ ರೂಪಾಯಿ. |
ದಿನ 11 | 18 ಕೋಟಿ ರೂಪಾಯಿ. |
ದಿನ 12 | 18.5 ಕೋಟಿ ರೂಪಾಯಿ. |
ದಿನ 13 | 23 ಕೋಟಿ ರೂಪಾಯಿ. (ಆರಂಭಿಕ ಅಂದಾಜು). |
ಒಟ್ಟು | 386 ಕೋಟಿ ರೂಪಾಯಿ. |
(ಕಲೆಕ್ಷನ್ ಡಾಟಾ ಮೂಲ: ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್)..